/newsfirstlive-kannada/media/post_attachments/wp-content/uploads/2024/07/anath-radika.jpg)
ಮುಂಬೈ: ಜುಲೈ 12ರಂದು ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯನ್ನು ಬಹಳ ಅದ್ಧೂರಿಯಾಗಿ ಮಾಡಿದ್ದರು ಸುಮಾರು 5 ಸಾವಿರ ಕೋಟಿ ವೆಚ್ಚದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ಮದುವೆಯನ್ನು ಅಂಬಾನಿ ಕುಟುಂಬಸ್ಥರು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಮಾಡಿದ್ದರು. ಈ ದುಬಾರಿ ಮದುವೆಗೆ ದೇಶ ವಿದೇಶದ ಗಣ್ಯರ ಆಗಮಿಸಿದ್ದರು.
ಇದನ್ನೂ ಓದಿ:ಆಮಂತ್ರಣ ಪತ್ರಿಕೆಯಿಂದ ಮದುವೆವರೆಗೆ.. ಅಂಬಾನಿ ಖರ್ಚು ಮಾಡಿದ್ದು ಎಷ್ಟು ಸಾವಿರ ಕೋಟಿ ಗೊತ್ತಾ?
ಆದರೆ ಇದರ ಮಧ್ಯೆ ಮುಖೇಶ್ ಅಂಬಾನಿ ಅವರ ಫೇವರಿಟ್ ಕೆಫೆ ಮೈಸೂರು ಓನರ್ ಶಾಂತೇರಿ ನಾಯಕ್ ಅವರು ಬಂದಿದ್ದು ವಿಶೇಷವಾಗಿತ್ತು. ಅಂಬಾನಿ ಮದುವೆಗೆ ಬಂದಿದ್ದ ಕೆಫೆ ಮೈಸೂರು ಓನರ್ ಶಾಂತೇರಿ ನಾಯಕ್ ಅವರನ್ನು ನೋಡಿದ ಕೂಡಲೇ ಅನಂತ್ ಅಂಬಾನಿ ಫುಲ್ ಖುಷ್ ಆಗಿದ್ದರು. ಆ ಕೂಡಲೇ ಅನಂತ್ ಅಂಬಾನಿ ಪತ್ನಿ ರಾಧಿಕಾರನ್ನು ಜೋರಾಗಿ ಕೂಗಿ ನೋಡು ರಾಧಿಕಾ ಯಾರು ಬಂದಿದ್ದಾರೆ. ಕೆಫೆ ಮೈಸೂರು ಓನರ್ ಬಂದಿದ್ದಾರೆ ಬಾ ಅಂತಾ ಹೇಳಿದ್ದಾರೆ. ಆ ಕೂಡಲೇ ಬಂದ ರಾಧಿಕಾ ತುಂಬಾ ಧನ್ಯವಾದಗಳು, ನಿಮ್ಮಿಂದಾಗಿ ನಾವು ಪ್ರತಿ ಶನಿವಾರ ಹಾಗೂ ಭಾನುವಾರ ನಾವು ನಿಜವಾಗಿಯೂ ಎದುರು ನೋಡುತ್ತಿದ್ದೇವೆ. ನಾವು ನಮ್ಮ ಮನೆಯಲ್ಲಿ ನಿಮ್ಮ ಆಹಾರವನ್ನು ತಿನ್ನುತ್ತೇವೆ ಎಂದು ಹೇಳುತ್ತಾ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಕೆಫೆ ಮೈಸೂರು ಓನರ್ ಅವರ ಪಾದವನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿಬಿಟ್ಟಿದ್ದಾರೆ.
The elderly lady here is Mrs.Shanteri Nayak,owner of Cafe Mysore,a very popular South Indian eatery in Matunga,Mumbai.
Mukesh Ambani has been going there since his college days nd his kids have grown up eating from there,it’s a weekly ritual in their house on Sundays.
They didn’t… pic.twitter.com/FVNshgz1Vg— Lotus ??? (@LotusBharat)
The elderly lady here is Mrs.Shanteri Nayak,owner of Cafe Mysore,a very popular South Indian eatery in Matunga,Mumbai.
Mukesh Ambani has been going there since his college days nd his kids have grown up eating from there,it’s a weekly ritual in their house on Sundays.
They didn’t… pic.twitter.com/FVNshgz1Vg— Lotus 🪷🇮🇳 (@LotusBharat) July 16, 2024
">July 16, 2024
ದಿ ಮಾಟುಂಗಾ ಪ್ರದೇಶದಲ್ಲಿರೋ ಕೆಫೆ ಮೈಸೂರು
ಮುಖೇಶ್ ಅಂಬಾನಿ ದಕ್ಷಿಣ ಭಾರತದ ಆಹಾರವನ್ನು ಸಹ ಇಷ್ಟಪಡ್ತಾರೆ. ವಿಶೇಷವಾಗಿ ಇಡ್ಲಿ ಸಾಂಬಾರ್ ತಿನ್ನಲು ಇಷ್ಟ ಪಡ್ತಾರಂತೆ. ಮುಂಬೈನ ಮಾಟುಂಗಾದಲ್ಲಿ, ವಿಶೇಷವಾಗಿ ಕಿಂಗ್ಸ್ ಸರ್ಕಲ್ನಲ್ಲಿರುವ ಪ್ರಸಿದ್ಧ ದಕ್ಷಿಣ ಭಾರತದ ರೆಸ್ಟೋರೆಂಟ್ ಕೆಫೆ ಮೈಸೂರು ಅವರ ನೆಚ್ಚಿನ ಊಟದ ಸ್ಥಳಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ರೆಸ್ಟೋರೆಂಟ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT) ಗೆ ಹತ್ತಿರದಲ್ಲಿದೆ, ಅಲ್ಲಿ ಮುಖೇಶ್ ಅಂಬಾನಿ ಹಿಂದೆ ರಾಸಾಯನಿಕ ಎಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದಿದ್ದರು. ಕೆಫೆ ಮೈಸೂರು ಬಗ್ಗೆ ಸಾಕಷ್ಟು ಭಾರೀ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಹೇಳಿಕೊಂಡಿದ್ದರು. 1970ರ ದಶಕದಲ್ಲಿ ಮಾಟುಂಗಾದಲ್ಲಿ ಮುಖೇಶ್ ಅಂಬಾನಿ ಅವರ ಕಾಲೇಜು ದಿನಗಳಿಂದಲೂ ನೆಚ್ಚಿನ ರೆಸ್ಟೋರೆಂಟ್ ಆಗಿದೆ. ಕೆಫೆ ಮೈಸೂರು ಮುಂಬೈನ ಮಾಟುಂಗಾ ಪ್ರದೇಶದಲ್ಲಿರೋ ಅನೇಕ ತಿನಿಸುಗಳಲ್ಲಿ ಒಂದಾಗಿದೆ.
ಇದೇ ಕೆಫೆ ಮೈಸೂರು ಮುಖೇಶ್ ಅಂಬಾನಿಗಳೊಂದಿಗೆ 50 ವರ್ಷಗಳ ಸುದೀರ್ಘ ಸಂಬಂಧವನ್ನು ಹೊಂದಿದೆ. ಕೆಫೆ ಮೈಸೂರು ಮುಖೇಶ್ ಅಂಬಾನಿ ಅವರ ಕಾಲೇಜು ದಿನಗಳಿಂದಲೂ ಅವರ ಗೋ-ಟು ರೆಸ್ಟೋರೆಂಟ್ ಆಗಿತ್ತು. ಅಂಬಾನಿ ಕುಟುಂಬವು ಪ್ರತಿ ವಾರದ ಕೊನೆಯಲ್ಲಿ ಕೆಫೆ ಮೈಸೂರು ತಿಂಡಿಯನ್ನ ತರೆಸಿಕೊಂಡು ತಿನ್ನುತ್ತಾರೆ. ಅದರಲ್ಲೂ ಇಡ್ಲಿ ಎಂದರೆ ಅಂಬಾನಿ ಕುಟುಂಬಸ್ಥರಿಗೆ ಪಂಚ ಪ್ರಾಣ ಎಂದು ಕೆಫೆ ಮಾಲೀಕ ನರೇಶ್ ಅವರು ಹೇಳಿಕೊಂಡಿದ್ದಾರೆ. ನಾವು ದೋಸೆಗಳಿಗೆ ಹಿಟ್ಟಿನ ಜೊತೆಗೆ ಇಡ್ಲಿ, ಸಾಂಬಾರ್ ಮತ್ತು ಚಟ್ನಿಯನ್ನು ಸಹ ಕಳುಹಿಸುತ್ತೇವೆ ಎಂದಿದ್ದಾರೆ. ಇನ್ನು, ಈಗಲೂ ಕೂಡ ಸಾಕಷ್ಟು ಗ್ರಾಹಕರು ಕೆಫೆ ಮೈಸೂರಿನಲ್ಲಿ ಪೆರಿ-ಪೆರಿ ಇಡ್ಲಿ ಫ್ರೈ ಮತ್ತು ಪೆರಿ-ಪೆರಿ ದೋಸೆ ಎಂದರೆ ಇಷ್ಟ ಪಡುತ್ತಾರೆ. 100 ಆಸನಗಳನ್ನು ಒಳಗೊಂಡ ರೆಸ್ಟೋರೆಂಟ್ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ ಮತ್ತು ಬುಧವಾರ ಮುಚ್ಚಿರುತ್ತದೆ. ದಕ್ಷಿಣ ಭಾರತದ ಹಲವಾರು ರೆಸ್ಟೋರೆಂಟ್ಗಳು ಇದ್ದರು, ಮಾಟುಂಗಾ ಪೂರ್ವ ಪ್ರದೇಶದಲ್ಲಿರೋ ಕೆಫೆ ಮೈಸೂರು ಯಾವಾಗಲೂ ಹೌಸ್ ಫುಲ್ ಆಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ