/newsfirstlive-kannada/media/post_attachments/wp-content/uploads/2025/04/ANANT-AMBANI-2.jpg)
ಅದ್ದೂರಿಯಾಗಿ ಮದುವೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಅಂಬಾನಿ ಕುಟುಂಬ ಮತ್ತೆ ಸುದ್ದಿಯಲ್ಲಿದೆ. ದ್ವಾರಕಾಧೀಶನ ದರ್ಶನ ಪಡೀಬೇಕು ಅಂತ ಪಣತೊಟ್ಟು ಹೊರಟ ಅನಂತ್ ಅಂಬಾನಿ ಪವಿತ್ರಯಾತ್ರೆ ಮುಗಿಸಿದ್ದಾರೆ. ತೀರ್ಥಯಾತ್ರೆಯ ಕೊನೆಯ ದಿನ ಪತ್ನಿ ರಾಧಿಕಾ, ತಾಯಿ ನೀತಾ ಅಂಬಾನಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ ಸದ್ಯ ಖುಷಿಯಲ್ಲಿದೆ. ಮದುವೆ ಬಳಿಕ ಅನಂತ್ ಅಂಬಾನಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರಯಾಣ ಸದ್ಯ ಮುಕ್ತಾಯವಾಗಿದೆ. ನೀತಾ ಹಾಗೂ ಮುಖೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಬರೋಬ್ಬರಿ 170 ಕಿಲೋಮೀಟರ್ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಜಾಮ್ ನಗರದಿಂದ ದ್ವಾರಕಾವರೆಗೂ ಪಾದಯಾತ್ರೆ ನಡೆಸಿ ಕೊನೆಗೆ ಭಗವಾನ್ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಜಾಮ್‌ನಗರದಿಂದ ದ್ವಾರಕಾದವರೆಗೂ ಅನಂತ್ ಅಂಬಾನಿ ಮಂತ್ರ ಪಠಣ; ಯಾವುದು? ಏನಿದರ ವಿಶೇಷ?
ಅನಂತ್ ಅಂಬಾನಿ ನಿನ್ನೆ ಮುಂಜಾನೆ ಗುಜರಾತ್‌ನ ದ್ವಾರಕಾದಲ್ಲಿರುವ ಶ್ರೀ ದ್ವಾರಕಾಧೀಶ ದೇವಸ್ಥಾನಕ್ಕೆ ತಲುಪಿದ್ರು. ಈ ಮೂಲಕ ಮಾರ್ಚ್ 29ರಂದು ಜಾಮ್‌ನಗರದಿಂದ ಗುಜರಾತ್ವರೆಗಿನ 170 ಕಿ.ಮೀ ಆಧ್ಯಾತ್ಮಿಕ ಪಾದಯಾತ್ರೆಯನ್ನು ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲದೇ ಅನಂತ್ ಅಂಬಾನಿ ಅವರ ಪಾದಯಾತ್ರೆಯ ಕೊನೆಯ ದಿನದಂದು ಅವರ ಪತ್ನಿ ರಾಧಿಕಾ ಮರ್ಚೆಂಟ್ ಮತ್ತು ತಾಯಿ ನೀತಾ ಅಂಬಾನಿ ಕೂಡ ಭಾಗಿಯಾಗಿದ್ರು.
ಇದು ನನ್ನ ಆಧ್ಯಾತ್ಮಿಕ ಪ್ರಯಾಣ, ದೇವರ ಹೆಸರು ಹೇಳಿಕೊಂಡು ನನ್ನ ಪಾದಯಾತ್ರೆ ಕೈಗೊಂಡು ದೇವರ ಹೆಸರಿನಲ್ಲಿಯೇ ಮುಕ್ತಾಯಗೊಳಿಸುತ್ತಿದ್ದೇನೆ. ನನ್ನ ಈ ಪಯಣದಲ್ಲಿ ನನ್ನ ಜೊತೆಯಾದ ಪತ್ನಿ, ತಾಯಿ ಮತ್ತು ಎಲ್ಲ ಹಿತೈಷಿಗಳಿಗೂ ಧನ್ಯವಾದಗಳು-ಅನಂತ್ ಅಂಬಾನಿ
ಕುಶಿಂಗ್ ಸಿಂಡ್ರೋಮ್ನಿಂದ ಬಳಲುತ್ತಿರುವ ಅನಂತ್, ಬೊಜ್ಜು, ಅಸ್ತಮಾ ಮತ್ತು ತೀವ್ರ ಶ್ವಾಸಕೋಶದ ಸಮಸ್ಯೆ ನಡುವೆಯೂ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪ್ರತಿದಿನ ಹಾಗೂ ರಾತ್ರಿ ಹೊತ್ತು 7 ರಿಂದ 8 ಗಂಟೆ ನಡೆದುಕೊಂಡು 20 ಕಿಲೋ ಮೀಟರ್ ದೂರ ಕ್ರಮಿಸುತ್ತಾ ಬಂದಿದ್ದಾರೆ. ರಾಮನವಮಿಯ ಪುಣ್ಯದಿನ ಬೆಳಗಿನ ಜಾವ ದ್ವಾರಕಾದಲ್ಲಿರುವ ದ್ವಾರಕಾಧೀಶ ದರ್ಶನ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕ-ಅಧ್ಯಕ್ಷೆ ಹಾಗೂ ತಾಯಿ ನೀತಾ ಅಂಬಾನಿ ಮತ್ತು ಪತ್ನಿ ರಾಧಿಕಾ ಮರ್ಚೆಂಟ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ 2 ತಿಂಗಳು ಬಾಕಿ.. ಶಾಪಿಂಗ್ ಮಾಡಲು ಹೋದ ಯುವಜೋಡಿ ದುರಂತ ಅಂತ್ಯ; ಆಗಿದ್ದೇನು?
ಅನಂತ್ ಅವರ 30 ನೇ ಹುಟ್ಟುಹಬ್ಬ. ನಮ್ಮ ಮದುವೆಯ ನಂತರ ಈ ಪಾದಯಾತ್ರೆ ಮಾಡಬೇಕೆಂದು ಅವರು ಬಯಸಿದ್ದರು.. ಇಂದು ನಾವು ಅವರ ಜನ್ಮದಿನವನ್ನು ಇಲ್ಲಿ ಆಚರಿಸುತ್ತಿದ್ದೇವೆ.. ಇದು ನಮಗೆ ಹೆಮ್ಮೆ ಅನಿಸುತ್ತದೆ. ಅವರ ಪಾದಯಾತ್ರೆ ಯಶಸ್ವಿಯಾಗಲು ಅವರನ್ನು ಆಶೀರ್ವದಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ-ರಾಧಿಕಾ ಮರ್ಚೆಂಟ್
ಇದೇ ಏಪ್ರಿಲ್ 10ರಂದು ಅನಂತ್ ಅಂಬಾನಿಯವರ 30ನೇ ಜನ್ಮದಿನ. ಈ ಮೂಲಕ ರಾಮ ಹುಟ್ಟಿದ ದಿನವೇ 30ನೇ ಹುಟ್ಟುಹಬ್ಬಕ್ಕೆ ಮೂರು ದಿನಗಳ ಮೊದಲು ರಾಮ ನವಮಿಯಂದು ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ ಅನಂತ್ ಅಂಬಾನಿ. ಅದ್ಹೇನೆ ಇರಲಿ.. ಚೂರು ದೂರ ನಡೆದಾಡಲು ಕೂಡ ಕೆಲವರು ಮೀನಾಮೇಷ ಎನಿಸುವಾಗ ಜೀವಿತಾವಧಿಯ ಕಾಯಿಲೆಯಿಂದ ಬಳಲುತ್ತಿದ್ದರೂ ಅನಂತ್ ಪಾದಯಾತ್ರೆ ಮಾಡಿದ್ದು ಪ್ರಶಂಸನೀಯ.
ಇದನ್ನೂ ಓದಿ: RCBಗೆ ಬಿಗ್ ಶಾಕ್; ವಿಡಿಯೋ ಶೇರ್ ಮಾಡಿ 𝑹𝑬𝑨𝑫𝒀 𝑻𝑶 𝑹𝑶𝑨𝑹 ಎಂದ ಫ್ರಾಂಚೈಸಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ