ಶ್ರೀರಾಮ ನವಮಿಯಂದೇ ಹುಟ್ಟುಹಬ್ಬ ಆಚರಿಸಿಕೊಂಡ ಅನಂತ್​ ಅಂಬಾನಿ; ಪತ್ನಿ ಹೇಳಿದ್ದೇನು?

author-image
Veena Gangani
Updated On
ಶ್ರೀರಾಮ ನವಮಿಯಂದೇ ಹುಟ್ಟುಹಬ್ಬ ಆಚರಿಸಿಕೊಂಡ ಅನಂತ್​ ಅಂಬಾನಿ; ಪತ್ನಿ ಹೇಳಿದ್ದೇನು?
Advertisment
  • ಬರೋಬ್ಬರಿ 170 ಕಿಲೋಮೀಟರ್ ಪಾದಯಾತ್ರೆ ಪೂರ್ಣ
  • ಮಾರ್ಚ್ 29ರಂದು ಪಾದಯಾತ್ರೆ ಶುರು ಮಾಡಿದ್ದ ಅನಂತ್
  • 3 ದಿನಗಳ ಮೊದಲೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಅನಂತ್

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕುಟುಂಬ ಸದ್ಯ ಖುಷಿಯಲ್ಲಿದೆ. ನೀತಾ ಹಾಗೂ ಮುಖೇಶ್​ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಬರೋಬ್ಬರಿ 170 ಕಿಲೋಮೀಟರ್ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ರಾಮ ಹುಟ್ಟಿದ ದಿನವೇ 30ನೇ ಹುಟ್ಟುಹಬ್ಬಕ್ಕೆ ಮೂರು ದಿನಗಳ ಮೊದಲು ರಾಮ ನವಮಿಯಂದು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ ಅನಂತ್ ಅಂಬಾನಿ.

ಇದನ್ನೂ ಓದಿ:140 ಅಲ್ಲ 180 ಕಿ.ಮೀ ಪಾದಯಾತ್ರೆಗೆ ಮುಂದಾದ ಅಂಬಾನಿ ಮಗ; ಅನಂತ್ ಆರೋಗ್ಯದ ಬಗ್ಗೆ ರಿಲಯನ್ಸ್‌ ಹೇಳಿದ್ದೇನು?

ಜಾಮ್​ ನಗರದಿಂದ ದ್ವಾರಕಾವರೆಗೂ ಪಾದಯಾತ್ರೆ ನಡೆಸಿ ಕೊನೆಗೆ ಭಗವಾನ್ ಶ್ರೀಕೃಷ್ಣನ ದರ್ಶನವನ್ನು ಪಡೆದಿದ್ದಾರೆ. ಅನಂತ್ ಅಂಬಾನಿ ಭಾನುವಾರ ಮುಂಜಾನೆ ಗುಜರಾತ್‌ನ ದ್ವಾರಕಾದಲ್ಲಿರುವ ಶ್ರೀ ದ್ವಾರಕಾಧೀಶ ದೇವಸ್ಥಾನಕ್ಕೆ ತಲುಪಿದರು. ಈ ಮೂಲಕ ಮಾರ್ಚ್ 29ರಂದು ಜಾಮ್‌ನಗರದಿಂದ ಗುಜರಾತ್​ವರೆಗಿನ 170 ಕಿ.ಮೀ ಆಧ್ಯಾತ್ಮಿಕ ಪಾದಯಾತ್ರೆಯನ್ನು ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲದೇ ಅನಂತ್ ಅಂಬಾನಿ ಅವರ ಪಾದಯಾತ್ರೆಯ ಕೊನೆಯ ದಿನದಂದು ಅವರ ಪತ್ನಿ ರಾಧಿಕಾ ಮರ್ಚೆಂಟ್ ಮತ್ತು ತಾಯಿ ನೀತಾ ಅಂಬಾನಿ ಕೂಡ ಭಾಗಿಯಾಗಿದ್ದರು.

ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅನಂತ್​ ಅಂಬಾನಿ ಅವರು, ಇದು ನನ್ನದೇ ಆದ ಆಧ್ಯಾತ್ಮಿಕ ಪ್ರಯಾಣ. ನಾನು ಇದನ್ನು ದೇವರ ಹೆಸರಿನಲ್ಲಿ ಆರಂಭಿಸಿದೆ. ಈಗ ದೇವರ ಹೆಸರಿನಲ್ಲೇ ಅಂತ್ಯಗೊಳಿಸುತ್ತಿದ್ದೇನೆ. ನಾನು ದ್ವಾರಕಾಧೀಶರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ನನ್ನೊಂದಿಗೆ ಸೇರಿದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಪಾದಯಾತ್ರೆ ಮಾಡಲು ಬಯಸಿದ್ದೇನೆ ಎಂದು ನನ್ನ ತಂದೆ ಬಳಿ ಹೇಳಿದಾಗ, ಅವರು ನನಗೆ ಬಹಳಷ್ಟು ಪ್ರೋತ್ಸಾಹ ನೀಡಿದರು. ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದಿದ್ದಾರೆ.

publive-image

ರಾಧಿಕಾ ಮರ್ಚೆಂಟ್ ಹೇಳಿದ್ದೇನು?

ಈ ಬಗ್ಗೆ ಮಾತಾಡಿದ ರಾಧಿಕಾ ಮರ್ಚೆಂಟ್, ಇಂದು ಅನಂತ್​ ಅವರ 30ನೇ ವರ್ಷದ ಹುಟ್ಟು ಹಬ್ಬವಿದೆ. ಅನಂತ್​ ಅವರಿಗೆ ಆಸೆ ಇತ್ತು. ಮದುವೆ ಆದ ಬಳಿಕ ಜಾಮ್​ ನಗರದಿಂದ ದ್ವಾರಕಾವರೆಗೂ ಪಾದಯಾತ್ರೆ ಮಾಡಬೇಕು ಅಂತ ಇಷ್ಟ ಪಟ್ಟಿದ್ದರು. ಅದರಂತೆ ದ್ವಾರಕಾದಲ್ಲಿ ಅನಂತ್​ ಅವರ ಹುಟ್ಟು ಹಬ್ಬವನ್ನು ಸೆಲೆಬ್ರೆಟ್​ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ. ಕುಶಿಂಗ್ ಸಿಂಡೋಮ್‌ನಿಂದ ಬಳಲುತ್ತಿರುವ ಅನಂತ್, ಬೊಜ್ಜು, ಅಸ್ತಮಾ ಮತ್ತು ತೀವ್ರ ಶ್ವಾಸಕೋಶದ ಸಮಸ್ಯೆ ನಡುವೆಯೂ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

publive-image

ನೀತಾ ಅಂಬಾನಿ ಹೇಳಿದ್ದೇನು?

ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕ-ಅಧ್ಯಕ್ಷೆ ನೀತಾ ಅಂಬಾನಿ, ಒಬ್ಬ ತಾಯಿಯಾಗಿ, ನನ್ನ ಕಿರಿಯ ಮಗ ದ್ವಾರಕಾಧೀಶನ ದೈವಿಕ ಸ್ಥಳಕ್ಕೆ ಪಾದಯಾತ್ರೆ ಪೂರ್ಣಗೊಳಿಸುವುದನ್ನು ನೋಡಿ ನನಗೆ ಹೆಮ್ಮೆ ಅನಿಸುತ್ತದೆ. ಕಳೆದ 10 ದಿನಗಳಿಂದ, ಅವನೊಂದಿಗೆ ನಡೆಯುತ್ತಿರುವ ಯುವಕರು ನಮ್ಮ ಸಂಸ್ಕೃತಿಯನ್ನು ಹರಡಲು ಸಹಾಯ ಮಾಡಿದ್ದಾರೆ. ಅನಂತ್‌ಗೆ ಶಕ್ತಿ ನೀಡಲಿ ಎಂದು ನಾನು ದ್ವಾರಕಾಧೀಶನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment