newsfirstkannada.com

ಅಂಬಾನಿ ಪುತ್ರನ ಅದ್ಧೂರಿ ಪ್ರೀ ವೆಡ್ಡಿಂಗ್​ ಸಂಭ್ರಮ.. ಎಷ್ಟು ಸಾವಿರ ಕೋಟಿ ರೂಪಾಯಿ ಖರ್ಚು ಮಾಡ್ತಿದ್ದಾರೆ ಗೊತ್ತಾ?

Share :

Published February 25, 2024 at 6:57am

Update February 25, 2024 at 6:58am

    ಜಮ್ನನಗರ ಮದುವೆ ಉತ್ಸವದಲ್ಲಿ ಗಣ್ಯರು, ಉದ್ಯಮಿಗಳ ದಂಡು

    ಪ್ರೀವೆಡ್ಡಿಂಗ್​ಗೆ ಆಗಮಿಸೋ ಪ್ರತಿಯೊಬ್ಬ ಅತಿಥಿಗಳಿಗೆ ಡ್ರೆಸ್ ಕೋಡ್

    ಎಷ್ಟು ದಿನ ನಡೆಯಲಿದೆ ಗೊತ್ತಾ ಅದ್ಧೂರಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ?

ಅಂಬಾನಿ ಕುಟುಂಬದ ಮದುವೆ ಅಂದ್ರೆ ಅಲ್ಲಿ ಸಂಭ್ರಮ ಸಡಗರದ ಜೊತೆಗೆ ಆಡಂಬರದ ಅಬ್ಬರವೂ ಇರುತ್ತೆ. ಸಾವಿರ ಕೋಟಿ ಖರ್ಚಿನಲ್ಲಿ ಕಿರಿಯ ಪುತ್ರನ ಮದುವೆ ಸಮಾರಂಭವನ್ನ ನೆರವೇರಿಸಲು ಅಂಬಾನಿ ಸಜ್ಜಾಗಿದ್ದಾರೆ. ಪುತ್ರನ ಪ್ರೀ ವೆಡ್ಡಿಂಗ್​ನಲ್ಲಿ​ ಸ್ವರ್ಗವನ್ನ ಧರೆಗಿಳಿಸಲು ಅಂಬಾನಿ ಅಣಿಯಾಗಿದ್ದಾರೆ.

ದೇಶದ ಟಾಪ್ ಕುಬೇರ ಮುಖೇಶ್ ಅಂಬಾನಿ ಕುಟುಂಬದ 1 ಸಾವಿರ ಕೋಟಿ ರೂಪಾಯಿಯ ಮದುವೆಗೆ ದಿನಗಣನೆ ಶುರುವಾಗಿದೆ. ಮದುವೆಗೂ ಮುನ್ನ ನಡೆಯುತ್ತಿರೋ ಪ್ರೀ ವೆಡ್ಡಿಂಗ್ ಉತ್ಸವದ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಯಾಕಂದ್ರೆ, ಅಂಬಾನಿ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್ ಉತ್ಸವದಲ್ಲಿ ಸ್ವರ್ಗವನ್ನೇ ಧರೆಗಿಳಿಸಲಾಗ್ತಿದೆ. ಅಂಬಾನಿ ಪುತ್ರನ ವಿವಾಹದಲ್ಲಿ ಸೆಲೆಬ್ರಿಟಿಗಳ ದಂಡೇ ಕಾಣಿಸಿಕೊಳ್ಳಲಿದೆ.

ಇದನ್ನೂ ಓದಿ: ಅಂಬಾನಿ ನಿವಾಸದಲ್ಲಿ ಮದುವೆ ಸಂಭ್ರಮ ಆರಂಭ.. ಅತಿಥಿಗಳಿಗೆ ಸಿಗಲಿದೆ ಸ್ಪೆಷಲ್ ಗಿಫ್ಟ್..!

1,000 ಕೋಟಿ ರೂ. ವೆಚ್ಚದಲ್ಲಿ ಅಂಬಾನಿ ಪುತ್ರನ ಮದುವೆ

1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮುಖೇಶ್ ಅಂಬಾನಿ ತಮ್ಮ ಕಿರಿಯ ಪುತ್ರನ ಮದುವೆಗೆ ಸಕಲ ತಯಾರಿ ಆರಂಭಿಸಿದ್ದಾರೆ. ಕಳೆದ ವರ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಯ ಎಂಗೇಜ್‌ಮೆಂಟ್ ನಡೆದಿತ್ತು. ಎಂಗೇಜ್‌ಮೆಂಟ್ ವೈಭವ ನೋಡಿಯೇ ದೇಶವೇ ಅಚ್ಚರಿಗೊಂಡಿತ್ತು. ಇದೀಗ ತಮ್ಮ ಕಿರಿಯ ಪುತ್ರನ ಮದುವೆ ದಿನಾಂಕವನ್ನೂ ಫಿಕ್ಸ್ ಮಾಡಿರೋ ಅಂಬಾನಿ, ಜುಲೈ ತಿಂಗಳಲ್ಲಿ ಅನಂತ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ಅದ್ಧೂರಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ.

ಅಂಬಾನಿ ಅದ್ಧೂರಿ!

  • ಗುಜರಾತ್‌ನ ಜಾಮ್‌ನಗರದಲ್ಲಿ ಫಾರ್ಮ್‌ ಹೌಸ್​ನಲ್ಲಿ ಮದುವೆ
  • ಮಾರ್ಚ್ 1ರಿಂದ ಮಾ. 3ರವರೆಗೆ 3 ದಿನಗಳ ಅದ್ಧೂರಿ ಉತ್ಸವ
  • ಉದ್ಯಮಿ ವಿರೆನ್ ಮರ್ಚೆಂಟ್‌ ಪುತ್ರಿ ರಾಧಿಕಾ, ಅಂಬಾನಿ ಸೊಸೆ
  • ಜಾಮ್‌ನಗರ್‌ನ ಮದುವೆ ಉತ್ಸವದಲ್ಲಿ ಗಣ್ಯರು, ಉದ್ಯಮಿಗಳ ದಂಡು
  • ಪ್ರೀ ವೆಡ್ಡಿಂಗ್​ಗೆ ಆಗಮಿಸೋ ಪ್ರತಿಯೊಬ್ಬ ಅತಿಥಿಗಳಿಗೂ ಡ್ರೆಸ್ ಕೋಡ್

ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನೇ ಇಷ್ಟು ಅದ್ಧೂರಿಯಾಗಿ ಮಾಡ್ತಿರುವಾಗ ಮದುವೆ ಇನ್ನೆಷ್ಟು ಅದ್ಭುತವಾಗಿ ಮಾಡ್ತಾರೋ ಎಂಬ ಕುತೂಹಲ ಹುಟ್ಟಿದೆ. ಅಂಬಾನಿ ಕುಟುಂಬದ ಅದ್ಧೂರಿ ಮದುವೆಯ ಜಲಕ್​ ಅನ್ನ ಕಣ್ತುಂಬಿಕೊಳ್ಳೋಕೆ ಇಡೀ ದೇಶ ಕಾತುರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಪುತ್ರನ ಅದ್ಧೂರಿ ಪ್ರೀ ವೆಡ್ಡಿಂಗ್​ ಸಂಭ್ರಮ.. ಎಷ್ಟು ಸಾವಿರ ಕೋಟಿ ರೂಪಾಯಿ ಖರ್ಚು ಮಾಡ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2024/02/AMBANI_SON_1.jpg

Load More