newsfirstkannada.com

ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತ ಹೇಳ್ತಾರೆ; ಅನಂತ್​ ಕುಮಾರ್​ ಹೆಗಡೆ

Share :

Published January 18, 2024 at 12:39pm

Update January 18, 2024 at 12:40pm

    ಮರಾಠಿ, ಕನ್ನಡ ಒಂದಾಗ್ತಾರೆ ಅಂದ್ರೇ ಕತ್ತಿ ತಗೊಂಡೆ ಬರ್ತಾರೆ

    ನಾವು ಹಿಂದೂಗಳು ಅಂತ ಮರೆತೇ ಹೋಗಿತ್ತು ಎಂದ ಸಂಸದ

    500 ವರ್ಷದ ಪಾಪವನ್ನ ತೊಳೆದು ರಾಮ ಮಂದಿರ ಕಟ್ಟುತ್ತಿದ್ದೇವೆ‌

ಬೆಳಗಾವಿ: ಕೆಲವು ಮಂದಿ ಜಾತ್ಯಾತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತಾ ಹೇಳ್ತಾರೆ ಎಂದು ಸಂಸದ ಅನಂತ್​ ಕುಮಾರ್​ ಹೆಗಡೆ ಮತ್ತೆ  ಗುಡುಗಿದ್ದಾರೆ. ಖಾನಾಪುರ ಪಟ್ಟಣದಲ್ಲಿ ಮಾತನಾಡಿದ ಅವರು, ಈಗಾಗಲೇ ರಾಮ ಮಂದಿರ ಉದ್ಘಾಟನೆ ಅಕ್ಷತೆ ಮನೆ ಮನೆಗೆ ಹೋಗಿದೆ. ಐದನೂರು ವರ್ಷದ ನಂತರ ನಮಗೆ ಜಯ ಸಿಕ್ಕಿದೆ ಎಂದಿದ್ದಾರೆ.

ಬಳಿಕ ಮಾತು ಮುಂದುವರಿಸಿದ ಅನಂತ್​ ಕುಮಾರ್​ ಹೆಗಡೆ, ರಾಮ ಮಂದಿರ ಯಾರೋ ಉದ್ಯಮಿ, ಕೈಗಾರಿಕೋದ್ಯಮಿಗಳು ಕಟ್ಟಿಲ್ಲ. ಹಳ್ಳಿ ಹಳ್ಳಿಯಿಂದ ಇಟ್ಟಿಗೆ ಕಳ್ಸಿದ್ದೇವೆ. ಇಡೀ ದೇಶದ ಜನ ಜಾಗೃತರಾಗಿ ಕಟ್ಟಿದ್ದು ಎಂದಿದ್ದಾರೆ.

ಅಯೋಧ್ಯೆ ಹಿಂದೂಗಳ ಪ್ರತೀಕ

ಅಯೋಧ್ಯ ಹಿಂದೂಗಳ ಪ್ರತೀಕ, ಸೌರಾಷ್ಟ್ರದ ಸೋಮನಾಥ ದೇವಾಲಯ ಸರ್ಕಾರ ಕಟ್ಟಿದ್ದು. ರಾಮ ಮಂದಿರ ಸರ್ಕಾರ ಕಟ್ಟಿಲ್ಲ, ಹಿಂದೂಗಳು ಕಟ್ಟಿದ್ದಾರೆ. ಅಪಮಾನವನ್ನ ತೊಳೆದು ರಾಮ ಮಂದಿರ ಕಟ್ಟಲಾಗಿದೆ ಎಂದಿದ್ದಾರೆ.

ಸಂಸ್ಕಾರ ಇದ್ರೆ ಹಿಂದೂ ಅಂತ ಹೇಳ್ತಾರೆ

ನಾವು ಹಿಂದೂಗಳು ಅಂತಾ ಮರೆತೇ ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೇ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಅದು ಸಂಸ್ಕಾರ ಇದ್ರೆ ಹಿಂದೂ ಅಂತಾ ಹೇಳ್ತಾರೆ. ಕೆಲವು ಮಂದಿ ಜಾತ್ಯಾತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತ ಹೇಳ್ತಾರೆ ಎಂದು ಅನಂತ್​ ಕುಮಾರ್​ ಹೆಗಡೆ ಹೇಳಿದ್ದಾರೆ.

ಹಿಂದೂ ಹೆಸರಲ್ಲಿ ಎದ್ದು ನಿಂತೆವು

ಜಾತಿ ಹೆಸರಲ್ಲಿ, ಭಾಷೆ ಹೆಸರಲ್ಲಿ ನಮ್ಮನ್ನ ಒಡೆದರು. ಮರಾಠಿ, ಕನ್ನಡ ಒಂದಾಗ್ತಾರೆ ಅಂದ್ರೇ ಕತ್ತಿ ತಗೊಂಡೆ ಬರ್ತಾರೆ. ಈ ರೀತಿ ಒಡೆದಿಟ್ರೆ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯದ ನಂತರ ಮರಾಠಿ ಕನ್ನಡ ಜಗಳ ಶುರುವಾಯಿತು. ಸ್ವಾತಂತ್ರ್ಯ ನಂತರ ಎಲ್ಲದರಲ್ಲೂ ನಮ್ಮನ್ನ ಒಡೆದ್ರು. ಇದನ್ನ ಹೊರತಾಗಿ ಒಟ್ಟಾಗಿ ಒಂದಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು. ರಣ ಭೈರವ ರೀತಿಯಲ್ಲಿ ನಾವು ಈಗ ಏಳುತ್ತಿದ್ದೇವೆ. ನಾವು ಏಳ್ತಾಯಿದ್ದೀವಿ ಅಂದ ತಕ್ಷಣ ಇಡೀ ಜಗತ್ತು ಅಲ್ಲಾಡಿದೆ. ಎದ್ರೇ ಹೇಗಿರಬಹುದು ಎಂದು ಹೇಳಿದ್ದಾರೆ

ಐದನೂರು ವರ್ಷದ ಪಾಪವನ್ನ ಇಂದು ತೊಳೆದುಕೊಂಡು ರಾಮ ಮಂದಿರ ಕಟ್ಟುತ್ತಿದ್ದೇವೆ‌. ಇನ್ನೂ ಕಾಶಿ ಇದೆ, ಮಥುರಾ ಇದೆ ಹಳ್ಳಿ ಹಳ್ಳಿಗಳಲ್ಲಿ ಅಪಮಾನ ಆದ ತುಂಬಾ ದೇವಸ್ಥಾನ ಇವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನ ಸೇಡು ತೀರಿಸಿಕೊಳ್ಳುವುದೆ ಎಂದು ಅನಂತ್​ ಕುಮಾರ್​ ಹೆಗಡೆ ಖಾನಾಪುರ ಪಟ್ಟಣದಲ್ಲಿ ಗುಡುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತ ಹೇಳ್ತಾರೆ; ಅನಂತ್​ ಕುಮಾರ್​ ಹೆಗಡೆ

https://newsfirstlive.com/wp-content/uploads/2024/01/Ananath-kumar-Hegade.jpg

Load More