/newsfirstlive-kannada/media/post_attachments/wp-content/uploads/2025/03/anupama-gowda6.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಖ್ಯಾತಿಯ ನಟಿ ಅನುಪಮಾ ಗೌಡ ಸಖತ್ ಖುಷಿಯಲ್ಲಿದ್ದಾರೆ. ನಗು ಮೊಗದ ಚೆಲುವೆ, ಮೂಗುತ್ತಿ ಸುಂದರಿ ನಿರೂಪಕಿ ಅನುಪಮಾ ಗೌಡ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ:65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!
ನಟಿ ಅನುಪಮಾ ಗೌಡ ಅವರು ತಮ್ಮ ಹುಟ್ಟು ಹಬ್ಬದ ದಿನದ ಬಹುತೇಕ ಸಮಯವನ್ನ ಅಭಿಮಾನಿಗಳೊಟ್ಟಿಗೆ ಕಳೆಯುತ್ತಾರೆ. ಆದ್ರೆ, ಈ ವರ್ಷ ತುಂಬಾನೆ ಸ್ಪೆಷಲ್ ಅಂತಾನೇ ಹೇಳಬಹುದು. ಏಕೆಂದರೆ ಈ ಬಾರಿ ನಟಿ, ನಿರೂಪಕಿ ಅನುಪಮಾ ಗೌಡ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ನಿರೂಪಣೆಯನ್ನು ಹೊತ್ತಿದ್ದಾರೆ. ಅಲ್ಲದೇ ಇದೇ ವೇದಿಕೆ ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ಸದಸ್ಯರು ಅನುಪಮಾ ಗೌಡ ಅವರ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.
ಮತ್ತೊಂದು ವಿಶೇಷ ಎಂದರೆ ಬಾಯ್ಸ್ ವರ್ಸಸ್ ಗರ್ಲ್ಸ್ ವೇದಿಕೆಗೆ ಮೊದಲ ಬಾರಿಗೆ ಅನುಪಮಾ ಗೌಡ ಅವರ ತಾಯಿ ಬಂದಿದ್ದರು. ಅಲ್ಲದೇ ಬರ್ತ್ ಡೇ ಖುಷಿಯಲ್ಲಿದ್ದ ಅನುಪಮಾ ಗೌಡಗೆ ಅಮ್ಮ ಸರ್ಪ್ರೈಸ್ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ. ಹೌದು, ವೇದಿಕೆಗೆ ನಗು ಮುಖದಲ್ಲೇ ಬಂದ ಅನುಪಮಾ ಗೌಡ ಅವರ ತಾಯಿ ಮಗಳ ಅಪ್ಪಿಕೊಂಡು ಮುದ್ದಾಡಿದ್ದಾರೆ. ಇದಾದ ಬಳಿಕ ಏಳೇಳು ಜನ್ಮಕ್ಕೂ ಇದೆ ನಂಗೆ ಗಿಫ್ಟ್' ಎಂದು ತಾಯಿ ತಮ್ಮ ಕೈ ಮೇಲೆ ಮಗಳಮುಖದ ಅಚ್ಚೆ ರಿವೀಲ್ ಮಾಡಿದ್ದಾರೆ. ಇದನ್ನೂ ನೋಡುತ್ತಿದ್ದಂತೆ ಖುಷಿಯಿಂದ ಅನುಪಮಾ ಗೌಡ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ