newsfirstkannada.com

ಅಬ್ಬಬ್ಬಾ.. ಮುಖೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ 2ನೇ ಅದ್ಧೂರಿ ಪ್ರಿ-ವೆಡ್ಡಿಂಗ್

Share :

Published May 17, 2024 at 6:25am

  ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್

  ಮುಖೇಶ್ ಅಂಬಾನಿ ಪುತ್ರನ 2ನೇ ಪ್ರೀ ವೆಡ್ಡಿಂಗ್​ ಕಾರ್ಯಕ್ರಮಕ್ಕೆ ಯಾರಿಗೆಲ್ಲಾ ಆಹ್ವಾನ

  ಸಮುದ್ರದ ಮಧ್ಯೆ ಮುಖೇಶ್​ ಅಂಬಾನಿ ಪುತ್ರನ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ಸಡಗರ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್​ ಅದ್ಧೂರಿಯಾಗಿ ನೆರವೇರಿತ್ತು. ಗುಜರಾತ್​ನ ಕಿರೀಟ ನಗರಿ ಎಂದೇ ಖ್ಯಾತಿಯಾಗಿರುವ ಜಾಮ್​ನಗದಲ್ಲಿ ಅಂಬಾನಿ ಮಗನ ಅದ್ಧೂರಿ ಪ್ರೀ ವೆಡ್ಡಿಂಗ್ ಜಾಮ್​ ಜಾಮ್​ ಆಗಿ​ ನಡೆದಿತ್ತು. 3ನೇ ದಿನ ನಡೆದ ಅದ್ಧೂರಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಅನೇಕ ಗಣ್ಯ ವ್ಯಕ್ತಿಗಳು, ಸಿನಿಮಾ ಸೆಲೆಬ್ರಿಟಿಗಳು ಮತ್ತು ಇನ್ನಿತರೆ ವಿಐಪಿಗಳು ಬಂದಿದ್ದರು.

ಇದನ್ನೂ ಓದಿ: ಮತ್ತೆ​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ; ಫ್ಯಾನ್ಸ್​ ಫುಲ್ ಶಾಕ್​; ಏನಂದ್ರು ಗೊತ್ತಾ?

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಜೊತೆಗೆ ಕೈಗಾರಿಕೋದ್ಯಮಿ ವೀರೆನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ನಿಶ್ಚಯವಾಗಿದೆ. ಹೀಗಾಗಿ ಈ ಇಬ್ಬರ ಮದುವೆಗೆ ಸಕಲ ಸಿದ್ದತೆ ನಡೆಯುತ್ತಿದೆ. ಆದರೆ ಇದರ ಮಧ್ಯೆ ಎರಡನೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮವನ್ನ ಹೋಸ್ಟ್ ಮಾಡುಲು ಸಿದ್ಧತೆ ನಡೆಸುತ್ತಿದ್ದಾರೆ. ಹೌದು, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪ್ರಿ-ವೆಡ್ಡಿಂಗ್ ಆಚರಣೆಯನ್ನು ಆಯೋಜಿಸಲು ಸಿದ್ಧರಾಗಿದ್ದಾರೆ. ಅಂಬಾನಿ ಕುಟುಂಬವು ಎರಡನೇ ಪ್ರಿ-ವೆಡ್ಡಿಂಗ್ ಸಮಾರಂಭವನ್ನು ಆಯೋಜಿಸಲಿದೆ ಎಂದು ವರದಿಯಾಗಿದೆ.

ಇನ್ನು ಈ ಕಾರ್ಯಕ್ರಮಕ್ಕಾಗಿ ದಕ್ಷಿಣ ಫ್ರಾನ್ಸ್‌ನ ಕರಾವಳಿಯಲ್ಲಿ ಒಂದು ಹಡಗನ್ನು ಇದಕ್ಕೆ ಬುಕ್ ಮಾಡಲಿದ್ದಾರಂತೆ. ಈ ಕ್ರೂಸ್ ಹಡಗು ಇಟಲಿಯಿಂದ ಹೊರಟು ದಕ್ಷಿಣ ಫ್ರಾನ್ಸ್‌ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಈ ಎರಡನೇ ಪ್ರಿ-ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ಒಟ್ಟು 800 ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಈ ಹಡಗಿನಲ್ಲಿ 600 ಸಿಬ್ಬಂದಿಗಳು ಇರಲಿದ್ದು, ಅವರು ಆ 800 ಅತಿಥಿಗಳ ವಸತಿಯಿಂದ ಆಹಾರದವರೆಗೆ ಎಲ್ಲಾ ಅಗತ್ಯತೆಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಮೇ 28ರಂದು ಇಟಲಿಯಿಂದ ಈ ಕ್ರೂಸ್ ಹಡಗು ಹೊರಡಲಿದ್ದು, ಸುಮಾರು 4,380 ಕಿಲೋಮೀಟರ್ ದೂರ ಇದು ಸಾಗಲು ತಯಾರಿ ನಡೆಯುತ್ತಿದೆಯಂತೆ. ವಿಶೇಷ ಎಂದರೆ ಎರಡನೇ ಪ್ರಿ-ವೆಡ್ಡಿಂಗ್​ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅತಿಥಿಗಳ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆಯಂತೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಇದೇ ವರ್ಷದ ಜುಲೈ 12 ರಂದು ವಿವಾಹವಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ.. ಮುಖೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ 2ನೇ ಅದ್ಧೂರಿ ಪ್ರಿ-ವೆಡ್ಡಿಂಗ್

https://newsfirstlive.com/wp-content/uploads/2024/05/ANANTH_AMBANI.jpg

Load More