/newsfirstlive-kannada/media/post_attachments/wp-content/uploads/2025/04/anant-ambani3.jpg)
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಸುದ್ದಿಯಲ್ಲಿದ್ದಾರೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 170 ಕಿಲೋಮೀಟರ್ ಪಾದಯಾತ್ರೆಯನ್ನು ಆರಂಭಿಸಿದ್ದಾರೆ ಅನಂತ್ ಅಂಬಾನಿ. ಜಾಮ್ ನಗರದಿಂದ ದ್ವಾರಕಾವರೆಗೂ ಪಾದಯಾತ್ರೆ ನಡೆಸಿ ಕೊನೆಗೆ ಭಗವಾನ್ ಶ್ರೀಕೃಷ್ಣನ ದರ್ಶನವನ್ನು ಪಡೆಯಲಿದ್ದಾರೆ.
ಇದನ್ನೂ ಓದಿ:140 ಕಿ.ಮೀ ಪಾದಯಾತ್ರೆ ಆರಂಭಿಸಿದ ಅನಂತ್ ಅಂಬಾನಿ.. ಪ್ರತಿದಿನ ರಾತ್ರಿ ಹೊತ್ತಲ್ಲೇ ನಡಿಗೆ! ಕಾರಣವೇನು?
ಹೌದು, ಏಪ್ರಿಲ್ 10ರಂದು ಅನಂತ್ ಅಂಬಾನಿ ಹುಟ್ಟು ಹಬ್ಬ. ಹೀಗಾಗಿ ಅವರ 30ನೇ ಹುಟ್ಟುಹಬ್ಬದ ಪ್ರಯುಕ್ತ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. 6ರಿಂದ 7 ಗಂಟೆಗಳ ಕಾಲ ಪಾದಯಾತ್ರೆ ಮಾಡಬೇಕು ಅಂತ ಟಾರ್ಗೆಟ್ ಇಟ್ಟುಕೊಂಡಿದ್ದಾರೆ ಅನಂತ್ ಅಂಬಾನಿ. ಆದ್ರೆ ಇದು ಅನಂತ್ ಅಂಬಾನಿ ಅವರಿಗೆ ಸವಾಲಿನ ವಿಚಾರವೇ ಸರಿ. ಏಕೆಂದರೆ ಅನಂತ್ ಅಂಬಾನಿ ಅವರದ್ದು ದಢೂತಿ ದೇಹ, ಜೊತೆಗೆ ಕುಶಿಂಗ್ ಸಿಂಡ್ರೋಮ್ ಎನ್ನುವ ಅಪರೂಪದ ಕಾಯಿಲೆಯನ್ನೂ ಎದುರಿಸುತ್ತಿದ್ದಾರೆ. ಇಷ್ಟೇ ಇಲ್ಲದೇ ತೂಕ ಜಾಸ್ತಿ ಇರುವುದರಿಂದ, ಅಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಆದರೂ ಕೂಡ ಅನಂತ್ ಅಂಬಾನಿ 18 ಕಿಲೋಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ ಅಂದರೆ ಸಾಮಾನ್ಯವಾದ ಮಾತಲ್ಲ.
ಅಂಬಾನಿ ಕುಟುಂಬಕ್ಕೂ ಆಧ್ಯಾತ್ಮಕ್ಕೂ ಮೊದಲನಿಂದಲೂ ಒಂದು ನಂಟಿದೆ. ಈ ಹಿಂದೆ ಅಂಬಾನಿ ಕುಟುಂಬ ಕುಂಭಮೇಳದಲ್ಲೂ ಕೂಡ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬಂದಿದ್ದರು. ಈಗ ಅನಂತ ಅಂಬಾನಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಒಬ್ಬ ಸಾಮಾನ್ಯ ಭಕ್ತನಂತೆ ಜಾಮ್ ನಗರದಿಂದ ದ್ವಾರಕಾದವರೆಗೂ ಒಟ್ಟು 180 ಕಿಲೋ ಮೀಟರ್ ಪಾದಯಾತ್ರೆಯನ್ನು ಶುರು ಮಾಡಿದ್ದಾರೆ. ಐದು ದಿನಗಳ ಹಿಂದೆಯೇ ಈ ಪಾದಯಾತ್ರೆ ಶುರುವಾಗಿದ್ದು, ಮುಂದಿನ 2 ರಿಂದ 4 ದಿನಗಳಲ್ಲಿ ದ್ವಾರಕೆಯನ್ನು ತಲುಪುವ ನಿರೀಕ್ಷೆಯಿದೆ. ಅನಂತ್ ಕೆಲವು ಆರೋಗ್ಯ ಸವಾಲುಗಳನ್ನು ಎದುರಿಸಿದ್ದಾರೆ. ಅವುಗಳಲ್ಲಿ ಕುಶಿಂಗ್ ಸಿಂಡ್ರೋಮ್ ಕೂಡ ಒಂದು. ಇದು ಅವರ ಬಾಲ್ಯದಿಂದಲೂ ಹಾರ್ಮೋನುಗಳ ಅಸ್ವಸ್ಥತೆಯಿಂದ ಬಂದಿದ್ದು, ಅಸ್ವಸ್ಥ ಬೊಜ್ಜು, ಥೈರಾಯ್ಡ್, ಆಸ್ತಮಾ ಮತ್ತು ತೀವ್ರ ಶ್ವಾಸಕೋಶರೋಗ.
ಏನಿದು ಕುಶಿಂಗ್ ಸಿಂಡ್ರೋಮ್?
ಕುಶಿಂಗ್ಸ್ ಎಂಬುದು ದೇಹದಲ್ಲಿ ಹೆಚ್ಚು ಕಾರ್ಟಿಸೋಲ್ ಹಾರ್ಮೋನ್ ಇದ್ದಾಗ ಸಂಭವಿಸುವ ಅಪರೂಪದ ಸ್ಥಿತಿಯಾಗಿದೆ. ಇದನ್ನು ಹೈಪರ್ ಕಾರ್ಟಿಸೋಲಿಸಮ್ ಎಂದೂ ಕರೆಯುತ್ತಾರೆ. ಇದು ದೇಹದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಅಂಬಾನಿಯವರ ಕಿರಿಯ ಮಗ ಅನಂತ ಕುಶಿಂಗ್ ಸಿಂಡ್ರೋಮ್ನಿಂದ ಬಳಲುತ್ತಿದ್ದಾರೆ. ಇಷ್ಟಾದ್ರೂ ಅನಂತ್ ಅಂಬಾನಿ 180ಕಿಲೋಮೀಟರ್ಗಳಷ್ಟು ಪಾದಯಾತ್ರೆ ಮಾಡಬೇಕು ಅಂತ ಪಣತೊಟ್ಟಿದ್ದಾರೆ. ಅಲ್ಲದೇ ಅನಂತ್ ಅವರ ಆರೋಗ್ಯದ ಬಗ್ಗೆ ರಿಲಯನ್ಸ್ ಪ್ರತಿಕ್ರಿಯೆ ನೀಡಿದೆ. ಕುಶಿಂಗ್ ಸಿಂಡ್ರೋಮ್ ಮತ್ತು ಅಸ್ವಸ್ಥ ಬೊಜ್ಜು, ಜೊತೆಗೆ ಆಸ್ತಮಾ ಮತ್ತು ತೀವ್ರ ಶ್ವಾಸಕೋಶದ ಕಾಯಿಲೆಯಿಂದ ಉಂಟಾಗುವ ದೌರ್ಬಲ್ಯವನ್ನು ನಿವಾರಿಸಿಕೊಂಡು ಈ ಕಠಿಣ ಪ್ರಯಾಣವನ್ನು ಕೈಗೊಳ್ಳಲಾಗಿದೆ. ಅನಂತ್ ಪ್ರತಿದಿನ ರಾತ್ರಿಯಲ್ಲಿ 20 ಕಿ.ಮೀ ನಡೆಯುತ್ತಾರೆ ಎಂದು ಹೇಳಿದೆ. ಇನ್ನೂ ಈ ಪವಿತ್ರ ಪಾದಯಾತ್ರೆಯ ಹಾದಿಯಲ್ಲಿ ಅನೇಕರು ಅವರೊಂದಿಗೆ ಸೇರಿಕೊಂಡು ಭಕ್ತಿಪೂರ್ವಕ ಸ್ಮರಣಿಕೆಗಳನ್ನು ಅರ್ಪಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ