Advertisment

ಅಬ್ಬಬ್ಬಾ! 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬಾನಿ ಮಗನ ಮದುವೆ; ಹೇಗಿರಲಿದೆ & ಏನಿದರ ವಿಶೇಷತೆ?

author-image
Veena Gangani
Updated On
108 KG ತೂಕ ಇಳಿಸಿಕೊಂಡಿದ್ದ ಅನಂತ್​​ ಅಂಬಾನಿ; ಮತ್ತೆ ದಪ್ಪ ಆಗಿದ್ದೇಕೆ..?
Advertisment
  • ಮಗನ ಮದುವೆಗಾಗಿ 14 ದೇಗುಲ ನಿರ್ಮಾಣ ಮಾಡಿದ ಅಂಬಾನಿ!
  • 25ಕ್ಕೂ ಹೆಚ್ಚು ಬಾಣಸಿಗರು ಮೆನುವಿನಲ್ಲಿದೆ ತರ ತರದ ತಿಂಡಿಗಳು
  • 1 ಸಾವಿರ ಕೋಟಿ ರೂಪಾಯಿಯ ಮದುವೆಗೆ ದಿನಗಣನೆ ಶುರು

ಒಂದಲ್ಲ.. ಎರಡಲ್ಲ.. ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿಯ ಮದುವೆಗೆ ದಿನಗಣನೆ ಶುರುವಾಗಿದೆ. ಕೇವಲ ಭಾರತವಲ್ಲ ಜಗತ್ತೇ ಕಣ್ಣರಳಿಸಿ ನೋಡುವಂತೆ ಮಾಡಿರೋ ಆ ಮಹಾಮದುವೆ ನಡೆಯುತ್ತಿರೋದು ದೇಶದ ಟಾಪ್ ಕುಬೇರ ಮುಖೇಶ್ ಅಂಬಾನಿ ಫ್ಯಾಮಿಲಿಯಲ್ಲಿ. ಮದುವೆಗೂ ಮುನ್ನ ನಡೆಯುತ್ತಿರೋ ಪ್ರೀ ವೆಡ್ಡಿಂಗ್ ಬಗ್ಗೆ ಈಗ ಮಾತು ಜೋರಾಗಿದೆ. ಮಗನ ಮದುವೆಗೆ 14 ದೇಗುಲ ನಿರ್ಮಾಣ ಮಾಡ್ತಿರುವ ಅಂಬಾನಿ ಸ್ವರ್ಗಕ್ಕೆ ಕಿಚ್ಚು ಹಚ್ಚೋದಕ್ಕೆ ಸಿದ್ಧತೆ ನಡೆಸಿದ್ದಾರೆ.

Advertisment

publive-image

ಕಿರಿಯ ಮಗನ ಮದುವೆಯನ್ನ ಹಿಂದ್ಯಾರು ಮಾಡಿರದಂತೆ. ಮುಂದ್ಯಾರು ಮಾಡಲಿಕ್ಕೂ ಸಾಧ್ಯವಿರದಂತೆ. ಮುಂದೊಂದು ದಿನ ಇಂಥಾದ್ದೊಂದು ಮದುವೆ ನಡೆದಿತ್ತು ಅಂತ ಹೇಳಿದ್ರೆ ನಂಬಲಿಕ್ಕೂ ಕಷ್ಟವಾಗುವಂತಹ ಅದ್ಧೂರಿ ಮದುವೆ ಮಾಡಲು ಮುಂದಾಗಿದ್ದಾರೆ. ಆ ಕುಬೇರ ಬೇಱರೂ ಅಲ್ಲ ದೇಶದ ನಂಬರ್ ಶ್ರೀಮಂತ ಮುಖೇಶ್ ಅಂಬಾನಿ.

ಒಂದಲ್ಲ ಎರಡಲ್ಲ.. ಹತ್ತಲ್ಲ.. ಇಪ್ಪತ್ತಲ್ಲ.. ಅನಾಮತ್ತು 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮುಖೇಶ್ ಅಂಬಾನಿ ತಮ್ಮ ಕಿರಿಯ ಪುತ್ರನ ಮದುವೆಗೆ ಸಕಲ ತಯಾರಿ ಆರಂಭಿಸಿದ್ದಾರೆ. ಕಳೆದ ವರ್ಷ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಯ ಎಂಗೇಜ್‌ಮೆಂಟ್ ನಡೆದಿತ್ತು. ಎಂಗೇಜ್‌ಮೆಂಟ್ ವೈಭವ ನೋಡಿಯೇ ದೇಶವೇ ಹೌಹಾರಿತ್ತು. ಇದೀಗ ತಮ್ಮ ಕಿರಿಯ ಪುತ್ರ ಮದುವೆ ದಿನಾಂಕವನ್ನೂ ಫಿಕ್ಸ್ ಮಾಡಿರೋ ಅಂಬಾನಿ ಜುಲೈ ತಿಂಗಳಲ್ಲಿ ಪುತ್ರ ತಾಳಿ ಕಟ್ಟು ಶುಭ ವೇಳೆಗೆ ಕಾತುರದಿಂದ ಕಾಯ್ತಿದ್ದಾರೆ. ಆದ್ರೆ, ಅದಕ್ಕೂ ಮೊದಲು ಪ್ರೀ ವೆಡ್ಡಿಂಗ್ ಉತ್ಸವ ನಡೆಸ್ತಿದ್ದಾರೆ. ಇದೇ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅಂದ್ರೆ ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ಅದ್ಧೂರಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಮುಖೇಶ್ ಅಂಬಾನಿ ಕುಟುಂಬದ ಫಾರ್ಮ್‌ ಹೌಸ್ ಇದೆ. ಅಲ್ಲಿ ಬೃಹತ್ ಸಂಕೀರ್ಣವಿದೆ. ಅದೇ ಫಾರ್ಮ್‌ಹೌಸ್‌ನಲ್ಲಿ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್ ಉತ್ಸವ ನಡೆಯಲಿದೆ. ಮಾರ್ಚ್ 1 ರಿಂದ ಮಾರ್ಚ್ 3 ನೇ ತಾರೀಖಿನವರೆಗೆ ಅಂದ್ರೆ 3 ದಿನಗಳ ಅದ್ಧೂರಿ ಉತ್ಸವ ಜರುಗಲಿದೆ.

publive-image

ಪ್ರೀವೆಡ್ಡಿಂಗ್ ಉತ್ಸವ.. 3 ದಿನ.. 3 ಕಾರ್ಯಕ್ರಮ.. 3 ಡ್ರೆಸ್ ಕೋಡ್!

ಅಂಬಾನಿ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್ ಮಹೋತ್ಸವದ ಮೂರು ದಿನ ಮೂರು ಥೀಮ್‌ಗಳಲ್ಲಿ ನಡೆಯಲಿದೆ. ಬರೋ ಪ್ರತಿಯೊಬ್ಬ ಅತಿಥಿಗಳಿಗೂ ಡ್ರೆಸ್ ಕೋಡ್ ಇರಲಿದೆ. ಮೊದಲ ದಿನದ ಉತ್ಸವಕ್ಕೆ ಈವ್ನಿಂಗ್ ಇನ್ ಎವರ್‌ಲ್ಯಾಂಡ್ ಎಂದು ಹೆಸರಿಡಲಾಗಿದೆ. ಮಾರ್ಚ್ 2ನೇ ತಾರೀಖು ನಡೆಯಲಿರೋ ಜಂಗಲ್ ಫೀವರ್ ಉತ್ಸವದಲ್ಲಿ ಸಫಾರಿ ಉಡುಗೆ ತೊಟ್ಟು ಮಿಂಚಲಿರೋ ಅತಿಥಿಗಳನ್ನು ಅಂಬಾನಿ ಪ್ರಾಣಿ ರಕ್ಷಣಾ ಕೇಂದ್ರದ ಹೊರಾಂಗಣದಲ್ಲಿ ನಡೆಯಲಿರೋ ಕಾರ್ಯಾಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೂರನೇ ಮತ್ತು ಕಡೆಯ ದಿನ ಪ್ರೀ ವೆಡ್ಡಿಂಗ್ ಉತ್ಸವ ಇನ್ನೂ ವಿಶೇಷವಾಗಿರಲಿದೆಯಂತೆ. ಯಾಕಂದ್ರೆ.. ಮೂರನೇ ದಿನದ ಉತ್ಸವದಲ್ಲಿ ಅತಿಥಿಗಳೆಲ್ಲಾ ದಕ್ಷಿಣ ಏಷ್ಯಾದ ಉಡುಗಳೊಂದಿಗೆ ಸಂಭ್ರಮಿಸಲಿದ್ದಾರೆ. ಆ ಕಾರ್ಯಕ್ರಮಕ್ಕೆ ಡ್ಯಾಜಲಿಂಗ್ ದೇಸಿ ರೊಮ್ಯಾನ್ಸ್ ಎಂದು ಹೆಸರಿಡಲಾಗಿದ್ದು. ಅದೇ ದಿನ ಮತ್ತೊಂದು ಕಾರ್ಯಕ್ರಮ ಕೂಡ ನಡೆಯಲಿದೆ.

Advertisment

ಮಗನ ಲಗ್ನಕ್ಕೆ 14 ದೇಗುಲ ನಿರ್ಮಾಣ! ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅಂಬಾನಿ!

ಇನ್ನು, ಅನಂತ್ ಅಂಬಾನಿ ಮದುವೆಗಾಗಿ ಗುಜರಾತ್​ನ ಜಾಮ್ ನಗರದಲ್ಲಿ ಹದಿನಾಲ್ಕು ಹೊಸ ದೇಗುಲಗಳನ್ನ ನಿರ್ಮಾಣ ಮಾಡಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು, ದೇವ ದೇವತೆಗಳ ಶಿಲಾನ್ಯಾಸಗಳು. ವಾಸ್ತು ಶಿಲ್ಪದಿಂದ ಪ್ರೇರಿತವಾದ ಪಾರಂಪರಿಕ ಚಿತ್ರಗಳನ್ನ ಈ ದೇವಾಲಯಗಳಲ್ಲಿ ಕಾಣಬಹುದು. ಭಾರತದ ಶ್ರೀಮಂತ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವೈಭವವನ್ನು ಈ ದೇವಾಲಯದ ಸಮುಚ್ಛಯಗಳಲ್ಲಿ ನೋಡಬಹುದು. ದೇವಾಲಯದ ಮೆರಗನ್ನ ಹೆಚ್ಚು ಮಾಡಲು ಸಾಂಪ್ರದಾಯಿಕ ಹಾಗೂ ಹಳೆಯ ತಂತ್ರಜ್ಞಾನಗಳನ್ನ ಬಳಸಲಾಗಿದೆ. ಜಾಮ್ ನಗರದ ಮೊಡಿಖ್ ವಾಡಿಯಲ್ಲಿ ಈ 14 ದೇವಾಲಯಗಳನ್ನ ನಿರ್ಮಾಣ ಮಾಡಲಾಗ್ತಿದ್ದು, ಸ್ಥಳೀಯ ಕಲಾವಿದರ ಅದ್ಭುತ ಕೌಶಲ್ಯ, ಪ್ರತಿಭೆಯನ್ನ ಈ ದೇವಾಲಯದಲ್ಲಿನ ಕಲಾ ಶ್ರೀಮಂತಿಕೆಯನ್ನ ಪ್ರತಿಬಿಂಬಿಸುತ್ತದೆ. ವಿಶೇಷ ಏನಂದರೇ ಈ 14 ದೇವಾಲಯಗಳ ಉಸ್ತುವಾರಿಯನ್ನ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಯೇ ವಹಿಸಿಕೊಂಡಿದ್ದಾರೆ. ಸದ್ಯ ಈ ದೇವಾಲಯದ ಸಮುಚ್ಛಯಕ್ಕೆ ಭೇಟಿ ನೀಡಿದ ನೀತಾ ಅಂಬಾನಿ ಕೆಲಸಗಳ ಪ್ರಗತಿಯನ್ನ ವೀಕ್ಷಣೆ ಮಾಡಿದ್ರು.

publive-image

2500 ಆಹಾರ.. ವೆಜ್​.. ನಾನ್​ ವೆಜ್​.. ಅತಿಥಿಗಳಿಗೆ ಭಕ್ಷ್ಯ ಭೋಜನ!

ಅನಂತ್ ಅಂಬಾನಿ ಮದುವೆಗೆ ಬರೋ ಅತಿಥಿಗಳಿಗಾಗಿ ತರಹೇವಾರಿ ಖಾದ್ಯಗಳನ್ನ ರೆಡಿ ಮಾಡಲಾಗ್ತಿದೆ. ವೆಜ್​. ನಾನ್ ವೆಜ್​. ತಿಂಡಿ ಸೇರಿ ಬರೋಬ್ಬರಿ 2500 ಆಹಾರ ಪದಾರ್ಥಗಳನ್ನ ಸಿದ್ಧಪಡಿಸಲಾಗ್ತಿದೆ. ಮದುವೆಗಾಗಿ 25ಕ್ಕೂ ಹೆಚ್ಚು ಬಾಣಸಿಗರು ಕೆಲಸ ಮಾಡ್ತಿದ್ದು, ಪಾರ್ಸಿಯಿಂದ, ಥಾಯ್, ಮೆಕ್ಸಿಕನ್​, ಜಪಾನೀಸ್, ಫ್ಯಾನ್ ಏಷ್ಯನ್​ ಭಕ್ಷ್ಯಗಳು ಅತಿಥಿಗಳ ಬಾಯಿ ತಣಿಸಲಿವೆ. ಬೆಳಗಿನ ಉಪಹಾರದಲ್ಲಿ 70 ಬಗೆ, ಊಟಕ್ಕೆ 250 ಬಗೆ ಹಾಗೂ ಡಿನ್ನರ್​ಗೂ 250 ಬಗೆಯ ಖಾದ್ಯಗಳು ರೆಡಿಯಾಗಲಿವೆ. ಅಂಬಾನಿ ಕುಟುಂಬದ ಮದುವೆ ಅಂದ್ರೆ ಸುಮ್ನೆನಾ? ಕೋಟಿಗಳಿಗೆ ಲೆಕ್ಕವಿಲ್ಲ ಗಣ್ಯರ ಹಾಜರಿಗೆ ಕೊರತೆಯಿಲ್ಲ. ಸ್ವರ್ಗಕ್ಕೂ ಹೊಟ್ಟೆ ಉರಿ ತರಿಸೋ ಅದ್ದೂರಿ ಉತ್ಸವವದು. ಹೀಗಾಗಿ ಮಾರ್ಚ್ 1 ರಿಂದ ಮಾರ್ಚ್ 3 ರವರೆಗಿನ ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್ ಉತ್ಸವದ ಬಗ್ಗೆ ಇಡೀ ಜಗತ್ತು ಕುತೂಹಲದಿಂದ ನೋಡ್ತಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment