/newsfirstlive-kannada/media/post_attachments/wp-content/uploads/2025/04/ANANT-AMBANI-PADAYATRA.jpg)
ರಿಲಯನ್ಸ್ ಇಂಡಸ್ಟ್ರೀಯಲ್ ಲಿಮಿಟೆಡ್ನ ನಿರ್ದೇಶಕ ಹಾಗೂ ಭಾರತದ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರ ಪುತ್ರ ದ್ವಾರಕಾಗೆ ಪಾದಯಾತ್ರೆ ಮಾಡಲು ಶುರು ಮಾಡಿದ್ದಾರೆ. ಅದು ಬರೋಬ್ಬರಿ 140 ಕಿಲೋಮೀಟರ್ ಪಾದಯಾತ್ರೆಯನ್ನು ಅನಂತ್ ಅಂಬಾನಿ ಕೈಗೊಂಡಿದ್ದಾರೆ. ಜಾಮ್ ನಗರದಿಂದ ದ್ವಾರಕಾವರೆಗೂ ಪಾದಯಾತ್ರೆ ನಡೆಸಿ ಕೊನೆಗೆ ಭಗವಾನ್ ಶ್ರೀಕೃಷ್ಣನ ದರ್ಶನವನ್ನು ತಮ್ಮ 30ನೇ ಜನ್ಮದಿನದ ಪ್ರಯುಕ್ತವಾಗಿ ಪಡೆಯಲಿದ್ದಾರೆ.
ಅಂಬಾನಿ ಕುಟುಂಬಕ್ಕೂ ಆಧ್ಯಾತ್ಮಕ್ಕೂ ಮೊದಲನಿಂದಲೂ ಒಂದು ನಂಟು ಇದೆ. ಈ ಹಿಂದೆ ಅಂಬಾನಿ ಕುಟುಂಬ ಕುಂಭಮೇಳದಲ್ಲೂ ಕೂಡ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬಂದಿದ್ದರು. ಈಗ ಅನಂತ ಅಂಬಾನಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಒಬ್ಬ ಸಾಮಾನ್ಯ ಭಕ್ತನಂತೆ ಜಾಮ್ ನಗರದಿಂದ ದ್ವಾರಕಾದವರೆಗೂ ಒಟ್ಟು 140 ಕಿಲೋ ಮೀಟರ್ ಪಾದಯಾತ್ರೆಯನ್ನು ಶುರು ಮಾಡಿದ್ದಾರೆ. ಐದು ದಿನಗಳ ಹಿಂದೆಯೇ ಈ ಪಾದಯಾತ್ರೆ ಶುರುವಾಗಿದ್ದು ಮುಂದಿನ 2 ರಿಂದ 4 ದಿನಗಳಲ್ಲಿ ದ್ವಾರಕೆಯನ್ನು ತಲುಪುವ ನಿರೀಕ್ಷೆಯಿಂದ.
ಇದನ್ನೂ ಓದಿ: ದಾಲ್ ಮತ್ತು ರೊಟ್ಟಿಗೆ ಫೇಮಸ್ ಈ ಹಳ್ಳಿ.. ಈ ಗ್ರಾಮವನ್ನು ಹುಡುಕಿಕೊಂಡು ವಿದೇಶದಿಂದ ಬರುತ್ತಾರೆ ಭೋಜನ ಪ್ರಿಯರು
ಬೆಳಗ್ಗೆ ಪಾದಯಾತ್ರೆ ನಡೆಸುವುದರಿಂದ ಟ್ರಾಫಿಕ್ ತೊಂದರೆ ಹಾಗೂ ಜನಜಂಗಳಿಯ ಸಮಸ್ಯೆಯಾಗುತ್ತದೆಯೆಂದು ಅರಿತ ಅನಂತ್ ಅಂಬಾನಿ, ರಾತ್ರಿ ವೇಳೆ ಪಾದಯಾತ್ರೆ ಮಾಡಲು ಸಜ್ಜಾಗಿದ್ದಾರೆ. ನಿತ್ಯ 10 ರಿಂದ 12 ಕಿಲೋಮೀಟರ್ವರೆಗೆ ನಡಿಗೆ ಕೈಗೊಳ್ಳುತ್ತಿರುವ ಅನಂತ್ಗೆ Z+ ಸೆಕ್ಯೂರಿಟಿ ನೀಡಲಾಗಿದೆ ಹಾಗೂ ಪೊಲೀಸರು ಕೂಡ ಭದ್ರತೆಯನ್ನು ಒದಗಿಸುತ್ತಿದ್ದಾರೆ. ಏಪ್ರಿಲ್ 10ಕ್ಕೆ ಅನಂತ ಅಂಬಾನಿಗೆ 30 ವರ್ಷ ತುಂಬುತ್ತದೆ. ಅದೇ ದಿನ ದ್ವಾರಕೆಗೆ ತಲುಪಿ ಶ್ರೀಕೃಷ್ಣನ ದರ್ಶನವನ್ನು ಪಡೆಯಲಿದ್ದಾರೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ಆಗಲಿದ್ದಾರೆ -ಸಂಚಲನ ಮೂಡಿಸಿದ ರಾವತ್ ಹೇಳಿಕೆ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತ್ ಅಂಬಾನಿ, ಈ ಪಾದಯಾತ್ರೆ ಜಾಮ್ನಗರದಲ್ಲಿರುವ ನಮ್ಮ ಮನೆಯಿಂದ ಶುರು ಮಾಡಿದ್ದೇನೆ. ನಾನು ಯಾವುದೇ ಕೆಲಸ ಆರಂಭಿಸುವುದಕ್ಕೂ ಮುನ್ನ ದ್ವಾರಕಾಧೀಶ ಶ್ರೀಕೃಷ್ಣನನ್ನು ನೆನಪಿಸಿಕೊಂಡೇ ಶುರು ಮಾಡುತ್ತೇನೆ. ಆಗ ಎಲ್ಲವೂ ಕೂಡ ಸೂಸುತ್ರವಾಗಿ ಕೆಲಸ ನಡೆದು ಹೋಗುತ್ತದೆ. ನಾನು ಯುವ ಜನಾಂಗಕ್ಕೆ ಹೇಳುವುದು ಒಂದೇ, ಕೃಷ್ಣನ ಮೇಲೆ ನಂಬಿಕೆ ಇಡಿ. ಒಂದು ವೇಳೆ ನೀವು ಅವನ ಮೇಲೆ ಸಂಪೂರ್ಣ ಶ್ರದ್ಧೆಯಿಟ್ಟು ಅವನೆಡೆಗೆ ಭಕ್ತಿಪಥದಲ್ಲಿ ನಡೆದಿದ್ದೇ ಆದಲ್ಲಿ ಅವನು ನಿಮ್ಮ ಬದುಕಿನ ಎಲ್ಲ ಅಡತೆಡೆಗಳನ್ನು ಕಿತ್ತು ಎಸೆಯುತ್ತಾನೆ ಎಂದು ಹೇಳಿದ್ದಾರೆ.
People Mocked Him but He is One Gem Of A person . #anantambani Director, Reliance Industries Limited, is on a 'Padyatra' from Jamnagar to Dwarkadhish Temple
pic.twitter.com/CQSQx68qql— Indian (@hind4hindus47) April 1, 2025
ಅನಂತ ಅಂಬಾನಿಯವರ ಈ ಪಾದಯಾತ್ರೆ ಜಾಮ್ನಗರದ ಮೋತಿ ಕ್ವಾಡಿಯಿಂದ ಶುರುವಾಗಿದೆ. ಇದು ಅವರು ಶ್ರೀಕೃಷ್ಣನ ಮೇಲೆಯಿಟ್ಟಿರುವ ಭಕ್ತಿ ಮತ್ತು ಶ್ರದ್ಧೆಯ ಗುರುತಾಗಿ ಹಾಗೂ ಸರ್ವಜನಾಂಗದ ಒಳಿತಾಗಾಗಿ ಜೊತೆಗೆ ಹುಟ್ಟು ಹಬ್ಬದ ಪ್ರಯುಕ್ತ ಕೈಗೊಂಡ ಪಾದಯಾತ್ರೆಯಾಗಿದೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ. ಆಧ್ಯಾತ್ಮದ ಆಚೆಗೂ ಕೂಡ ಅನಂತ್ ಅಂಬಾನಿ ಅನೇಕ ವಿಚಾರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆಯೊಂದಿಗೆ ಅವುಗಳ ಪುನರ್ವಸತಿ ಅದರಲ್ಲೂ ಪ್ರಮುಖವಾಗಿ ಅನೆಗಳ ಬಗೆಗೆ ಅವರು ತೆಗೆದುಕೊಂಡಿರುವ ಕಾಳಜಿ ಹೀಗೆ ಅನೇಕ ವಿಷಯಗಳಿಗೆ ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂದ್ರೆ ಇದೇ ವರ್ಷ ಫೆಬ್ರವರಿ 27 ರಂದು ಪ್ರಾಣಿ ಮಿತ್ರ ನ್ಯಾಷನಲ್ ಅವಾರ್ಡ್ನ್ನು ಕೂಡ ಅನಂತ್ ಅಂಬಾನಿಯವರಿಗೆ ನೀಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ