ಅಬ್ಬಾ.. ಅನಂತ್​ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ ರಿಲೀಸ್‌; ಇದರ ಸ್ಪೆಷಲ್ ಏನು?

author-image
Veena Gangani
Updated On
ಅಬ್ಬಾ.. ಅನಂತ್​ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ ರಿಲೀಸ್‌; ಇದರ ಸ್ಪೆಷಲ್ ಏನು? 
Advertisment
  • ಅನಂತ್​ ಅಂಬಾನಿ ಧರಿಸಿದ್ದ ಆ ಲಯನ್ ಬ್ರೂಚ್‌ ಬಗ್ಗೆ ನೆಟ್ಟಿಗರ ಚಿತ್ತ ನೆಟ್ಟಿದೆ
  • ಮುಖೇಶ್ ಅಂಬಾನಿ ಪುತ್ರನ ಮದುವೆಗೆ ದೇಶ ವಿದೇಶಗಳಿಂದ ಗಣ್ಯರ ಆಗಮನ
  • ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ ಮುಖೇಶ್​ ಅಂಬಾನಿ ಕುಟುಂಬಸ್ಥರು

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ದೇಶ ವಿದೇಶದ ಗಣ್ಯರು ಭಾಗಿಯಾಗಿದ್ದಾರೆ. ಸದ್ಯ ಮುಖೇಶ್ ಅಂಬಾನಿ ಕುಟುಂಬಸ್ಥರಲ್ಲಿ ಸಂತಸದ ವಾತಾವರಣ ಮೂಡಿದೆ.

publive-image

ಹೌದು, ಶ್ರೀಮಂತ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಕಾರ್ಯಕ್ರಮವು ಮುಂಬೈನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ದೇಶ, ವಿದೇಶಗಳಿಂದ ದೊಡ್ಡ ದೊಡ್ಡ ಗಣ್ಯರು ಆಗಮಿಸಿದ್ದು, ಮದುವೆಯ ವೈಭವವನ್ನು ಕಣ್ತುಂಬಿಕೊಳ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆ ಕಾರ್ಯಕ್ರಮಗಳ ನಡೆಯಲಿವೆ. ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ ರಾಧಿಕಾ ಮರ್ಚಂಟ್‌ ಹಾಗೂ ಅನಂತ್ ಅಂಬಾನಿ ಮದುವೆ ಮಾಡಿಕೊಳ್ಳಲಿದ್ದಾರೆ.

publive-image

ಇದನ್ನೂ ಓದಿ: 51 ಸಾವಿರ ಹಳ್ಳಿ ಜನರಿಗೆ ಅಂಬಾನಿ ಫ್ಯಾಮಿಲಿ ಔತಣಕೂಟ.. ಎಷ್ಟು ದಿನ ನಡೆಯುತ್ತೆ ಈ ಅನ್ನ ಸೇವಾ?

ಇನ್ನು, ಮುಖೇಶ್​ ಅಂಬಾನಿ ಕುಟುಂಬಸ್ಥರ ಬಗ್ಗೆ ಒಂದಲ್ಲಾ ಒಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೆ ಇರುತ್ತದೆ, ನೀತಾ ಅಂಬಾನಿ ಧರಿಸಿದ್ದ ವಜ್ರದ ಸರದ ಬಗ್ಗೆ ಸಾಕಷ್ಟು ಜನರು ಕುತೂಹಲ ವ್ಯಕ್ತಪಡಿಸಿದ್ದರು. ಇದೀಗ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಅನಂತ್ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್‌ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನಂತ್​ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್‌ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

publive-image

ಹೌದು, ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಅವರು ಲಯನ್ ಬ್ರೂಚ್ ಅನ್ನು ಧರಿಸಿಕೊಂಡಿದ್ದರು. ಈ ಡೈಮಂಡ್ ಲಯನ್ ಬ್ರೂಚ್‌ 50 ಕ್ಯಾರಟ್‌ಗಳಿಗಿಂತ ಹೆಚ್ಚು ವಜ್ರವನ್ನು ಒಳಗೊಂಡಿದೆಯಂತೆ. ಇದೇ ವಜ್ರಗಳ ಆಭರಣಗಳಿಂದ ಮುಚ್ಚಿದ ಕಸ್ಟಮ್ ನಿರ್ಮಿತ ಲಯನ್ ಬ್ರೂಚ್ ಅನ್ನು ಅನಂತ್​ ಅಂಬಾನಿ ಧರಿಸಿದ್ದರು. ಲಯನ್ ಕಣ್ಣುಗಳಿಗೆ ಮೇನ್ ಮತ್ತು ಹಸಿರು ಪಚ್ಚೆಗಳನ್ನು ಬಳಸಲಾಗಿದೆ.

publive-image

ಇದನ್ನೂ ಓದಿ: ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?

ಬ್ರೂಚ್ ಅನಂತ್ ಅವರ ಪ್ರಾಣಿಗಳ ಮೇಲಿನ ಪ್ರೀತಿಯ ಸಂಕೇತವಾಗಿತ್ತು. ಈ ಡೈಮಂಡ್ ಲಯನ್ ಬ್ರೂಚ್‌ ಬಗ್ಗೆ ಆಭರಣ ವಿನ್ಯಾಸಕಿ ಲೋರೆನ್ ಶ್ವಾರ್ಟ್ಜ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನಾನು ನಿಜವಾಗಿಯೂ ಋಣಿಯಾಗಿದ್ದೇನೆ ಅಂತ ಬರೆದುಕೊಂಡಿದ್ದಾರೆ. ಮಾರ್ಚ್ 3 ರಂದು ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಈ ಡೈಮಂಡ್ ಲಯನ್ ಬ್ರೂಚ್‌ ಧರಿಸಿದ್ದರು. ಬ್ರೂಚ್‌ನಲ್ಲಿ ಕೆಲಸ ಮಾಡಲು ನಾನು ತುಂಬಾ ಲಕ್ಕಿ. ಅಂಬಾನಿ ಕುಟುಂಬಸ್ಥರಿಗೆ ಪ್ರಾಣಿಗಳ ಮೇಲಿನ ಪ್ರೀತಿ ಸ್ಪೂರ್ತಿದಾಯಕವಾಗಿತ್ತು. ನಾನು ನಿಜವಾಗಿಯೂ ಋಣಿಯಾಗಿದ್ದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಇಂದು ಕೂಡ ಅನಂತ್​ ಅಂಬಾನಿ ತಾವು ಧರಿಸಿದ್ದ ಜುಬ್ಬಾ ಪೈಜಾಮ ಮೇಲೆ ಆನೆ ಮುದ್ರಿತ ಪೆಂಡೆಂಟ್ ಅನ್ನು ಧರಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment