51 ಸಾವಿರ ಹಳ್ಳಿ ಜನರಿಗೆ ಅಂಬಾನಿ ಫ್ಯಾಮಿಲಿ ಔತಣಕೂಟ.. ಎಷ್ಟು ದಿನ ನಡೆಯುತ್ತೆ ಈ ಅನ್ನ ಸೇವಾ?

author-image
Bheemappa
Updated On
51 ಸಾವಿರ ಹಳ್ಳಿ ಜನರಿಗೆ ಅಂಬಾನಿ ಫ್ಯಾಮಿಲಿ ಔತಣಕೂಟ.. ಎಷ್ಟು ದಿನ ನಡೆಯುತ್ತೆ ಈ ಅನ್ನ ಸೇವಾ?
Advertisment
  • ಹಳ್ಳಿ ಜನರಿಗೆ ಮದುವೆ ಊಟ ಹಾಕಿಸುತ್ತಿರುವ ಅಂಬಾನಿ ಕುಟುಂಬ
  • ಜನರಿಗೆ ಸ್ವತಃ ಊಟ ಬಡಿಸಿದ ಅನಂತ್ ಮತ್ತು ರಾಧಿಕಾ ಮರ್ಚೆಂಟ್ಸ್​
  • ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಎಲ್ಲರಿಗೂ ಊಟ ಬಡಿಸಿದ ಜೋಡಿ

ಗಾಂಧಿನಗರ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಸಂಭ್ರಮ ಶುರುವಾಗಿದೆ. ಮದುವೆಗೆ 3 ತಿಂಗಳು ಬಾಕಿ ಇರುವಾಗಲೇ ಪ್ರೀ ವೆಡ್ಡಿಂಗ್ ಮಹೋತ್ಸವ ನಡೆಸಲಾಗುತ್ತಿದೆ. ಗುಜರಾತ್‌ನ ಜಾಮ್‌ನಗರದಲ್ಲಿ 3 ದಿನ ಮೂರು ಥೀಮ್‌ಗಳಲ್ಲಿ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ ನಡೆಯಲಿದೆ. ಬರೋಬ್ಬರಿ ₹1 ಸಾವಿರ ಕೋಟಿಯ ಮದುವೆ ಕೇವಲ ಭಾರತವಲ್ಲ, ವಿಶ್ವದ ಕಣ್ಣರಳಿಸಿ ನೋಡುವಂತೆ ಮಾಡಿದೆ. ಸದ್ಯ ಸಂಭ್ರಮದಲ್ಲಿರುವ ಅಂಬಾನಿ ಫ್ಯಾಮಿಲಿಯ ಸದಸ್ಯರು 51 ಸಾವಿರ ಹಳ್ಳಿಯ ಜನರಿಗೆ ರುಚಿಕರವಾದ ಮದುವೆ ಭೋಜನ ಬಡಿಸಿದ್ದಾರೆ.

publive-image

ಅನಂತ್ ಅಂಬಾನಿಯ ಮದುವೆ ಸಮಾರಂಭ ಮುಗಿಯುವವರೆಗೆ ಜಾಮ್‌ನಗರದ ಹಳ್ಳಿಗಳಲ್ಲಿ ಅಂಬಾನಿ ಫ್ಯಾಮಿಲಿಯಿಂದ ಅನ್ನ ಸೇವಾ ಕಾರ್ಯಕ್ರಮ ಮುಂದುವರೆಯಲಿದೆ. ಈ ಅನ್ನ ಸೇವಾದಲ್ಲಿ ಗುಜರಾತ್ ಸ್ಟೈಲ್​ನಲ್ಲಿ ಎಲ್ಲ ತರಹ ವಿಧ ವಿಧವಾದ ಅಡುಗೆಗಳನ್ನು ತಯಾರಿಸಿ ಜನರಿಗೆ ಬಡಿಸಲಾಗುತ್ತದೆ. ಈಗಾಗಲೇ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್, ಮುಖೇಶ್ ಅಂಬಾನಿ, ನಿತಾ ಅಂಬಾನಿ ಸೇರಿದಂತೆ ಅಂಬಾನಿ ಫ್ಯಾಮಿಲಿಯಲ್ಲಿನ ಎಲ್ಲರೂ ಜೋಗ್ವಾಡ್ ಗ್ರಾಮದಲ್ಲಿ 51 ಸಾವಿರ ಜನರಿಗೆ ಸ್ವತಹ ತಾವೇ ಊಟ ಬಡಿಸಿ ಖುಷಿ ವ್ಯಕ್ತಪಡಿಸಿದ್ದಾರೆ.

publive-image

ಜನರಿಗೆ ಅನ್ನ ಸೇವೆ ಮಾಡುವಾಗ ಅಂಬಾನಿ ಕುಟುಂಬವೆಲ್ಲ ಸಾಂಪ್ರದಾಯಿಕ ಭಾರತದ ಶೈಲಿ ಬಟ್ಟೆಗಳನ್ನು ಧರಿಸಿಕೊಂಡಿದ್ದರು. ಅನಂತ್ ಮತ್ತು ರಾಧಿಕಾ ಅಂತೂ ಥೇಟ್ ಹಳ್ಳಿಯವರಂತೆ ಕಾಣುವ ಉಡುಗೆಗಳನ್ನು ತೊಟ್ಟಿದ್ದರು. ಮುಖೇಶ್ ಅಂಬಾನಿ ದಂಪತಿ ಕೂಡ ಸಾಮಾನ್ಯರಂತೆ ಉಡುಗೆಗಳನ್ನು ಧರಿಸಿದ್ದರು.

publive-image

ಈ ಹಿಂದೆ ಸಂದರ್ಶನದಲ್ಲಿ ಜಾಮ್‌ನಗರದಲ್ಲೇ ಮದುವೆ ಮಾಡಿಕೊಳ್ಳುತ್ತಿರುವುದು ಏಕೆ ಎಂಬುದನ್ನು ಅನಂತ್ ಅಂಬಾನಿ ಹೇಳಿದ್ದಾರೆ. ನಾವು ಬೆಳೆದಿರುವುದು ಈ ನೆಲದಿಂದ. ಹೀಗಾಗಿ ಮದುವೆ ಇಲ್ಲಿಯೇ ಮಾಡಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿತ್ತು. ಇದು ನಮ್ಮ ಅಜ್ಜ, ಅಜ್ಜಿ ಹಾಗೂ ಅಪ್ಪನ ಜನ್ಮಭೂಮಿಯಾಗಿದ್ದು ಇದು ನಮ್ಮ ಮನೆ. ನಾವು ಮೂಲತವಾಗಿ ಇಲ್ಲಿಯವರೇ ಆಗಿದ್ದೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment