Advertisment

ಅನಂತ್​ ಅಂಬಾನಿ, ರಾಧಿಕಾಗೆ ಗಣ್ಯರಿಂದ ಸಿಕ್ಕ ಭರ್ಜರಿ ಗಿಫ್ಟ್​ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ!

author-image
Veena Gangani
Updated On
ಅನಂತ್​ ಅಂಬಾನಿ, ರಾಧಿಕಾಗೆ ಗಣ್ಯರಿಂದ ಸಿಕ್ಕ ಭರ್ಜರಿ ಗಿಫ್ಟ್​ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ!
Advertisment
  • ಅನಂತ್ ಹಾಗೂ ರಾಧಿಕಾ ಮದುವೆಗೆ ಬಂದಿದ್ದ ಗಣ್ಯರಿಗೆ ಕೊಟ್ಟ ಉಡುಗೊರೆ ಏನು?
  • ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅನಂತ್ ಹಾಗೂ ರಾಧಿಕಾ
  • ಶಾರುಖ್ ಖಾನ್‌, ಅಮಿತಾಬ್ ಬಚ್ಚನ್, ಅಮೆಜಾನ್ ಸಿಇಒ ದಂಪತಿಗೆ ಕೊಟ್ಟಿದ್ದೇನು?

ಜುಲೈ 12ರಂದು ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆಗೆ ದೇಶ ವಿದೇಶಗಳಿಂದ ಸ್ಟಾರ್​ ನಟ ನಟಿಯರು, ರಾಜಕಾರಣಿಗಳು ಬಂದಿದ್ದರು. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಮದುವೆಗೆ ದಿಗ್ಗಜರಿಂದ ಸಾಲು ಸಾಲು ಗಿಫ್ಟ್​ ಕೊಟ್ಟಿದ್ದಾರೆ.

Advertisment

publive-image

ಇದನ್ನೂ ಓದಿ:ಅನಂತ್​ ಅಂಬಾನಿ ಮದುವೆಯಲ್ಲಿ ಬೆಂಗಳೂರು ರಾಮೇಶ್ವರಂ ಕೆಫೆ ಮೆನು; ಏನೆಲ್ಲಾ ಇದೆ ಗೊತ್ತಾ?

ಹೌದು, ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅದ್ಧೂರಿ ಮದುವೆ ಇದೀಗ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. ಬರೋಬ್ಬರಿ 5,000 ಕೋಟಿ ರೂಪಾಯಿ ಖರ್ಚು ವೆಚ್ಚದಲ್ಲಿ ಈ ಮದುವೆ ನಡೆದಿದೆ. ಮದುವೆಗೆ ಆಗಮಿಸಿದ ಗಣ್ಯರಿಗೆ 2 ಕೋಟಿ ರೂಪಾಯಿ ವಾಚ್ ಸೇರಿದಂತೆ ಹಲವು ಉಡುಗೊರೆಗಳನ್ನು ಅಂಬಾನಿ ಕುಟುಂಬ ನೀಡಿತ್ತು. ಇದರ ಜೊತೆಗೆ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್‌ಗೆ ಗಣ್ಯರು ಕೋಟಿ ಕೋಟಿ ರೂಪಾಯಿ ಗಿಫ್ಟ್ ನೀಡಿದ್ದಾರೆ.

publive-image

ಮೊದಲು ಅನಂತ್ ಹಾಗೂ ರಾಧಿಕಾ ದಂಪತಿಗೆ ತಂದೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪಾಲ್ಮ್ ಜುಮೆರಾದಲ್ಲಿ 3,000 ಚದರ ಅಡಿಯ ಮನೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ನಿಖರವಾದ ಮೌಲ್ಯ 60 ಕೋಟಿ ರೂಪಾಯಿ. ಇನ್ನು 130 ಕೋಟಿ ರೂಪಾಯಿ ಆಭರಣ, 5.42 ಕೋಟಿ ರೂಪಾಯಿ ಬೆಂಟ್ಲಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಗರ್‌ಬರ್ಗ್ ಬರೋಬ್ಬರಿ 300 ಕೋಟಿ ರೂಪಾಯಿ ಖಾಸಗಿ ಜೆಟ್‌ನ್ನು ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.

Advertisment

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ!

publive-image

ಇದರ ಜೊತೆಗೆ ಬಾಲಿವುಡ್ ನಟ ಶಾರುಖ್ ಖಾನ್‌ನಿಂದ ಪ್ಯಾರಿಸ್‌ನಲ್ಲಿ 40 ಕೋಟಿ ರೂ ಮನೆ, ಬಿಗ್​ಬಿ ಅಮಿತಾಬ್ ಬಚ್ಚನ್ 30 ಕೋಟಿ ನೆಕ್‌ಪೀಸ್ ಆಭರಣ, ಉದ್ಯಮಿ ಬಿಲ್ ಗೇಟ್ಸ್ 9 ಕೋಟಿ ರೂಪಾಯಿ ಮೌಲ್ಯದ ಡೈಮೆಂಡ್, ರಸ್ಲರ್ ಜಾನ್ ಸೀನಾ 3 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಹೀಗೆ ಸಾಲು ಸಾಲು ದಿಗ್ಗಜರು ಅನಂತ್​ ಮದುವೆಗೆ ಗಿಫ್ಟ್ ಕೊಟ್ಟಿದ್ದಾರೆ.

publive-image

ಅಮೆಜಾನ್ ಸಿಇಒ ಜೆಫ್ ಬೆಜೋಸ್ 11.50 ಕೋಟಿ ರೂಪಾಯಿ ಮೌಲ್ಯದ ಬುಗಾಟಿ ಕಾರು, ನಟ ಸಲ್ಮಾನ್ ಖಾನ್ 15 ಕೋಟಿ ರೂಪಾಯಿ ಮೌಲ್ಯದ ಸ್ಪೋರ್ಟ್ಸೈ ಬೈಕ್, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ 9 ಕೋಟಿ ರೂಪಾಯಿ ಮೌಲ್ಯದ ಮರ್ಸಡೀಸ್ ಬೆಂಜ್ ಕಾರು, ಅಕ್ಷಯ್ ಕುಮಾರ್ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೆನ್, ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಜೋಡಿ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಗಿಫ್ಟ್, ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಕಿಯಾರ ಅಡ್ವಾಣಿ ಜೋಡಿ 25 ಲಕ್ಷ ರೂಪಾಯಿ ಮೌಲ್ಯದ ಕರಕುಶಲ ಶಾಲು ಗಿಫ್ಟ್ ನೀಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment