newsfirstkannada.com

ಅಂಬಾನಿ ಪುತ್ರನ ಪ್ರೀ-ವೆಡ್ಡಿಂಗ್​ನಲ್ಲಿ ಅಟೆನ್ಷನ್ ಕ್ರಿಯೇಟ್ ಮಾಡಿದ್ದು ವಧು-ವರರಲ್ಲ, ನೀತಾ ಅಂಬಾನಿಯೂ ಅಲ್ಲ.. ಮತ್ಯಾರು?

Share :

Published March 5, 2024 at 12:49pm

  ಅನಂತ್​-ರಾಧಿಕಾ ಫ್ರೀ ವೆಡ್ಡಿಂಗ್​ಗೆ ಮಾಹಿ ಮೆರಗು!

  ರಾಮ್ ಚರಣ್ ಜೊತೆ ಸ್ಟ್ರೈಲಿಶ್ ವಾಕಿಂಗ್ ಮಾಡಿ ಮಿಂಚಿಂಗು

  ಫ್ರೀ ವೆಡ್ಡಿಂಗ್​ನಲ್ಲಿ ಮಾಹಿ ಹವಾ.. ಸೋಶಿಯಲ್ ಮೀಡಿಯಾ ಶೇಕ್

ಎಮ್.ಎಸ್.ಧೋನಿ.. ಕ್ರೇಜ್​ ಕಾ ಬಾಪ್​.. ಐಪಿಎಲ್​​ ಆರಂಭಕ್ಕೂ ಮುನ್ನವೇ ಮಾಹಿಯ ಕ್ರೇಜ್ ಶುರುವಾಗಿದೆ. ಪ್ರಿ ವೆಡ್ಡಿಂಗ್​ನಲ್ಲಿ ವಧು-ವರರ ಅಟ್ರಾಕ್ಷನ್​ಗಿಂತ ಮಿಸ್ಟರ್​ ಕೂಲ್ ಮಾಹಿಯೇ ಮೇನ್ ಅಟ್ರಾಕ್ಷನ್ ಆಗಿದ್ದಾರೆ.

ಅನಂತ್​ ಅಂಬಾನಿ-ರಾಧಿಕ ಪ್ರೀವೆಡ್ಡಿಂಗ್ ಶೂಟ್​.. ಗುಜರಾತ್​ನ ಜಾಮ್​ನಗರದ ರಾಧಕೃಷ್ಣ ದೇವಾಲಯದಲ್ಲಿ ನಡೆದ ಈ ಅದ್ದೂರಿ ಪ್ರೀವೆಡ್ಡಿಂಗ್​​ ವಿಶ್ವದಾದ್ಯಂತ ಸಂಚಲನ ಮೂಡಿಸಿತ್ತು. ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಿದ್ದ ಈ ಮದುವೆಯಲ್ಲಿ ಸ್ವರ್ಗವೇ ಧರೆಗೆ ಇಳಿದಂತಿತ್ತು. ಹಬ್ಬವೇ ಮನೆ ಮಾಡಿತ್ತು. ಆದ್ರೆ, ಇಂಥಹ ಅದ್ದರೂ ಪ್ರೀವೆಡ್ಡಿಂಗ್​​​ನಲ್ಲಿ ಖ್ಯಾತ ನಾಮರೇ ಅಟೆಂಡ್ ಆಗಿದ್ರೂ, ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ. ಒನ್​ ಆ್ಯಂಡ್ ಒನ್ಲಿ ಮಾಹಿ..

ಮದುವೆ ಮನೆಯಲ್ಲಿ ವಧು-ವರ ಸೆಂಟರ್​ ಆಫ್ ಅಟ್ರಾಕ್ಷನ್ ಆಗ್ತಾರೆ. ಈ ಸಾವಿರಾರು ಕೋಟಿಯ ಸ್ವರ್ಗದ ಮದುವೆಯ ಮೇನ್​ ಅಟ್ರಾಕ್ಷನ್ ಮಹೇಂದ್ರ ಸಿಂಗ್ ಧೋನಿ. ಅಲ್ಲಿ ನೆರೆದಿದ್ದ ಬಿಗ್ ಸ್ಟಾರ್​ಗಳಿಗೂ ಧೋನಿಯೇ ಅಚ್ಚುಮೆಚ್ಚಾಗಿದ್ದರು.

ರಾಮ್ ಚರಣ್ ಜೊತೆ ಧೋನಿ ಸ್ಟ್ರೈಲಿಶ್ ವಾಕ್​​​​​
ಅದ್ದೂರಿ ಮದುವೆಯಲ್ಲಿ ಮೊದಲಿಗೆ ಎಲ್ಲರ ಕಣ್ಣು ಕುಕ್ಕಿದ್ದು, ಟಾಲಿವುಡ್​ ನಟ ರಾಮ್ ಚರಣ್ ಜೊತೆ ಮಾಹಿಯ ಸ್ಟ್ರೈಲಿಶ್ ವಾಕ್​. ಧೋನಿ ಧರಿಸಿದ ಸಿಲ್ಕ್​​ ಶರ್ಟ್​. ಕೈ ಗಡಿಯಾರ, ಆ ನಗುವಿನೊಂದಿಗೆ ಇಡುತ್ತಿದ್ದ ಸ್ಟ್ರೈಲಿಶ್ ವಾಕ್​, ವಾವ್ ಎನಿಸಿತ್ತು.\

ಧೋನಿ ಜೊತೆ ಡೈರೆಕ್ಟರ್ ಅಟ್ಲಿ ಗುಸುಗುಸು!
ಮಾಹಿ ಅಂದ್ರೆನೇ ಒಂದು ಎನರ್ಜಿ. ಅವರನ್ನಾ ಕಾಣೋದೇ ಒಂದು ಅದೃಷ್ಟ​. ಇಂಥದ್ರಲ್ಲಿ ಪ್ರೊಡ್ಯುಸರ್​​​ ಆಗಿರೋ ಧೋನಿ, ಇಂಥಹ ಅದ್ದೂರಿ ಪ್ರೀ ವೆಡ್ಡಿಂಗ್​​ನಲ್ಲಿ ಸಿಕ್ರೇ ಮಾತನಾಡೋದು ಇರಲಿ, ಸಿಕ್ಕಿದ್ದೇ ಚಾನ್ಸ್​ ಅಂಥ ಸೆಲ್ಫಿ ತೆಗೆಸಿಕೊಳ್ಳದೆ ಇರೋಕೆ ಆಗುತ್ತಾ ಖಂಡಿತ ಇಲ್ಲ.

ಮಾಹಿ ಸುತ್ತಲು ಬಾಲಿವುಡ್​ ಮಂದಿ ಗುಂಪು..!
ಅಂಬಾನಿ ಮಗನ ಮದುವೆಯ ಹೈಲೆಟ್ ದೃಶ್ಯ ಏನು ಅಂದ್ರೆ, ಬಾಲಿವುಡ್ ಸೂಪರ್ ಸ್ಟಾರ್​ ರಣವೀರ್ ಸಿಂಗ್, ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್​​​​​​​, ಧೋನಿಯ ಜೊತೆ ಹೊಡೆದ ಹರಟೆ. ಈ ಹರಟೆ ಸೋಶಿಯಲ್​ ಮೀಡಿಯಾದಲ್ಲಿ ನಿಜಕ್ಕೂ ಹಾಟ್ ಟಾಪಿಕ್ ಆಗಿತ್ತು. ಕಿಂಗ್ ಖಾನ್ ಶಾರೂಖ್ ಪುತ್ರ ಆರ್ಯನ್ ಖಾನ್ ಕೂಡ ಮಾಹಿ ಮಾತನ್ನ ಮುಗ್ಧತೆಯಿಂದ ಕೇಳಿಸಿಕೊಳ್ತಿದ್ರು.

ಒರಿಜಿನಲ್​ ಗ್ಯಾಂಗ್​ಸ್ಟರ್​​ ಜೊತೆ ಜಾಹ್ನವಿ ಕಪೂರ್
ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಸೌಂಡ್​ ಮಾಡಿದ್ದು ಧೋನಿ ಜೊತೆ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾಗಿತ್ತು. ಒರಿಜಿನಲ್ ಗ್ಯಾಂಗ್​ಸ್ಟರ್​ & ಮಿಸ್ಟರ್ಸ್ ಮಾಹಿ ಜೊತೆ ಎಂದು ಮಾಡಿದ್ದ ಫೋಸ್ಟ್​, ಫ್ಯಾನ್ಸ್​ ಕಿಕ್ಕೇರಿಸಿತ್ತು. ಬ್ರಾವೋ ಜೊತೆ ಧೋನಿ ಹೆಜ್ಜೆ ಹಾಕಿದ್ದು, ಪತ್ನಿ ಸಾಕ್ಷಿ ಸಿಂಗ್ ಜೊತೆ ಧೋನಿ ಕಾಣಿಸಿಕೊಂಡ ನ್ಯೂ ಲುಕ್ ಅಂತೂ ಅಭಿಮಾನಿಗಳ ಕಣ್ಮನ ಸೆಳೆದಿದ್ದು ಸುಳ್ಳಲ್ಲ. ಒಟ್ನಲ್ಲಿ! ಮದುವೆ ಅಂಬಾನಿ ಪುತ್ರನದ್ದೇ ಆಗಿದ್ರು ಸಹ, ಆ ಅದ್ದೂರಿ ಈವೆಂಟ್​ನಲ್ಲಿ ಮೆರೆಗು ನೀಡಿದ್ದು ಮಾತ್ರ ಮಾಹಿಯ ಉಪಸ್ಥಿತಿಯೇ ಆಗಿತ್ತು ಅನ್ನೋದು ಫ್ಯಾನ್ಸ್ ಅಭಿಪ್ರಾಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿ ಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಂಬಾನಿ ಪುತ್ರನ ಪ್ರೀ-ವೆಡ್ಡಿಂಗ್​ನಲ್ಲಿ ಅಟೆನ್ಷನ್ ಕ್ರಿಯೇಟ್ ಮಾಡಿದ್ದು ವಧು-ವರರಲ್ಲ, ನೀತಾ ಅಂಬಾನಿಯೂ ಅಲ್ಲ.. ಮತ್ಯಾರು?

https://newsfirstlive.com/wp-content/uploads/2024/03/anath-ambani.jpg

Load More