newsfirstkannada.com

ರಾಧಿಕಾ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ.. ಭಾವಿ ಪತ್ನಿಯನ್ನು ಹಾಡಿ ಹೊಗಳಿದ ಅನಂತ್ ಅಂಬಾನಿ; ಏನಂದ್ರು?

Share :

Published March 2, 2024 at 7:47pm

  ವೇದಿಕೆ ಮೇಲೆ ರಾಧಿಕಾ ಮರ್ಚೆಂಟ್ ಹಾಡಿ ಹೊಗಳಿದ ಅನಂತ್​ ಅಂಬಾನಿ

  ನಿನ್ನ ಎಲ್ಲಾ ಪ್ರೀತಿಗೆ ಥ್ಯಾಂಕ್ಯೂ ರಾಧಿಕಾ ಎಂದ ಅಂಬಾನಿಯ ಕಿರಿಯ ಪುತ್ರ

  ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್​ ಸಮಾರಂಭಕ್ಕೆ ತಾರೆಯರ ದಂಡು

ರಾಧಿಕಾರನ್ನು ನೋಡುತ್ತಿದ್ದಾಗ ನನ್ನ ಹೃದಯದಲ್ಲಿ ಭೂಕಂಪ ಮತ್ತು ಸುನಾಮಿ ಆಗಿದ್ದಂತೆ ಅನುಭವ ಆಗುತ್ತಿತ್ತು. ಥ್ಯಾಂಕ್ಯೂ ರಾಧಿಕಾ ನಿನ್ನ ಎಲ್ಲಾ ಪ್ರೀತಿಗೆ ಅಂತಾ ಭಾವಿ ಪತ್ನಿಗೆ ವೇದಿಕೆ ಮೇಲೆ ಅನಂತ್ ಅಂಬಾನಿ ಹಾಡಿ ಹೊಗಳಿದ್ದಾರೆ.

ಹೌದು, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ದೇಶ, ವಿದೇಶಗಳಿಂದ ಗಣ್ಯರು ಆಗಮಿಸಿದ್ದಾರೆ. ಇನ್ನೂ ಪ್ರೀ ವೆಡ್ಡಿಂಗ್​ ಸಮಾರಂಭದಲ್ಲಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ. ತಮ್ಮ ಪೋಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಪ್ರೀತಿಯ ಮಡದಿಯ ಬಗ್ಗೆ ಮಾತನಾಡಿದ್ದಾರೆ.

ನಾನೂ ನೂರಕ್ಕೆ ನೂರು ಅದೃಷ್ಟವಂತ. ಅದರಲ್ಲಿ ಯಾವುದೇ ಸಂದೇಹವಿಲ್ಲ. ನನಗೆ ರಾಧಿಕಾ ಹೇಗೆ ಸಿಕ್ಕಿದ್ರೂ ಗೊತ್ತಿಲ್ಲ. ರಾಧಿಕಾ ಕಳೆದ 7 ವರ್ಷಗಳಿಂದ ನನ್ನ ಜೊತೆ ಇದ್ದಾರೆ. ಆದರೆ ನಿನ್ನೆ ಮೊನ್ನೆಯಷ್ಟೇ ನನ್ನ ಭೇಟಿಯಾಗಿದ್ದಾರೆ ಅಂತಾ ಅನಿಸುತ್ತದೆ. ದಿನದಿಂದ ದಿನಕ್ಕೆ ರಾಧಿಕಾ ಅವರ ಮೇಲೆ ಇರುವ ಪ್ರೀತಿ ಜಾಸ್ತಿಯಾಗುತ್ತಾ ಹೋಯಿತು. ನನ್ನ ಭಾವ ಹೇಳಿದ್ದರು, ನಾನು ನಿಮ್ಮ ಅಕ್ಕನನ್ನು ನೋಡಿದಾಗ ನನ್ನಲ್ಲಿ ಜ್ವಾಲಾಮುಖಿ, ಮನಸ್ಸಿನಲ್ಲಿ ಕಾರಂಜಿ ಜಿಮ್ಮಿದ ಹಾಗೇ ನನ್ನ ಹೃದಯದಲ್ಲಿ ಆಗುತ್ತಿತ್ತು ಎಂದಿದ್ದರು. ಆಗ  ನಾನು ಹೇಳಿದ್ದೆ ರಾಧಿಕಾರನ್ನು ನೋಡುತ್ತಿದ್ದಾಗ ನನ್ನ ಹೃದಯದಲ್ಲಿ ಭೂಕಂಪ ಮತ್ತು ಸುನಾಮಿ ಆಗಿದ್ದಂತೆ ಅನುಭವ ಆಗುತ್ತಿತ್ತು. ನಿನ್ನ ಎಲ್ಲ ಪ್ರೀತಿಗೆ ಥ್ಯಾಂಕ್ಯೂ ರಾಧಿಕಾ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಧಿಕಾ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ.. ಭಾವಿ ಪತ್ನಿಯನ್ನು ಹಾಡಿ ಹೊಗಳಿದ ಅನಂತ್ ಅಂಬಾನಿ; ಏನಂದ್ರು?

https://newsfirstlive.com/wp-content/uploads/2024/03/anath-ambani.jpg

Load More