/newsfirstlive-kannada/media/post_attachments/wp-content/uploads/2025/06/ANANTKUMAR-HEGADE-6.jpg)
ರಾಷ್ಟ್ರೀಯ ಹೆದ್ದಾರಿ 48.. ಕಾರುಗಳ ಓವರ್ಟೇಕ್.. ಇದೇ ವಿಚಾರಕ್ಕೆ ದೊಡ್ಡ ಗಲಾಟೆಯೊಂದು ನಡೆದು ಹೋಗಿದೆ. ಕಾರ್ನಲ್ಲಿದ್ದಿದ್ದು ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ.. ಕಾರು ಓವರ್ಟೇಕ್ ಸಂಬಂಧ ಹೆಗಡೆ ಚಾಲಕ ಮತ್ತು ಗನ್‌ಮ್ಯಾನ್ ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಕೋಮು ಬಣ್ಣ ಬಳಿದುಬಿಟ್ಟಿದೆ.
ಓವರ್ಟೇಕ್ ವಿಚಾರ.. ಹೈವೇನಲ್ಲಿ ನಡೀತು ಫೈಟ್!
ದಾಬಸ್‌ಪೇಟೆ ಸಮೀಪದ ಹಳೇ ನಿಜಗಲ್ಲು ಬಳಿ ಘಟನೆ ನಡೆದಿದೆ. ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಆಗಮಿಸ್ತಿದ್ದ ಅನಂತ್‌ಕುಮಾರ್ ಹೆಗಡೆ ಕಾರನ್ನು ಮುಸ್ಲಿಂ ಸಮುದಾಯದ ಕಾರು ಓವರ್ಟೇಕ್ ಮಾಡಿದೆ. ಇದ್ರಿಂದ ದಾಬಸ್‌ಪೇಟೆ ಬಳಿ ನಿಲ್ಲಿಸಿ ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದವರಿಗೆ ಹೆಗಡೆ ಗನ್‌ಮ್ಯಾನ್ ಶ್ರೀಧರ್, ಚಾಲಕ ಮಹೇಶ್ ಹಲ್ಲೆ ಮಾಡಿದ್ದಾರೆ ಅಂತ ಹೇಳಲಾಗಿದೆ.
ಇದನ್ನೂ ಓದಿ: ಮೊಟ್ಟ ಮೊದಲ ಎಲೆಕ್ಟ್ರಿಕ್ ವಿಮಾನ.. ಜಸ್ಟ್ 700 ರೂಪಾಯಿ ಇದ್ರೆ ಪ್ರಯಾಣಿಸಬಹುದು! -Video
ಹೆಗಡೆ ಬೆಂಬಲಿಗರ ಹಲ್ಲೆಯಿಂದ ಹಲ್ಲು ಮುರಿತ
ಹಲ್ಲೆಯಿಂದಾಗಿ ಕೆಲವರಿಗೆ ಹಲ್ಲು ಮುರಿತವಾಗಿ ರಕ್ತಸ್ರಾವವಾಗಿದೆ. ಡಾಬಸ್‌ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡ್ಲಾಗಿದೆ. ಹಲ್ಲೆಗೊಳಗಾದ ಮುಸ್ಲಿಂ ಸಮುದಾಯ, ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.. ಘಟನೆ ಸಂಬಂಧ ಎಫ್ಐಅರ್ ದಾಖಲಿಸಲಾಗಿದೆ.
ಇದನ್ನೂ ಓದಿ: ವಿವಾದಕ್ಕೆ ಸಿಲುಕಿದ ಕೇಂದ್ರ ಸಚಿವ ನಟನೆಯ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಚಿತ್ರ..
ಹೆಗಡೆ ಮೇಲೆ ಎಫ್ಐಆರ್!
ದಾಬಸ್ಪೇಟೆಯ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ FIR ದಾಖಲಾಗಿದೆ. ಪ್ರಕರಣದಲ್ಲಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಎ-1 ಆಗಿದ್ದು, ಹೆಗಡೆ ಅವರ ಗನ್‌ಮ್ಯಾನ್ ಶ್ರೀಧರ್ ಎ-2 ಅಂತ ಉಲ್ಲೇಖ ಆಗಿದೆ. ಹೆಗಡೆ ಕಾರಿನ ಡ್ರೈವರ್ ಮಹೇಶ್ ಸಹ FIRನಲ್ಲಿ ಎ-3 ಆಗಿದ್ದಾರೆ.. ಖುದ್ದು ಹೆಗಡೆ ಹಲ್ಲೆ ಮಾಡಿದ್ದಾರೆ ಎಂದು FIRನಲ್ಲಿ ಉಲ್ಲೇಖಿಸಿದ್ದಾರೆ.. ಹಲ್ಲೆ ಮಾಡಿದ್ದಲ್ಲದೆ ಅವಾಚ್ಯವಾಗಿ ನಿಂದನೆಯ ಮಾಡಲಾಗಿದೆ. ಗನ್‌ಮ್ಯಾನ್ ಶ್ರೀಧರ್ ಶೂಟ್ ಮಾಡ್ತೀನಿ ಅಂತ ಗನ್ ತಗೆದು ಬೆದರಿಸಿದ್ದಾರೆ ಅಂತ ಆರೋಪಿಸಿದ್ದಾರೆ.
ಗಲಾಟೆ ಆಗ್ತಿದ್ದಂತೆ ಕಾರಿನಲ್ಲಿದ್ದ ಕಾರಿನಲ್ಲಿದ್ದ ಮುಸ್ಲಿಂ ಸಮುದಾಯವು ಡಾಬಸ್‌ಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ್ರೆ, ಸುದ್ದಿ ತಿಳಿದು ಠಾಣೆ ಬಳಿ ನೂರಾರು ಮುಸ್ಲಿಮರು ಜಮಾಯಿಸಿದ್ರು. ಅತ್ತ ಹೆಗಡೆ ಪರವಾಗಿ ಬಿಜೆಪಿ ಮುಖಂಡರು ಸಹ ಠಾಣೆ ಬಳಿ ಆಗಮಿಸಿದ್ರು. ಈ ವೇಳೆ ಹೆಗಡೆ ಮತ್ತು ಬೆಂಬಲಿಗರನ್ನ ನೆಲಮಂಗಲ ಬಳಿಯ ಡಿವೈಎಸ್‌ಪಿ ಕಚೇರಿಗೆ ಕರೆತಂದ್ರು. ಬಳಿಕ ಬೆಂಗಳೂರಿನತ್ತ ಹೆಗಡೆ ಪ್ರಯಾಣ ಬೆಳೆಸಿದ್ರು. ಒಟ್ಟಾರೆ, ರೋಡ್ರೇಜ್ ಪ್ರಕರಣವೊಂದು ಹೆಗಡೆಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಇವತ್ತು ಮತ್ತೆ ಮಾಜಿ ಸಂಸದರನ್ನ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಮೆರಿಕ ಮೇಲೂ ಪ್ರತೀಕಾರ ಆಗಿದೆ.. ಟ್ರಂಪ್ ಕದನ ವಿರಾಮ ‘ಬರೀ ಸುಳ್ಳು’ ಎಂದ ಇರಾನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ