Advertisment

ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್​ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?

author-image
Ganesh
Updated On
ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್​ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?
Advertisment
  • ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮ
  • ವೈಭವದ ಮದುವೆಗೆ ದೇಶ, ವಿದೇಶಗಳ ಗಣ್ಯಾತಿಗಣ್ಯರು ಸಾಕ್ಷಿ
  • ಮುಖೇಶ್​ ಅಂಬಾನಿ ಪುತ್ರನ ಮದುವೆ ಬಗ್ಗೆ ತಜ್ಞರ ವಿಶ್ಲೇಷಣೆ ಏನು?

ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮಾಲೀಕ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಮದುವೆಯ ಕಾರ್ಯಕ್ರಮಗಳು ಸುಮಾರು 6 ತಿಂಗಳಿನಿಂದ ನಡೆಯುತ್ತಿದ್ದವು. ಮದುವೆಗೂ ಮುನ್ನ ಅಂಬಾನಿ ಕುಟುಂಬ ಎರಡು ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಂಬಾನಿ ಕುಟುಂಬದ ಈ ಮದುವೆ ಕರೆಯೋಲೆಗೆ ಓಗೊಟ್ಟು ದೇಶ ಮತ್ತು ವಿದೇಶಗಳಿಂದ ಅನೇಕ ಗಣ್ಯರು ಭಾಗವಹಿಸಿದ್ದರು.

Advertisment

ಪ್ರಮುಖವಾಗಿ ವ್ಯಾಪಾರ, ಮನರಂಜನೆ, ಕ್ರೀಡೆ ಮತ್ತು ರಾಜಕೀಯದ ದಿಗ್ಗಜರು ಮದುವೆಯ ಸಂಭ್ರಮಕ್ಕೆ ಸಾಕ್ಷಿಯಾದರು. ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸೃಷ್ಟಿ ಮಾಡಿದ ವೈಭವ, ಮೇಳೈಸಿದ ನವಗತಕಾಲ ಜಗತ್ತಿಗೆ ಹಲವು ಅರ್ಥಗಳನ್ನು ನೀಡಿತು. ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ವಿಶ್ವದಾದ್ಯಂತ ಬ್ರ್ಯಾಂಡ್ ಆಗಿ ಸ್ಥಾಪಿಸುವಲ್ಲಿ ಮದುವೆ ಪ್ರಮುಖ ಪಾತ್ರ ವಹಿಸಿತು.

publive-image

ಸ್ಥಳೀಯ ಆರ್ಥಿಕತೆಗೆ ಲಾಭ..!
ಮುಖೇಶ್ ಅಂಬಾನಿ ತಮ್ಮ ಪುತ್ರನ ಮದುವೆಯನ್ನು ಭಾರತದಲ್ಲಿಯೇ ಮಾಡಿದ್ದಾರೆ. ಮದುವೆ ಭಾರತದಲ್ಲಿ ನಡೆದ ಪರಿಣಾಮ ಸ್ಥಳೀಯ ಆರ್ಥಿಕತೆಗೆ ಲಾಭ ಆಗಿದೆ. ತಜ್ಞರ ಪ್ರಕಾರ.. ಅಂಬಾನಿ ಕುಟುಂಬ ಇತರ ಶ್ರೀಮಂತರಿಗಿಂತ ಭಿನ್ನ. ಅವರು ತಮ್ಮ ಪುತ್ರನ ಮದುವೆಯನ್ನು ದೇಶದಲ್ಲಿಯೇ ಮಾಡಿದ್ದಾರೆ. ಇದು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿದೆ. ರಿಲಯನ್ಸ್ ಇಂಡಸ್ಟ್ರೀಸ್​ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಪ್ರಪಂಚದಾದ್ಯ ಅದರ ಗೌರವವನ್ನು ಹೆಚ್ಚಿಸಿಕೊಂಡಿದೆ ಅನ್ನೋದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ:ರಹಸ್ಯಗಳ ಹೊತ್ತು ನಿಂತ ಪೂರಿ ಜಗನ್ನಾಥ..! ಲೆಕ್ಕವೇ ಮಾಡಲಾಗದಷ್ಟು ರತ್ನ ಭಂಡಾರ ನೀಡಿದ್ದು ಯಾರು ಗೊತ್ತೇ..?

Advertisment

publive-image

ಅದು ಹೇಗೆಂದರೆ ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ವಿದೇಶಿ ಅತಿಥಿಗಳು ಆಗಮಿಸಿದ್ದರು. ಆ ಅತಿಥಿಗಳ ಮೇಲೆ ಇಡೀ ವಿಶ್ವದ ಮಾಧ್ಯಮಗಳು ಕಣ್ಣಿಟ್ಟಿದ್ದವು. ಈ ಮದುವೆಯಲ್ಲಿ ಜಸ್ಟಿನ್ ಬೈಬರ್ ಮತ್ತು ರಿಹಾನ್ನಾ ಸೇರಿದಂತೆ ಅನೇಕ ಜಾಗತಿಕ ಸೂಪರ್‌ಸ್ಟಾರ್‌ಗಳು ಉಪಸ್ಥಿತರಿದ್ದರು.

ಭಾರತೀಯರ ಜೇಬಿಗೆ ಹಣ..!
ಅನಂತ್ ಮತ್ತು ರಾಧಿಕಾ ಮದುವೆಯಿಂದ ಹೆಚ್ಚಿನ ಹಣ ಭಾರತೀಯರ ಜೇಬಿಗೆ ಸೇರಿದೆ ಅನ್ನೋದು ಹಲವರ ವಾದ. ಬ್ಯುಸಿನೆಸ್ ಟುಡೇ ವರದಿ ಪ್ರಕಾರ.. ದೇಶದಲ್ಲಿ ಮದುವೆ ನಡೆದ ಕಾರಣ ಅನೇಕ ಸ್ಥಳೀಯ ಕಲಾವಿದರಿಗೆ ಮತ್ತು ಉದ್ಯಮಿಗಳಿಗೆ ಕೆಲಸ ಸಿಕ್ಕಿದೆ ಎಂದು ತಜ್ಞರು ಹೇಳ್ತಿದ್ದಾರೆ. ಈ ಮೂಲಕ ರಿಲಯನ್ಸ್ ಬ್ರ್ಯಾಂಡ್ ಇಮೇಜ್​ ಸಾಮಾನ್ಯ ಜನರಲ್ಲೂ ಬಲಪಡಿಸಿದೆ. ಮದುವೆಗೆ ಖರ್ಚು ಮಾಡಿದ ಹೆಚ್ಚಿನ ಹಣ ಭಾರತೀಯರ ಪಾಲಾಗಿದೆ. ಅಷ್ಟೇ ಅಲ್ಲ, ದೇಶದ ವಿವಾಹ ಉದ್ಯಮಕ್ಕೂ ಲಾಭವಾಗಿದೆ. ಹೊಸ ಉದ್ಯೋಗಗಳು ಸೃಷ್ಟಿಯಾದವು, ಚಟುವಟಿಕೆಗಳು ಹೆಚ್ಚಾದವು ಮತ್ತು ಹೆಚ್ಚಿನ ಹಣವು ಜನರ ಕೈಗೆ ತಲುಪಿತು ಎಂದು ವಿಶ್ಲೇಷಿಸುತ್ತಿದ್ದಾರೆ.

1 ಲಕ್ಷ ಕೋಟಿ ಮೌಲ್ಯದ ಅವಕಾಶಗಳು ಮಿಸ್​..!
ಬಹುತೇಕ ಭಾರತದ ಶ್ರೀಮಂತರು ವಿದೇಶಗಳಲ್ಲಿ ಮದುವೆ ಮಾಡಿಕೊಳ್ಳುವುದರಿಂದ ದೇಶಕ್ಕೆ ಭಾರೀ ನಷ್ಟ ಆಗ್ತಿದೆ. ವಿದೇಶದಲ್ಲಿ ನಡೆಯುವ ಮದುವೆಗಳಿಂದಾಗಿ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಅವಕಾಶಗಳು ಕಳೆದುಹೋಗಿವೆ ಅನ್ನೋದು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ವಾದ.

Advertisment

ಇದನ್ನೂ ಓದಿ:ಮದ್ವೆಗೆ ಬಂದಿದ್ದ ಸಿನಿಮಾ ಮಂದಿಗೆ ಅಂಬಾನಿ ಭರ್ಜರಿ ಗಿಫ್ಟ್​.. 2 ಕೋಟಿ ಬೆಲೆಯ ವಾಚ್​ ಯಾರಿಗೆಲ್ಲ ಕೊಟ್ಟಿದ್ದಾರೆ..?

publive-image

CAIT ಮಾಹಿತಿ ಪ್ರಕಾರ.. ಪ್ರತಿ ವರ್ಷ ಸುಮಾರು 5,000 ಶ್ರೀಮಂತರು ವಿದೇಶದಲ್ಲಿ ಮದುವೆ ಆಗುತ್ತಾರೆ. ಪರಿಣಾಮ ಸ್ಥಳೀಯ ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಅಂದಾಜು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಅವಕಾಶಗಳು ನಷ್ಟವಾಗುತ್ತಿವೆ. ವಿದೇಶದಲ್ಲಿ ನಡೆಯುವ ದುಬಾರಿ ಮದುವೆಗಳಿಂದ ಸರ್ಕಾರದ ಬೊಕ್ಕಸಕ್ಕೂ ತೆರಿಗೆ ಮತ್ತು ಸೆಸ್ ನಷ್ಟವಾಗುತ್ತಿದೆ. ಅಂದರೆ ಮದುವೆಯ ವೆಚ್ಚವು ಶೇ 80 ರಷ್ಟು ಸರಕು ಮತ್ತು ಸೇವೆಗಳ ಮೇಲೆ ನಿಂತಿರುತ್ತದೆ. ಒಂದು ಅಂದಾಜಿನ ಪ್ರಕಾರ 2024ರಲ್ಲಿ ಸುಮಾರು 38 ಲಕ್ಷ ವಿವಾಹಗಳು ನಡೆಯಲಿದ್ದು, ಸುಮಾರು 4.74 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪಾಕ್ ಸೋಲಿಸಿ WCL ಕಪ್​​ಗೆ ಮುತ್ತಿಟ್ಟ ಭಾರತ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್​ಗೆ ಭರ್ಜರಿ ಗೆಲುವು..!

Advertisment

ಜನಸಾಮಾನ್ಯರು ಫೋನ್​ಗಳಿಗೆ​ ಮಾಡಿದ ರಿಚಾರ್ಜ್​​ನಿಂದ ಬಂದಿರುವ ಹಣದಿಂದಲೇ ಅಂಬಾನಿ ತಮ್ಮ ಪುತ್ರನ ಮದುವೆ ಮಾಡಿದ ಎಂಬ ಟೀಕೆಗಳ ಬೆನ್ನಲ್ಲೇ ತಜ್ಞರು, ಅನಂತ್ ಅಂಬಾನಿ ಮದುವೆಯನ್ನು ಬೇರೆಯ ರೀತಿಯಲ್ಲೇ ವಿಶ್ಲೇಷಣೆ ಮಾಡ್ತಿದ್ದಾರೆ. ಒಟ್ಟಾರೆ ಸ್ಥಳೀಯ ಆರ್ಥಿಕತೆಗೆ ಬಲ, ಉದ್ಯೋಗ ಸೃಷ್ಟಿಯಾದರೆ ಅದಕ್ಕಿಂತ ಒಳ್ಳೆಯದು ಇನ್ನೊಂದಿಲ್ಲ.

-ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment