ಜಾಮ್​ನಗರದಿಂದ ದ್ವಾರಕಾದವರೆಗೂ ಅನಂತ್ ಅಂಬಾನಿ ಮಂತ್ರ ಪಠಣ; ಯಾವುದು? ಏನಿದರ ವಿಶೇಷ?

author-image
Gopal Kulkarni
Updated On
ಜಾಮ್​ನಗರದಿಂದ ದ್ವಾರಕಾದವರೆಗೂ ಅನಂತ್ ಅಂಬಾನಿ ಮಂತ್ರ ಪಠಣ; ಯಾವುದು? ಏನಿದರ ವಿಶೇಷ?
Advertisment
  • ಜಾಮ್​ನಗರದಿಂದ ದ್ವಾರಕದತ್ತ ಅನಂತ್ ಅಂಬಾನಿಯ ಪಾದಯಾತ್ರೆ
  • ಪಾದಯಾತ್ರೆಯುದ್ದಕ್ಕೂ ಮೊಳಗುತ್ತಿದೆ ಆ ಒಂದು ಸಿಡಿಲ ಮಂತ್ರಘೋಷ
  • ಕೃಷ್ಣನೊಂದಿಗೆ ಈ ಶಕ್ತಿಯೂ ಅನಂತ್ ಪಾದಯಾತ್ರೆಗೆ ಬಲ ತುಂಬುತ್ತಿದೆ

ಭಾರತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಜಾಮ್​ನಗರದಿಂದ ದ್ವಾರಕಾದವರೆಗೂ ತಮ್ಮ ಹುಟ್ಟು ಹಬ್ಬದ ಪ್ರಯುಕ್ತವಾಗಿ ಪಾದಯಾತ್ರೆ ನಡೆಸುತ್ತಿರುವುದು ನಿಮಗೆ ಈಗಾಗಲೇ ತಿಳಿದಿದೆ. ಸುಮಾರು 140 ಕಿಲೋ ಮೀಟರ್ ಪಾದಯಾತ್ರೆಯನ್ನು ಅನಂತ್ ಅಂಬಾನಿ ಈಗಾಗಲೇ ಶುರು ಮಾಡಿದ್ದಾರೆ. ಇದೊಂದು ಆಧ್ಯಾತ್ಮಿಕ ನಡಿಗೆ ಎಂದು ಕೂಡ ಅವರು ಸ್ಪಷ್ಟಿಕರಣ ಕೊಟ್ಟಿದ್ದಾರೆ. ಸದ್ಯ ಅವರು ಪಾದಯಾತ್ರೆ ಮಾಡುತ್ತಿರುವ ವಿಡಿಯೋಗಳೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ಸದ್ಯದರಲ್ಲಿಯೇ ಅನಂತ್ ಅಂಬಾನಿ ದ್ವಾರಕದಲ್ಲಿರುವ ಶ್ರೀಕೃಷ್ಣನ ಮಂದಿರವಾದ ದ್ವಾರಿಕಾಧೀಶನ ದೇಗುಲವನ್ನು ತಲುಪಲಿದ್ದಾರೆ.

ಇದನ್ನೂ ಓದಿ:ಅನಂತ್ ಅಂಬಾನಿ ಪಾದಯಾತ್ರೆ; ದುಪ್ಪಟ್ಟು ಬೆಲೆಗೆ ಟ್ರಕ್​ನಲ್ಲಿದ್ದ ಎಲ್ಲ ಕೋಳಿಗಳ ಖರೀದಿ..!

ಇದರ ನಡುವೆ ಈಗ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅನಂತ್ ಅಂಬಾನಿ ಬೆಳಗಿನ ವೇಳೆ ಪಾದಯಾತ್ರೆ ಮಾಡಿದರೆ ಟ್ರಾಫಿಕ್ ಸೇರಿ ಹಲವು ಸಮಸ್ಯೆಗಳು ಉಂಟಾಗುತ್ತವೆ ಎಂದು ರಾತ್ರಿ ವೇಳೆಯೇ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಯ ಮತ್ತೊಂದು ವಿಶೇಷವೆಂದರೆ.ಈ ಆಧ್ಯಾತ್ಮಿಕ ನಡಿಗೆಯ ದಾರಿಯುದ್ದಕ್ಕೂ ಅವರು ಹನುಮಾನ ಚಾಲೀಸಾ ಪಠಣೆ ಮಾಡುತ್ತಲೇ ನಡೆಯುತ್ತಿದ್ದಾರೆ. ಅವರ ಪಾದಯಾತ್ರೆಗೆ ಬೆಂಬಲವಾಗಿ ಜೊತೆಗೆ ಬರುತ್ತಿರುವ ಜನರು ಕೂಡ ಅವರೊಂದಿಗೆ ಹನುಮಾನ್ ಚಾಲೀಸಾ ಮಂತ್ರವನ್ನು ಉದ್ಘೋಷಿಸುತ್ತಾ ಸಾಗುತ್ತಿದ್ದಾರೆ.

ಇದನ್ನೂ ಓದಿ:3,800 ಕೋಟಿ ರೂಪಾಯಿ ಚಾರಿಟಿಗೆ.. ರತನ್ ಟಾಟಾ ವಿಲ್​​ನಲ್ಲಿ ಯಾರಿಗೆಷ್ಟು ಕೋಟಿ ಬರೆದಿದ್ದಾರೆ ಗೊತ್ತಾ?

ಅನಂತ್ ಅಂಬಾನಿಯವರ ಈ ಒಂದು ಪಾದಯಾತ್ರೆ ಶುರುವಾಗಿ ಈಗಾಗಲೇ ಐದು ದಿನ ಕಳೆದಿವೆ. ದಿನಕ್ಕೆ ಇಷ್ಟು ಕಿಲೋ ಮೀಟರ್ ನಡೆಯಬೇಕು ಎಂದು ಅನಂತ್​ ನಿರ್ಧಾರ ಮಾಡಿಕೊಂಡಿದ್ದಾರೆ. ಇನ್ನೂ ಮೂರು ಇಲ್ಲವೇ ನಾಲ್ಕು ದಿನಗಳಲ್ಲಿ ದ್ವಾರಕಾ ತಲುಪುವ ಉದ್ದೇಶ ಹಾಗೂ ಗುರಿಯೊಂದಿಗೆ ಅನಂತ್ ಅಂಬಾನಿ ದ್ವಾರಕಾದತ್ತ ಹೆಜ್ಜೆಯನ್ನಿಡುತ್ತಿದ್ದಾರೆ. ಈ ಇಡೀ ಪಾದಯಾತ್ರೆಯುದ್ದಕ್ಕೂ ಹನುಮಾನ ಚಾಲೀಸಾದ ಮಂತ್ರಗಳ ಉದ್ಘೋಷ ಕೇಳಿ ಬರುತ್ತಿವೆ.


">April 1, 2025


ಅನಂತ್ ಅಂಬಾನಿ ತಮ್ಮ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷಗೊಳಿಸಲು ಹಾಗೂ ಜನರಲ್ಲಿ ಅದರಲ್ಲೂ ಪ್ರಮುಖವಾಗಿ ಯುವಜನತೆಯಲ್ಲಿ ಶ್ರೀಕೃಷ್ಣನ ಮೇಲೆ ನಂಬಿಕೆ ಇಡುವಂತೆ ಪ್ರೇರೆಪಿಸಲು ಈ ಒಂದು ಅವಕಾಶವನ್ನು ಬಳಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅನಂತ್, ನಾನು ಯುವಜನತೆಯಲ್ಲಿ ಕೇಳುವುದು ಇಷ್ಟೇ ದ್ವಾರಕಾಧೀಶ ಕೃಷ್ಣ ಮೇಲೆ ನಂಬಿಕೆ ಇಡಿ. ನೀವು ಯಾವುದೇ ಕೆಲಸವನ್ನು ಶುರು ಮಾಡುವ ಮುನ್ನ ಕೃಷ್ಣನನ್ನು ಸ್ಮರಿಸಿ. ಆಗ ಆ ಕೆಲಸ ಯಾವುದೇ ಅಡೆತಡೆಗಳಿಲ್ಲದೇ ಸರಾಗವಾಗಿ ನಡೆಯುವುದು ನಿಶ್ಚಿತ. ಆಗ ನಿಮ್ಮೊಂದಿ ಕೃಷ್ಣ ಇದ್ದೇ ಇರುತ್ತಾನೆ. ಹೀಗಾಗಿ ನೀವು ಯಾವುದೇ ರೀತಿಯ ಚಿಂತೆಗೆ ಒಳಗಾಗುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment