Advertisment

ಅನಂತ್ ಅಂಬಾನಿ ಯಾವ SmartPhone ಬಳಸುತ್ತಾರೆ.. ಅದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ..!

author-image
Ganesh
Updated On
ಅನಂತ್ ಅಂಬಾನಿ ಯಾವ SmartPhone ಬಳಸುತ್ತಾರೆ.. ಅದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ..!
Advertisment
  • ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ
  • ಅಂಬಾನಿ ಪುತ್ರನ ಸ್ಮಾರ್ಟ್​ಫೋನ್ ಫೋಟೋ ವೈರಲ್
  • ಗಣೇಶ ಉತ್ಸವದಲ್ಲಿ ಫೋನ್​ನಲ್ಲಿ ಬ್ಯುಸಿ ಇದ್ದ ಅನಂತ್ ಅಂಬಾನಿ

ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಹೆಡ್​ಲೈನ್​ ಆಗ್ತಿದ್ದಾರೆ. ಇತ್ತೀಚೆಗೆ ರಾಧಿಕಾ ಮರ್ಚಂಟ್ ಅವರನ್ನು ವಿವಾಹವಾದರು.

Advertisment

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮನೆಯಲ್ಲಿ ಗಣೇಶ ಉತ್ಸವ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಗಣೇಶ ಉತ್ಸವದಲ್ಲಿ ಅನಂತ್ ಅಂಬಾನಿ ಫೋನ್ ಬಳಸುತ್ತಿದ್ದ ಫೋಟೋ ಒಂದು ವೈರಲ್ ಆಗಿದೆ. ಅನಂತ್ ಅಂಬಾನಿ ಬಳಸುತ್ತಿದ್ದ ಫೋನ್ ಐಫೋನ್ 15 ಪ್ರೊ ಮ್ಯಾಕ್ಸ್‌ನಂತೆ ಕಾಣುತ್ತದೆ.

ಇದನ್ನೂ ಓದಿ:Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ

iPhone 15 Pro Max ಪ್ರಸ್ತುತ 1,37,990 ರೂಪಾಯಿಗೆ ಸಿಗುತ್ತಿದೆ. ಕಳೆದ ವರ್ಷ ಇದೇ ಫೋನ್ ಭಾರತದಲ್ಲಿ 1,59,900 ರೂಪಾಯಿಗೆ ಬಿಡುಗಡೆ ಮಾಡಲಾಗಿತ್ತು. ರಿಲಯನ್ಸ್ ಡಿಜಿಟಲ್ ಇದರ ಮೇಲೆ 21,990 ರೂಪಾಯಿಗಳ ಭಾರೀ ರಿಯಾಯಿತಿ ನೀಡುತ್ತಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 5,000 ರೂಪಾಯಿ ಹಾಗೂ ವಿವಿಧ ಬ್ಯಾಂಕ್​ಗಳ ಕ್ರೆಡಿಟ್ ಕಾರ್ಡ್​ಗೂ ರಿಯಾಯಿತಿ ಜೊತೆಗೆ EMI ಆಯ್ಕೆ ಕೂಡ ಇದೆ. ಇದಲ್ಲದೇ, ಐಫೋನ್ ಸ್ಟೋರ್‌ನಿಂದಲೂ ನೇರವಾಗಿ ಖರೀದಿಸಬಹುದು.

Advertisment

iPhone 15 Pro Maxನ ವೈಶಿಷ್ಟ್ಯಗಳು
ಸ್ಮಾರ್ಟ್‌ಫೋನ್‌ಗೆ ಶಕ್ತಿ ತುಂಬಲು ನಲ್ ಬ್ಯಾಟರಿ ಬಳಸಲಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಟೈಟಾನಿಯಂ, ಬ್ಲೂ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ವೈಟ್ ಟೈಟಾನಿಯಂ ಬಣ್ಣಗಳಲ್ಲಿ ಲಭ್ಯವಿದೆ. 6.7 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಸ್ಕ್ರೀನ್​, 1290x2796 ರೆಸಲ್ಯೂಶನ್ ಹೊಂದಿದೆ. 28GB, 256GB, 512GB, 1TB ವರೆಗೆ ಇಂಟರನಲ್ ಸ್ಟೋರೆಜ್ ಹೊಂದಿದೆ. 48-ಮೆಗಾಪಿಕ್ಸೆಲ್ (f/1.78) + 12-ಮೆಗಾಪಿಕ್ಸೆಲ್ (f/2.2) + 12-ಮೆಗಾಪಿಕ್ಸೆಲ್ (f/1.78) ಹಿಂಬದಿಯ ಕ್ಯಾಮರಾ ಹೊಂದಿದೆ.

ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment