newsfirstkannada.com

ನಮ್ಮಮ್ಮ ಎದೆಹಾಲು ಕುಡಿಸಿ ಬೆಳೆಸಿದ್ದಾರೆ, ಬೇ** ಹಾಲು ಕುಡಿಸಿ ಬೆಳೆಸಿಲ್ಲ; ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಮತ್ತೆ ವಾಗ್ದಾಳಿ 

Share :

Published January 16, 2024 at 6:10pm

Update January 16, 2024 at 6:27pm

  ನಮ್ಮದು ವೀರ ಸಂತಾನ ಹೇಡಿಗಳ ಸಂತಾನವಲ್ಲ

  ನಮಗೆ ನಮ್ಮ ಭಾಷೆ ಗಂಡು ಭಾಷೆ ಜನ್ಮತಾ ಬಂದಿದೆ

  ಹೆದರುವವರು ಲೀಡರ್ ಆಗಲ್ಲ ಎಂದ ಉತ್ತರ ಕನ್ನಡ ಸಂಸದ

ಉತ್ತರ ಕನ್ನಡ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಮ್ಮದು ವೀರ ಸಂತಾನ ಹೇಡಿಗಳ ಸಂತಾನವಲ್ಲ. ನಮ್ಮ ಅಮ್ಮ ಎದೆಹಾಲು ಕುಡಿಸಿ ಬೆಳೆಸಿದ್ದಾರೆ. ಯಾವುದೋ ಬೇ** ಹಾಲು ಕುಡಿಸಿ ಬೆಳೆಸಿಲ್ಲ. ನಮಗೆ ನಮ್ಮ ಭಾಷೆ ಗಂಡು ಭಾಷೆ ಜನ್ಮತಾ ಬಂದಿದೆ. ನೀವು ಏಕವಚನದಲ್ಲಿ ಮಾತನಾಡಿದರೆ ನಾವು ಮಾತನಾಡುತ್ತೇವೆ ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ.

ದಾಂಡೇಲಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮತ್ತೆ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗಡೆ, ಪತ್ರಕರ್ತರಿಗೆ ಶಾಸಕರಿಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ನಮಗೆ ಆಗ ಬೇಸರ ಆಗಲ್ವಾ, ನಾವೇನಾದರು ಹೇಳಿದರೆ ಪಾಪ ಅನ್ನುತ್ತಾರೆ. ಹಾಗಾದರೆ ನೀವು ಹೇಳಿದ್ದು ಎಷ್ಟರ ಮಟ್ಟಿಗೆ ಸರಿ. ವಿವಾದ ಇಲ್ಲದೇ ಯಾವಾಗಲು ಲೀಡರ್ ಆಗಲ್ಲ. ಹೆದರುವವರು ಲೀಡರ್ ಆಗುವುದಿಲ್ಲ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಹಿಂದುಗಳ ಮೇಲೆ ದೌರ್ಜನ್ಯ ಸಾಕಷ್ಟು ಆಗಿದೆ. ಸ್ವಾತಂತ್ರ್ಯ ನಂತರ ಬಂದವರು ಜಾತಿ ಹೆಸರಿನಲ್ಲಿ ಒಡೆದರು. ಕಾಂಗ್ರೆಸ್ ಮಾಡಿರುವ ಅನ್ಯಾಯ ಒಂದೆರಡು ಅಲ್ಲ. ಹಿಂದೆಯಿಂದ ಬಂದು ಹಿಂದುಗಳನ್ನ ಕಾಂಗ್ರೆಸ್ ಒಡೆಯಿತು ಎಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮಮ್ಮ ಎದೆಹಾಲು ಕುಡಿಸಿ ಬೆಳೆಸಿದ್ದಾರೆ, ಬೇ** ಹಾಲು ಕುಡಿಸಿ ಬೆಳೆಸಿಲ್ಲ; ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಮತ್ತೆ ವಾಗ್ದಾಳಿ 

https://newsfirstlive.com/wp-content/uploads/2024/01/Ananth-kumar-Hegde.jpg

Load More