/newsfirstlive-kannada/media/post_attachments/wp-content/uploads/2025/04/anupama-gowda1.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿ, ಸದಾ ನಗು ಮೊಗದ ಚೆಲುವೆ, ನಿರೂಪಕಿ ಅನುಪಮಾ ಗೌಡ ಸದ್ಯ ಫ್ರೀ ಮೂಡ್ನಲ್ಲಿದ್ದಾರೆ. ಬಾಯ್ಸ್ vs ಗರ್ಲ್ಸ್ ಶೋ ಮುಕ್ತಾಯಗೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕೋಲ್ಕತ್ತ ಹೋಟೆಲ್ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ
ಹೌದು, ಕನ್ನಡದ ನಿರೂಪಕಿ, ನಟಿ ಅನುಪಮಾ ಗೌಡ ಬಾಯ್ಸ್ vs ಗರ್ಲ್ಸ್ ಶೋ ನಿರೂಪಕಿಯಾಗಿದ್ದರು. ಸದ್ಯ ಕಳೆದ ವಾರ ಬಾಯ್ಸ್ vs ಗರ್ಲ್ಸ್ ಶೋ ಅಂತ್ಯ ಹಾಡಿದೆ. ಅದೇ ಖುಷಿಯಲ್ಲಿ ಅಂದು ಕಾರ್ಯಕ್ರಮದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅದರಲ್ಲೂ ಮೊದಲ ಫೋಟೋದಲ್ಲಿ ನಟಿ ಮುದ್ದಾ ಮಗುವನ್ನು ಎತ್ತಿಕೊಂಡು ಫೋಟೋಗೆ ನಗು ಮುಖದಲ್ಲೇ ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಬಾಯ್ಸ್ vs ಗರ್ಲ್ಸ್ ಶೋನ ಎಲ್ಲ ಸ್ಪರ್ಧಿಗಳ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ನಟಿಯ ಕೈಯಲ್ಲಿರೋ ಮಗು ಹುಟ್ಟಿದ ಎರಡೇ ತಿಂಗಳಿಗೆ ಬಿಗ್ಬಾಸ್ ಮನೆಗೂ ಹೋಗಿ ಬಂದಿತ್ತು.
View this post on Instagram
ಹೌದು, ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್ಯ ಮಗಳು ಪ್ರಸಿದ್ಧಿ. ಈ ಪುಟಾಣಿ ಕೂಡ ಬಾಯ್ಸ್ vs ಗರ್ಲ್ಸ್ ಗ್ರ್ಯಾಂಡ್ ಫಿನಾಲೆಗೆ ಬಂದಿದ್ದಳು. ಜೊತೆಗೆ ಧನರಾಜ್ ಆಚಾರ್ಯ ಪತ್ನಿ ಕೂಡ ಹಾಜರಿದ್ದರು. ಧನರಾಜ್ ಆಚಾರ್ಯ ಮಗಳು ಪ್ರಸಿದ್ಧಿ ಜೊತೆಗೆ ನಟಿ ಅನುಪಮಾ ಗೌಡ ಅವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ