Advertisment

ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?

author-image
Bheemappa
Updated On
ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?
Advertisment
  • ಕೇವಲ 18 ತಿಂಗಳಲ್ಲಿ 108 ಕೆ.ಜಿ ತೂಕ ಇಳಿಸಿದ್ದ ಅನಂತ್ ಅಂಬಾನಿ
  • ಅನಂತ್ ಅಂಬಾನಿಗೆ ಇರುವ ಕಾಯಿಲೆ ಕುರಿತು ತಾಯಿ ಹೇಳಿದ್ದೇನು?
  • ಕೋಟಿ ಕೋಟಿ ಹಣ ಇದ್ದರೂ ಕೂದಲು ಉಳಿಸಿಕೊಳ್ಳಲು ಆಗಲ್ವಾ.?

ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿ ಸ್ವರ್ಗವೇ ಧರೆಗಿಳಿದಂತೆ ಮೊನ್ನೆ ಮೊನ್ನೆಯಷ್ಟೇ ಅದ್ಧೂರಿಯಾಗಿ ಬಾಲ್ಯದ ಗೆಳತಿ ರಾಧಿಕಾ​ರನ್ನ ಹಿರಿಯ ಸಮ್ಮುಖದಲ್ಲಿ ವರಿಸಿದ್ದಾರೆ. ಸದ್ಯ ಅವರು ಮದುವೆ ನಂತರದ ಕಾರ್ಯಕ್ರಮಗಳಿಗಾಗಿ ಲಂಡನ್​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದರ ಬೆನ್ನಲ್ಲೇ ನೀತಾ ಅಂಬಾನಿ ಅವರು, ಮಗನಿಗೆ ಅಸ್ತಮಾ ಇರುವುದರಿಂದ ತಲೆ ಕೂದಲು ಉದುರುತ್ತಿವೆ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: KL ರಾಹುಲ್​ ಸೇರಿ ಈ ಪ್ಲೇಯರ್ಸ್​ ಓವರ್​ಟೇಕ್​ ಮಾಡ್ತಾರಾ.. ಕಿಶನ್ ಮುಂದಿರೋ 4 ಚಾಲೆಂಜ್​ಗಳೇನು?

2016ರಲ್ಲಿ ಅನಂತ್ ಅಂಬಾನಿ ಕೇವಲ 18 ತಿಂಗಳಲ್ಲಿ 108 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಕೆಲವರಿಗೆ ಇದು ಅಚ್ಚರಿ ಮೂಡಿಸಿದರೂ, ಇಂಟರ್‌ನೆಟ್‌ನಲ್ಲಿ ಮಾತ್ರ ಇದು ಭಾರೀ ವೈರಲ್ ಆಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಮತ್ತೆ ಅನಂತ್ ತೂಕ ಹೆಚ್ಚಾಗಿತ್ತು. ಇದಕ್ಕೆ ಕಾರಣವೇನು ಎಂದು ನೆಟ್ಟಿಗರಲ್ಲಿ ಮೂಡಿತ್ತು. ಆದರೆ ಅನಂತ್ ಅಂಬಾನಿ ಈಗ ಮದುವೆಯಾಗಿದ್ದು, ಹೊಸ ಜೀವನ ನಡೆಸುತ್ತಿದ್ದಾರೆ. ಅನಂತ್ ಅವರ ಕೂದಲು ಉದುರುವಿಕೆಗೆ ಕಾರಣ ಏನು ಎಂಬುದು ಅವರ ತಾಯಿ ನೀತಾ ಅಂಬಾನಿ ಮಾತನಾಡಿದ್ದಾರೆ.

ಇದನ್ನೂ ಓದಿ: ಕೇರಳದ ಕಣ್ಣೀರು.. ಮೃತದೇಹದ ಜೊತೆ ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ, ಚಿನ್ನಾಭರಣ ಪತ್ತೆ; ಆಮೇಲೇನಾಯ್ತು?

Advertisment

publive-image

ಸಂದರ್ಶನವೊಂದರಲ್ಲಿ ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಆರೋಗ್ಯ ಕುರಿತು ಮಾತನಾಡಿದ ನೀತಾ ಅಂಬಾನಿ, ಅನಂತ್ ತೀವ್ರ ಅಸ್ತಮಾದಿಂದ ಬಳಲುತ್ತಿದ್ದು ಇದನ್ನು ನಿಯಂತ್ರಣದಲ್ಲಿ ಇಡಲು ಹೆಚ್ಚಿನ ಸ್ಟೀರಾಯ್ಡ್ಗ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಲೇ ಅವರ ತೂಕ ಹೆಚ್ಚಾಗುವ ಹಿಂದಿನ ಕಾರಣವಾಗಿದೆ. ಸ್ಟೀರಾಯ್ಡ್ಗ್‌ಗಳನ್ನು ತೆಗೆದುಕೊಳ್ಳುತ್ತಿದ್ದಂತೆ ಹೆಚ್ಚಿನ ತೂಕ ಎತ್ತಬಾರದು. ಹೀಗಾಗಿಯೇ ಅನಂತ್ ಜಿಮ್​ಗೆ ಹೋಗುವುದನ್ನ ನಿಲ್ಲಿಸಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊನೆಗೂ ಟೀಮ್ ಇಂಡಿಯಾದ ವೀಕ್​​ನೆಸ್​ ಬಟಾ ಬಯಲು.. ರೋಹಿತ್ ಪಡೆಗೆ ಕಾಡ್ತಿದೆ ಆ ಒಂದು ಸಮಸ್ಯೆ! 

ಹೆಚ್ಚಿನ ಉಬ್ಬಸದಿಂದ ಬಳಲುತ್ತಿದ್ದರಿಂದ ಸ್ಟೀರಾಯ್ಡ್​​ಗಳನ್ನ ಹೆಚ್ಚು ನೀಡಬೇಕಾಯಿತು. ಈ ಸ್ಟೀರಾಯ್ಡ್ಗ್‌ಗಳು ಸಾಮಾನ್ಯಕ್ಕಿಂತ ಹೆಚ್ಚಿನ ಹಸಿವನ್ನು ಉಂಟು ಮಾಡುವುದರಿಂದ ಏನನ್ನಾದರೂ ತಿನ್ನಬೇಕು ಎನಿಸುತ್ತದೆ. ಹಸಿವಾದಗೆಲ್ಲ ತಿನ್ನುತ್ತಾ ಇದ್ದರೇ ದೇಹದ ತೂಕ ಹೆಚ್ಚಾಗ್ತಿದೆ. ಅಸ್ತಮಾ ಇರುವ ವ್ಯಕ್ತಿಗಳು ವ್ಯಾಯಾಮ ಹಾಗೂ ಚಟುವಟಿಕೆಯಿಂದ ಇರಲು ಕಷ್ಟವಾಗುತ್ತದೆ. ದೀರ್ಘಾವಧಿವರೆಗೆ ಸ್ಟೀರಾಯ್ಡ​್‌​ಗಳನ್ನ ತೆಗೆದುಕೊಳ್ಳುವುದರಿಂದ ಹಸಿವನ್ನ ಹೆಚ್ಚಿಸಿ, ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದರ ಜೊತೆ ಅವರ ತಲೆ ಕೂದಲು ಕೂಡ ಉದುರಿ ಹೋಗುತ್ತಿವೆ ಎಂದಿದ್ದಾರೆ.

Advertisment

ಲಕ್ಷಾಂತರ ಕೋಟಿ ರೂಪಾಯಿ ಇರೋ ಅನಂತ್ ಅಂಬಾನಿಯೇ ತಲೆ ಕೂದಲಗಳನ್ನು ಉಳಿಸಿಕೊಳ್ಳೊಕೆ ಆಗಲಿಲ್ಲ. ಇನ್ನು 500, 1000 ರೂಪಾಯಿಗಳನ್ನು ಖರ್ಚು ಮಾಡಿ ನಾವು ಕೂದಲಿಗೆ ಆಯಿಲ್ ಅನ್ನು ಹಚ್ಚಿಕೊಂಡರೆ ಉದುರಿ ಹೋದ ಕೂದಲು ಮತ್ತೆ ಬರ್ತಾವಾ? ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಕಾಡುತ್ತಿರುವ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment