newsfirstkannada.com

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ 2ನೇ ಅದ್ಧೂರಿ ಪ್ರೀ-ವೆಡ್ಡಿಂಗ್; ಹೇಗಿದೆ ತಯಾರಿ ಗೊತ್ತಾ?

Share :

Published May 28, 2024 at 8:26pm

  ಮುಖೇಶ್​ ಅಂಬಾನಿ ಮಗನ ಮದುವೆಗೆ ದೇಶ-ವಿದೇಶಗಳಿಂದ ಗಣ್ಯರ ದೌಡು

  ಬಹಳ ಅದ್ಧೂರಿಯಾಗಿ ನೆರವೇರಿತ್ತು ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭ

  ಜುಲೈ 12ಕ್ಕೆ ಮುಖೇಶ್​ ಅಂಬಾನಿ ಮಗ ಹಾಗೂ ರಾಧಿಕಾ ಮರ್ಚೆಂಟ್ ಮದುವೆ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ 2ನೇ ಪ್ರೀ-ವೆಡ್ಡಿಂಗ್ ತಯಾರಿ ಬರದಿಂದ ನಡೆಯುತ್ತಿದೆ. ಇಟಲಿಯ ಸಮುದ್ರ ತೀರದ ಮೇಲೆ ಅದರಲ್ಲೂ ಐಷಾರಾಮಿ ಹಡಗಿನಲ್ಲಿ ಜೂ.1ರಂದು 2ನೇ ಪ್ರಿ-ವೆಡ್ಡಿಂಗ್ ಜರುಗಲಿದೆ. ಇನ್ನು, ಈ ಸಮಾರಂಭಕ್ಕೆ ಭಾರತ ಹಾಗೂ ನಾನಾ ದೇಶಗಳ ಗಣ್ಯರನ್ನು ಆಹ್ವಾನಿಸಲಾಗಿದ್ದು, ಅದರ ಆಮಂತ್ರಣ ಪತ್ರಿಕೆ ಹಾಗೂ ಸಮಾರಂಭದಲ್ಲಿನ ಕಾರ್ಯಕ್ರಮಗಳ ಪಟ್ಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಮಾರ್ಚ್​ 1ರಿಂದ 3 ದಿನಗಳ ಕಾಲ ಗುಜರಾತ್​ನ ಜಾಮ್​ನಗರದಲ್ಲಿ ಅದ್ಧೂರಿಯಾಗಿ ಬಹಳ ಅದ್ಧೂರಿಯಾಗಿ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮೊದಲನೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ನಡೆದಿತ್ತು.

ವೈರಲ್​ ಆದ ಆಮಂತ್ರಣ ಪತ್ರದ ಮೇಲೆ ‘ಎ ವಿಟೆ ಇ ಉನ್ ವಯಾಗಿಯೋ’ ಎಂದು ಉಲ್ಲೇಖಿಸಲಾಗಿದೆ. ಕನ್ನಡದಲ್ಲಿ ಇದರರ್ಥ ‘ಜೀವನ ಒಂದು ಪಯಣ’ ಅಂತ. 2ನೇ ಪ್ರಿ-ವೆಡ್ಡಿಂಗ್​ ಕಾರ್ಯಕ್ರಮಕ್ಕಾಗಿ ಈಗಾಗಲೇ ಲಕ್ಷುರಿ ಹಡಗೊಂಡನ್ನು ಬುಕ್ ಮಾಡಲಾಗಿದೆ. ಜೂ. 1ರಂದು ಇಟಲಿಯಿಂದ ಹೊರಡಲಿರುವ ಹಡಗು ಫ್ರಾನ್ಸ್​ವರೆಗೆ ಪ್ರಯಾಣಿಸಲಿದೆ. ಮತ್ತೆ ಪುನಃ ಅಲ್ಲಿಂದ ಮತ್ತೆ ಇಟಲಿಗೆ ಹಿಂದಿರುಗಲಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಇಂದು 2ನೇ ಪ್ರಿ ವೆಡ್ಡಿಂಗ್ ಸಮಾರಂಭಕ್ಕೆ ಚಾಲನೆ ನೀಡಲಾಗುತ್ತಿದ್ದು, ಮುಂದಿನ ಎಲ್ಲ ಆಚರಣೆಗಳು ಐಷಾರಾಮಿ ಹಡಗಿನಲ್ಲೇ ನಡೆಯಲಿವೆ. 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ನಟ ರಣವೀರ್ ಸಿಂಗ್, ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ, ನಟ ರಣಬೀರ್ ಕಪೂರ್-ಆಲಿಯಾ ಭಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಸುಮಾರು 300 ವಿಐಪಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.

ನಾಳೆಯಿಂದ ಅಂದರೆ ಮೇ 29ರಂದು ಹಡಗಿನಲ್ಲಿ ವೆಲ್ ಕಂ ಬ್ಯಾಶ್ ಸಮಾರಂಭ ಆಯೋಜಿಸಲಾಗಿದೆ. ಆ ಪಾರ್ಟಿಯಲ್ಲಿ ಫೇಮಸ್​ ಉದ್ಯಮಿಗಳು, ಸಿನಿಮಾ ನಟರ ಹಾಗೂ ನಟಿಯರು, ಕ್ರಿಕೆಟ್ ದಿಗ್ಗಜರು, ವಿವಿಧ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಇದಾದ ಬಳಿಕ ಸ್ಟಾರಿ ನೈಟ್ ಎಂಬ ಕಾರ್ಯಕ್ರಮ ನಡೆಸಲಿದ್ದಾರೆ. ಅದು ರಾತ್ರಿ ಹೊತ್ತು ಹಡಗಿನ ಮೇಲ್ಫಾವಣಿಯ ಮೇಲೆ ಓಪನ್ ಕನ್ವೆಂನ್ಷನ್ ಹಾಲ್​ನಲ್ಲಿ ನಡೆಯಲಿದೆ. ಮೇ 30ರಂದು, ರೋಮನ್ ಹಾಲಿಡೆ ಎಂಬ ಕಾರ್ಯಕ್ರಮ ನಡೆಸಲಿದ್ದಾರೆ. ಇದರಲ್ಲಿ ಅತಿಥಿಗಳೆಲ್ಲರೂ ವೆಸ್ಟರ್ನ್ ಫಾರ್ಮಲ್ಸ್ ಮಾದರಿಯ ಉಡುಪು ಧರಿಸಿ ಬರಬೇಕೆಂದು ಸೂಚಿಸಲಾಗಿದೆ. ಅದೇ ದಿನ ಲಾ ಡೋಸ್ ಫಾರ್ ನೆಂಟ್ ಹಾಗೂ ಟು-ಗಾ ಪಾರ್ಟಿ ಎಂಬ ಎರಡು ಕಾರ್ಯಕ್ರಮಗಳಿವೆ.

ಮೇ 31ರಂದು ವಿ ಟರ್ನ್ಸ್ ಒನ್ ಅಂಡರ್ ದ ಸನ್ ಅಂತ ಮತ್ತೊಂದು ಕಾರ್ಯಕ್ರಮ ನಡೆಸಲಿದ್ದಾರೆ. ಆಮಂತ್ರಣದಲ್ಲಿ ಉಲ್ಲೇಖಿಸಿದಂತೆ ಪ್ಲೇಫುಲ್ ಕಾರ್ಯಕ್ರಮವಾಗಿರಲಿದೆ ಎಂದು ಬಣ್ಣಿಸಲಾಗಿದೆ. ಮತ್ತೆ ಜೂನ್ 1ರಂದು ಆನ್ ಲ್ಯಾಂಡ್ ಪೋರ್ಟೊಫಿನೊ ಕಾರ್ಯಕ್ರಮಕ್ಕೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲ ಗಣ್ಯರು ಕುಣಿದು ಕುಪ್ಪಳಿಸಲಿದ್ದಾರಂತೆ. ಇದಾದ ಬಳಿಕ ಎಲ್ಲರೂ ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರಂತೆ. ಜುಲೈ 12ರಂದು ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ 2ನೇ ಅದ್ಧೂರಿ ಪ್ರೀ-ವೆಡ್ಡಿಂಗ್; ಹೇಗಿದೆ ತಯಾರಿ ಗೊತ್ತಾ?

https://newsfirstlive.com/wp-content/uploads/2024/05/ANANTH_AMBANI.jpg

Load More