ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ
ಅನಂತ್-ರಾಧಿಕಾ ಜೋಡಿಯ ಫೋಟೋಗಳು ವೈರಲ್ ಆಗಿವೆ
ಅದ್ದೂರಿ ಮದುವೆ ಕಾರ್ಯಕ್ರಮಕ್ಕೆ ಯಾರೆಲ್ಲ ಬಂದಿದ್ದಾರೆ..?
ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹವಾದರು. ಮದುವೆಯ ಬೆನ್ನಲ್ಲೇ ನವ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹೊರಬಿದ್ದಿವೆ.
ನಿನ್ನೆ ಮಧ್ಯರಾತ್ರಿ 12:30ರ ವೇಳೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಎಲ್ಲಾ ಸಾಂಪ್ರದಾಯಿಕ ವಿಧಿವಿಧಾನಗಳು ಪೂರ್ಣಗೊಂಡಿವೆ. ಅನಂತ್ ಅಂಬಾನಿ ಕೆಂಪು ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ರೆ, ರಾಧಿಕಾ ಬಿಳಿ ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ.
ಇದನ್ನೂ ಓದಿ:ಗಂಭೀರ್ ಆಯ್ಕೆ ಹಿಂದೆ ಸಿಕ್ಕಾಪಟ್ಟೆ ಲೆಕ್ಕಾಚಾರ.. ಎಷ್ಟು ಕೋಟಿ ಸಂಭಾವನೆ ಪಡೀತಾರೆ ಕೋಚ್..?
ರಾಧಿಕಾ-ಅನಂತ್ ಮದುವೆಗೆ ಗಣ್ಯರ ದಂಡು ಆಗಮಿಸಿದೆ. ಜಾಕಿ ಶ್ರಾಫ್, ಸಲ್ಮಾನ್ ಖಾನ್, ಅನಿಲ್ ಕಪೂರ್, ಮಾಧುರಿ ದೀಕ್ಷಿತ್, ಪ್ರಿಯಾಂಕಾ ಚೋಪ್ರಾ, ರಣವೀರ್ ಸಿಂಗ್, ಅರ್ಜುನ್ ಕಪೂರ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್ ಮತ್ತು ಖುಷಿ ಕಪೂರ್ ಸೇರಿದಂತೆ ಸ್ಟಾರ್ ಸೆಲೆಬ್ರಿಟಿಗಳು ಆಗಮಿಸಿದ್ದಾರೆ.
ಸಂಗೀತ ಮಾಂತ್ರಿಕ ಎಆರ್ ರೆಹಮಾನ್, ಸೌತ್ ಸೂಪರ್ ಸ್ಟಾರ್ ರಜನಿಕಾಂತ್, ನಿರ್ದೇಶಕ ಅಟ್ಲಿ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಕ್ರಿಕೆಟರ್ಗಳಾದ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಮುಂತಾದವರು ಮದುವೆಗೆ ಅತಿಥಿಯಾಗಿದ್ದಾರೆ. ದೇಶ-ವಿದೇಶಗಳಿಂದಲೂ ಗಣ್ಯರು ಆಗಮಿಸಿದ್ದಾರೆ.
ಇದನ್ನೂ ಓದಿ:ಎಷ್ಟೇ ದೊಡ್ಡವರಾದರೂ ಹಿಂದಿನ ಉಪಕಾರ ಮರೆಯಲಿಲ್ಲ.. ರೋಹಿತ್ ಜೀವನ ಬದಲಿಸಿದ ಈ ವ್ಯಕ್ತಿ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ