/newsfirstlive-kannada/media/post_attachments/wp-content/uploads/2024/07/ANANT-AMBANI-3.jpg)
ಶ್ರೀಮಂತ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅದ್ದೂರಿ ಮದುವೆಗೆ ದೇಶ, ವಿದೇಶಗಳಿಂದ ದೊಡ್ಡ ದೊಡ್ಡ ಗಣ್ಯರು ಆಗಮಿಸಿದ್ದರು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಸಿನಿಮಾ ಕೂಡ ರೆಡಿಯಾಗಿದೆ. ಜನಪ್ರಿಯ ನಿರ್ದೇಶಕ ಅಟ್ಲೀ ಕುಮಾರ್ (Atlee Kumar) 10 ನಿಮಿಷಗಳ ಅನಿಮೇಷನ್ (Animated film) ಸಿನಿಮಾ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.
ಇದನ್ನೂ ಓದಿ:ಮುಕೇಶ್ ಅಂಬಾನಿ ಅಲ್ಲವೇ ಅಲ್ಲ.. ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಹೆಚ್ಚು ಷೇರು ಹೊಂದಿರೋದು ಯಾರು ಗೊತ್ತೇ..?
ಯೂಟ್ಯೂಬರ್ ರಣವೀರ್ ಅಲಹಬಾಡಿಯಾ (Ranveer Allahbadia) ಅಮೆರಿಕನ್ ಕಾಮೆಡಿಯನ್ ಆಕಾಶ್ ಸಿಂಗ್ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅನಂತ್ ಅಂಬಾನಿ ಅವರ ಮದುವೆಯ ಅನೇಕ ಕಾರ್ಯಕ್ರಮಗಳಲ್ಲಿ ರಣವೀರ್ ಭಾಗವಹಿಸಿದ್ದರು.
ಅಟ್ಲೀ ಆ್ಯಕ್ಷನ್ ಕಟ್..!
ಅಟ್ಲೀ ಕುಮಾರ್ ಚಿತ್ರಕ್ಕೆ ನಿರ್ದೇಶ ನೀಡಿದ್ದಾರೆ. 10 ನಿಮಿಷಗಳ ಸಿನಿಮಾಗೆ ಬಿಗ್ಬಿ ಅಮಿತಾಬ್ ಬಚ್ಚನ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇದೊಂದು ಕಿರುಚಿತ್ರವಾಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯು ಜುಲೈ 12 ರಿಂದ 14 ರವರೆಗೆ ನಡೆಯಿತು. ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ.
ಇದನ್ನೂ ಓದಿ:ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿ ಯು-ಟರ್ನ್ ಹೊಡೆದ ಸಿದ್ದು ಸರ್ಕಾರ.. ಭಾರೀ ಆಕ್ರೋಶ.. ಏನಿದು ಗೊಂದಲ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ