ಅನಂತ್-ರಾಧಿಕಾ ಮದುವೆಗೆ ಬನಾರಸ್​​ನಿಂದ ಸೀರೆ.. ಅವುಗಳ ಬೆಲೆ ಕೇಳಿದ್ರೆ ಗಾಬರಿ ಆಗ್ತೀರಿ..!

author-image
Ganesh
Updated On
ಹನಿಮೂನ್​ ಮೂಡ್​​ನಲ್ಲಿ ಅನಂತ್ ಅಂಬಾನಿ.. ಒಂದು ರಾತ್ರಿ ಕಳೆಯಲು ರೂಮ್​​ಗೆ ಕಟ್ಟುತ್ತಿರುವ ಹಣ ಎಷ್ಟೆಂದರೆ.. ಅಬ್ಬಾ!
Advertisment
  • ಅಂಬಾನಿ ಕುಟುಂಬದಿಂದ ಸಾಮೂಹಿಕ ಮದುವೆ ಆಯೋಜನೆ
  • ಜುಲೈ 2 ರಂದು ಬಡ ಜೋಡಿಗಳ ಸಾಮೂಹಿಕ ಮದುವೆ ನಡೆಯಲಿದೆ
  • ಈ ಮದುವೆಗೆ ಮುಖೇಶ್ ಅಂಬಾನಿ, ನೀತಾ ಅಂಬಾನಿ ಭಾಗಿ

ದೇಶದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಜುಲೈ 12 ರಂದು ನಡೆಯಲಿದೆ. ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ.

ಇದೀಗ ಅಂಬಾನಿ ಕುಟುಂಬ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕೆಳ ಮತ್ತು ಬಡ ವರ್ಗದ ಜನರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಬಗ್ಗೆ ಅಂಬಾನಿ ಕುಟುಂಬದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ:IND vs RSA ವಿಶ್ವಕಪ್​ ಫೈನಲ್​ಗೆ ಮಳೆಯ ಕಾಟ.. ಪಂದ್ಯ ಕ್ಯಾನ್ಸಲ್ ಆದರೆ ಟ್ರೋಫಿ ಯಾವ ತಂಡಕ್ಕೆ..?

publive-image

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಪೂರ್ವ ಸಂಭ್ರಮದ ಸಲುವಾಗಿ ಸಾಮೂಹಿಕ ಮದುವೆ ಆಯೋಜನೆಗೊಂಡಿದೆ. ಜುಲೈ 2 ರಂದು ಸಂಜೆ 4:30 ಕ್ಕೆ ಪಾಲ್ಘರ್‌ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಕೂಡ ಭಾಗವಹಿಸಲಿದ್ದಾರೆ.

ಬನಾರಸ್‌ನಿಂದ ಚಿನ್ನ, ಬೆಳ್ಳಿ, ಸೀರೆ
ಮತ್ತೊಂದೆಡೆ ಅನಂತ್ ಅಂಬಾನಿ ಮದುವೆಗೆ ನಿರಂತರ ತಯಾರಿ ನಡೆಯುತ್ತಿದೆ. ಅವರ ಮದುವೆಗಾಗಿ ಬಟ್ಟೆಗಳ ಆರ್ಡರ್ ಬರುತ್ತಿವೆಯಂತೆ. ಬನಾರಸ್​ನಿಂದ ವಿಶೇಷ ಸೀರೆಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಗೋಲಘಾಟ್ ವಾರಣಾಸಿಯ ಕೈಮಗ್ಗದ ಮಾಲೀಕ ಅಕ್ಷಯ್ ಕುಶ್ವಾಹಾ ಮಾತನಾಡಿ.. ಅಂಬಾನಿ ಕುಟುಂಬ ಚಿನ್ನ ಮತ್ತು ಬೆಳ್ಳಿ ಝರಿಯಿಂದ ಮಾಡಿದ ಸೀರೆಗಳನ್ನು ಆರ್ಡರ್ ಮಾಡಿದೆ. ಅಂಬಾನಿ ಕುಟುಂಬ ಮುಂಬೈನಿಂದ ಕೆಲವು ಸೀರೆಗಳನ್ನು ಆರ್ಡರ್ ಮಾಡಿದ್ದಾರೆ. ಮದುವೆಗೆ ಹೋಗುವ ಎಲ್ಲಾ ಸೀರೆಗಳು ಇಲ್ಲಿಂದ ಬರುತ್ತಿವೆ. ಈ ಸೀರೆಗಳನ್ನು ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅವುಗಳ ಬೆಲೆ 1 ಲಕ್ಷದಿಂದ 5 ಲಕ್ಷದವರೆಗೆ ಇರುತ್ತದೆ. ನಾವು 10-15 ಸೀರೆಗಳನ್ನು ತಯಾರಿಸಬೇಕಾಗಿದೆ. ದೀರ್ಘಕಾಲದವರೆಗೆ ಕೆಲಸ ನಡೆಯುತ್ತಿದೆ. ಕೆಲವು ಸೀರೆಗಳನ್ನು ಅಲ್ಲಿಗೆ ತಲುಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ವಿರುದ್ಧ ಜನ ಭಾರೀ ಆಕ್ರೋಶ.. ಆದರೂ ಸ್ನೇಹಿತನ ಬಿಟ್ಟು ಕೊಡದ ಕ್ಯಾಪ್ಟನ್ ರೋಹಿತ್ ಶರ್ಮಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment