VIDEO: ಮಗ, ಸೊಸೆಯ ಭವಿಷ್ಯಕ್ಕಾಗಿ ನೀತಾ ಅಂಬಾನಿ ಅದ್ಭುತ ನೃತ್ಯ ಪ್ರದರ್ಶನ; ಏನಿದರ ವಿಶೇಷ?

author-image
Veena Gangani
Updated On
VIDEO: ಮಗ, ಸೊಸೆಯ ಭವಿಷ್ಯಕ್ಕಾಗಿ ನೀತಾ ಅಂಬಾನಿ ಅದ್ಭುತ ನೃತ್ಯ ಪ್ರದರ್ಶನ; ಏನಿದರ ವಿಶೇಷ?
Advertisment
  • ಶಾಸ್ತ್ರೀಯ ನೃತ್ಯಗಾರರೊಂದಿಗೆ ವಿಶ್ವಂಭರಿ ಸ್ತುತಿಗೆ ಅದ್ಬುತ ನೃತ್ಯ
  • ಕಿತ್ತಳೆ ಬಣ್ಣದ ಸೀರೆಯನ್ನು ಧರಿಸಿ ನೀತಾ ಅಂಬಾನಿ ಡ್ಯಾನ್ಸ್​
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿಯ ಪ್ರಿ-ವೆಡ್ಡಿಂಗ್​ ಶೂಟ್​ ಅದ್ಧೂರಿಯಾಗಿ ನಡೆದಿದೆ. ಗುಜರಾತ್​ನ ಕಿರೀಟ ನಗರಿ ಎಂದೇ ಖ್ಯಾತಿಯಾಗಿರುವ ಜಾಮ್​ನಗರದಲ್ಲಿ 3 ದಿನ ಅದ್ಧೂರಿ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಈ ಸಂಭ್ರಮದಲ್ಲಿ ದೇಶ-ವಿದೇಶಗಳಿಂದ ಹಲವಾರು ಸೆಲೆಬ್ರಿಟಿಗಳು ಜಾಮ್‌ನಗರಕ್ಕೆ ಬಂದಿದ್ದರು.

publive-image

ಇದನ್ನು ಓದಿ: ಅಂದದ ಗೊಂಬೆಗೆ ಚಂದದ ಶೃಂಗಾರ.. ಕೈಮಗ್ಗದ ಕಾಂಚೀಪುರಂ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ

ವಿಶೇಷವೆಂದರೆ ಈ ಅದ್ಧೂರಿ ಸಮಾರಂಭದ ಕೊನೆಯ ದಿನ ಮುಖೇಶ್​ ಅಂಬಾನಿ ಪತ್ನಿ ನೀತಾ ಅಂಬಾನಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೂರು ದಿನಗಳ ಈವೆಂಟ್‌ನಲ್ಲಿ ಬಾಲಿವುಡ್‌ನ ಎಲ್ಲಾ ತಾರೆಯರು ಭಾಗಿಯಾಗಿ ಡ್ಯಾನ್ಸ್​, ಹಾಡು ಜೊತೆಗೆ ಮನೋರಂಜನೆ ನೀಡಿದ್ದರು. ಜೊತೆಗೆ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೇಳೆದರು. ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಡ್ಯಾನ್ಸ್​ ಮಾಡಿದ್ದಾರೆ.

publive-image

publive-image

ಮಗ ಹಾಗೂ ಸೊಸೆಯ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ ನೀತಾ ಅಂಬಾನಿ ಅವರ ನೃತ್ಯ ಹಾಗೂ ಅಭಿನಯ ಪ್ರದರ್ಶನ ಅದ್ಭುತವಾಗಿತ್ತು. ಇನ್ನೂ ಇದರಲ್ಲಿ ನೀತಾ ಅಂಬಾನಿ ಶಾಸ್ತ್ರೀಯ ನೃತ್ಯಗಾರರೊಂದಿಗೆ ವಿಶ್ವಂಭರಿ ಸ್ತುತಿಯಲ್ಲಿ ಡ್ಯಾನ್ಸ್​ ಮಾಡುವುದನ್ನು ಕಾಣಬಹುದು. ಆ ನೃತ್ಯದಲ್ಲಿ ನೀತಾ ಅಂಬಾನಿ ಕಿತ್ತಳೆ ಬಣ್ಣದ ಸೀರೆಯನ್ನು ಧರಿಸಿದ್ದರು. ಸದ್ಯ ನೀತಾ ಅಂಬಾನಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಡ್​ ಜೋಡಿಯ ಹಸ್ತಾಕ್ಷರದ ಮೂಲಕ ಮೂರು ದಿನಗಳ ಅದ್ಧೂರಿ ಪ್ರೀ ವೆಡ್ಡಿಂಗ್​ ಕಾರ್ಯಕ್ರಮಕ್ಕೆ ಭರ್ಜರಿ ತೆರೆ ಬಿದ್ದಿದೆ. ಜುಲೈ 12ರಂದು ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment