Advertisment

ಅನಂತ್-ರಾಧಿಕಾ ದಿ ಗ್ರ್ಯಾಂಡ್ ಮ್ಯಾರೇಜ್; PM ಮೋದಿ, ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗಿ

author-image
Bheemappa
Updated On
ಅನಂತ್-ರಾಧಿಕಾ ದಿ ಗ್ರ್ಯಾಂಡ್ ಮ್ಯಾರೇಜ್; PM ಮೋದಿ, ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗಿ
Advertisment
  • ಪ್ರಧಾನಿ ಮೋದಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅನಂತ್ -ರಾಧಿಕಾ
  • ನವದಂಪತಿಗೆ ಶುಭಕೋರಲು ಬಂದ ತಾರಾಲೋಕ, ಕ್ರಿಕೆಟ್ ಪ್ಲೇಯರ್ಸ್​
  • ವಿವಿಧ ರಾಜ್ಯಗಳ ಸಿಎಂ, ಡಿಸಿಎಂಗಳು ಅದ್ಧೂರಿ ಮದುವೆಯಲ್ಲಿ ಭಾಗಿ

ಮುಂಬೈನಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತಿದೆ. ಭೂಲೋಕವೇ ಇಂಧ್ರಲೋಕವಾಗಿ ಬದಲಾಗಿಬಿಟ್ಟಿದೆ. ಭಾರತದ ಕುಬೇರನ ಪುತ್ರನ ಮದುವೆ ಉತ್ಸವ ಅದ್ಧೂರಿಯಾಗಿ ಸಾಗುತ್ತಿದೆ. ನಿನ್ನೆ ರಾತ್ರಿ ನಡೆದ ಶುಭ್ಆಶೀರ್ವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವರು ಗಣ್ಯರು ಬಂದು ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ.

Advertisment

ಎಲ್ಲೆಲ್ಲೂ ಸಂಭ್ರಮ ಸಡಗರ.. ಸಾಕ್ಷತ್​​ ಇಂಧ್ರಲೋಕ ಧರೆಗೆ ಬಂದಂತೆ ಭಾಸವಾಗುತ್ತದೆ.. ಇದನ್ನು ನೋಡಲು ಎರಡು ಕಣ್ಣು ಸಾಲಲ್ಲ.. ಮೈಮನಗಳನ್ನು ಸಂತೈಸುವ ಸಂಗೀತ ವಾದ್ಯಗಳ ನಿನಾದ.. ಮಿರ ಮಿರ ಮಿಂಚುವ ತಾರೆಯರು.. ಅಂಬಾನಿ ಪುತ್ರನ ಮದುವೆಯಲ್ಲಿ ಸಂಭ್ರಮವೋ, ಸಂಭ್ರಮ.

ಇದನ್ನೂ ಓದಿ: ಒಳಹರಿವಿನಲ್ಲಿ ಭಾರೀ ಇಳಿಕೆ.. KRSನಲ್ಲಿ ಎಷ್ಟು ಸಾವಿರ ಕ್ಯೂಸೆಕ್​ ನೀರು ಕಡಿಮೆ ಆಗಿದೆ ಗೊತ್ತಾ?

publive-image

ಭಾರತದ ಕುಬೇರ ಮುಖೇಶ್​​ ಅಂಬಾನಿ ಪುತ್ರ ಅನಂತ್​​ ಹಾಗೂ ರಾಧಿಕ ಮರ್ಚೆಂಟ್​​​ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಶುಕ್ರವಾರ ರಾತ್ರಿ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿ ಶುಭ್​ ಆಶೀರ್ವಾದ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆದಿದೆ.

Advertisment

ಕುಬೇರನ ಮಗನ ಮದುವೆಯಲ್ಲಿ ಪ್ರಧಾನಿ ಮೋದಿ ಭಾಗಿ

ಕುಬೇರನ ಮಗನ ಮದುವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ. ಮುಂಬೈ ಜಿಯೋ ವರ್ಲ್ಡ್​ ಕನ್ವೆಂಷನ್ ಸೆಂಟರ್​ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಗಮಿಸಿದ ಪ್ರಧಾನಿ ಮೋದಿಯನ್ನ ಇಡೀ ಅಂಬಾನಿ ಕುಟುಂಬ ಅದ್ಧೂರಿಯಾಗಿ ಸ್ವಾಗತ ಕೋರಿದೆ. ಪ್ರಧಾನಿ ಅವರ ಕಾಲಿಗೆ ಬಿದ್ದ ಅನಂತ್ ಹಾಗೂ ರಾಧಿಕಾ ಆಶೀರ್ವಾದ ಪಡೆದಿದ್ದಾರೆ..

ಸಮಾರಂಭಕ್ಕೆ ಆಗಮಿಸಿದ ವಿವಿಧ ರಾಜ್ಯಗಳ ಸಿಎಂಗಳು

ಅಂಬಾನಿ ಮನೆಯ ಮದುವೆಯಲ್ಲಿ ಸೆಲೆಬ್ರಿಟಿಗಳದ್ದೇ ಕಾರುಬಾರು.. ದೇಶ ವಿದೇಶಗಳಿಂದ ಸಾವಿರಾರು ಸೆಲೆಬ್ರಿಟಿಗಳು ಒಂದೇ ಸೂರಿನಡಿ ಸೇರಿ ಶತಮಾನದ ಮದುವೆಗೆ ಮೆರಗು ಹೆಚ್ಚಿಸಿದ್ದಾರೆ. ಅಮಿತಾಬ್​​ ಬಚ್ಚನ್​​, ಸೂಪರ್​ ​ಸ್ಟಾರ್ ರಜನಿಕಾಂತ್, ಶಾರುಖ್ ಖಾನ್, ಐಶ್ವರ್ಯ ರೈ, ರಾಕಿಂಗ್ ಸ್ಟಾರ್ ಯಶ್​, ಖ್ಯಾತ ಕ್ರಿಕೆಟರ್ಸ್​ಗಳು ಸಖತ್​​​ ಸ್ಟೆಪ್​​ ಹಾಕಿದ್ದಾರೆ.

ಪಕ್ಷ, ರಾಜಕೀಯವೂ ಮೀರಿ ಬಂದ ಗಣ್ಯರು, ಅಂಬಾನಿ ಅರಮನೆಯಲ್ಲಿ ಪ್ರತ್ಯಕ್ಷರಾದ್ರು.. ವಿವಿಧ ರಾಜ್ಯಗಳ ಸಿಎಂ ಹಾಗೂ ಡಿಸಿಎಂಗಳು ಮದುವೆಗೆ ಸಾಕ್ಷಿ ಆದ್ರು.. ಇದೇ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​​ ಬ್ಲೂ ಕಲರ್​​ ಸೂಟ್​​ನಲ್ಲಿ ಅಂಬಾನಿ ಪುತ್ರನ ಮದುವೆಯಲ್ಲಿ ಮಿಂಚಿದ್ರು..

Advertisment

ಇದನ್ನೂ ಓದಿ:ಟ್ರಕ್ಕಿಂಗ್​ಗೆ ಹೋಗುವಾಗ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ.. ಸ್ಥಳದಲ್ಲೇ ಯುವಕ ಸಾವು


">July 13, 2024

ಅದ್ಧೂರಿ ಕಲ್ಯಾಣ ಮಹೋತ್ಸವಕ್ಕೆ ಕೇವಲ ಸೆಲೆಬ್ರಿಟಿಗಳು ರಾಜ್ಯಗಳು ಮಾತ್ರವಲ್ಲದೇ ದೇಶದ ಪ್ರಸಿದ್ಧ ಮಠಗಳ ಸ್ವಾಮೀಜಿಗಳು ಸಹ ಶುಭ್​ ಆರ್ಶೀವಾದ ಕಾರ್ಯಕ್ರಮಕ್ಕೆ ಆಗಮಿಸಿದ್ರು. ಉತ್ತರಾಖಂಡ ಜ್ಯೋತಿರ್‌ ಮಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ತುಳಸಿ ಪೀಠದ ರಾಮಭದ್ರಾಚಾರ್ಯ ಸ್ವಾಮೀಜಿಗಳನ್ನ ಖುದ್ದು ಮುಖೇಶ್​ ಅಂಬಾನಿ ದಂಪತಿ ಆರತಿ ಎತ್ತಿ ಸ್ವಾಗತ ಕೋರಿದ್ರು. ಬಳಿಕ ನವದಂಪತಿಗಳಿಗೆ ಸ್ವಾಮೀಜಿಗಳು ಆಶೀರ್ವದಿಸಿದ್ರು. ಶುಕ್ರವಾರದಿಂದ ಆರಂಭವಾದ ಐತಿಹಾಸಿಕ ಈ ಶುಭ ವಿವಾಹ ಉತ್ಸವ ಇಂದು ಭವ್ಯ ಸ್ವಾಗತವಾದ ಮಂಗಳ ಉತ್ಸವದ ಮೂಲಕ ಕೊನೆಯಾಗಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment