/newsfirstlive-kannada/media/post_attachments/wp-content/uploads/2025/01/Anant-ambani.jpg)
ಉದ್ಯಮಿ ಅನಂತ್ ಅಂಬಾನಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಧರಿಸಿದ್ದ ವಾಚ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.
ಅಂದ್ಹಾಗೆ ಅನಂತ್ ಅಂಬಾನಿಗೆ ವಾಚ್‌ಗಳೆಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಅವರ ಬಳಿ ದುಬಾರಿ ಬೆಲೆಯ ವಾಚ್ಗಳಿವೆ ಎಂದು ಹೇಳಲಾಗಿದೆ. ಅನಂತ್ ಅಂಬಾನಿ ಇತ್ತೀಚೆಗೆ ಕಟ್ಟಿದ್ದ ವಾಚ್ ಎಲ್ಲರ ಸೆಳೆಯುತ್ತಿದ್ದು, ಇದರ ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರಿ.
ಅನಂತ್ ಅಂಬಾನಿ ತಮ್ಮ ಪತ್ನಿ ರಾಧಿಕಾ ಜೊತೆಯಿರುವ ವಿಡಿಯೋ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಅನಂತ್ ಅಂಬಾನಿ ವಾಚ್ ಸ್ಪೆಷಲ್ ಹೆಚ್ಚು ಅಟ್ರ್ಯಾಕ್ಟ್ ಮಾಡ್ತಿದೆ. ರಿಚರ್ಡ್ ಮಿಲ್ಲೆ (Richard Mille) ಬ್ರಾಂಡ್‌ನ ಬೆಲೆ 22 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಮೇಲಾಗಿ, ಅನಂತ್ ಅಂಬಾನಿ ಧರಿಸಿದ್ದ ಈ ಮಾದರಿಯಲ್ಲಿ ಕೇವಲ ಮೂರು ವಾಚ್ಗಳನ್ನು ಮಾತ್ರ ತಯಾರಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ರೋಹಿತ್ ಜೊತೆ ಬಿರುಕು, ಡ್ರೆಸ್ಸಿಂಗ್ ರೂಮ್ನಲ್ಲಿ ಗಲಾಟೆ -ಸುದ್ದಿಗೋಷ್ಟಿ ನಡೆಸಿ ಗಂಭೀರ್ ಹೇಳಿದ್ದೇನು?
ಅದರಲ್ಲಿ ಒಂದನ್ನು ಅನಂತ್ ಅಂಬಾನಿ ಖರೀದಿಸಿದ್ದಾರೆ. ಅನಂತ್ ಅಂಬಾನಿ ಪಾಟೆಕ್ ಫಿಲಿಪ್ (Patek Philippe), ಅಡೆಮಾರ್ಸ್ ಪಿಗುಯೆಟ್‌ನಂತಹ (Audemars Piguet) ಸೇರಿದಂತೆ ವಿವಿಧ ಬ್ರಾಂಡ್‌ಗಳ ವಾಚ್‌ಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಇನ್ನು, ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಅಡೆಮಾರ್ಸ್ ಪಿಗೆಟ್ ವಾಚ್ಗಳನ್ನು ಗಿಫ್ಟ್ ನೀಡಿದ್ದರು. ಈ ವಾಚ್‌ನ ಬೆಲೆ ಸುಮಾರು 2 ಕೋಟಿಗೂ ಅಧಿಕ.
ಇದನ್ನೂ ಓದಿ:ರೋಹಿತ್ ಶರ್ಮಾ ಬಗ್ಗೆ ಕೇಳ್ತಿದ್ದಂತೆ ಗಂಭೀರ್ ಗರಂ; ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಕೋಚ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ