ಅಪ್ಪು ಹೇಳಿದ ಕೊನೆ ಮಾತು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

author-image
Veena Gangani
Updated On
ಅಪ್ಪು ಹೇಳಿದ ಕೊನೆ ಮಾತು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ
Advertisment
  • ವೇದಿಕೆ ಮೇಲೆ ಅಪ್ಪು ಅವರನ್ನು ನೋಡಿ ಕಣ್ಣೀರಿಟ್ಟ ಸಹ ಕಂಟೆಸ್ಟೆಂಟ್ಸ್​
  • ಅಭಿಮಾನಿಗಳ ಆರಾಧ್ಯ ದೈವ ಆಗಿರೋ ನಮ್ಮ ಅಪ್ಪು ಸದಾ ಚಿರಂಜೀವಿ
  • ಜೂನಿಯರ್ ಪುನೀತ್ ರಾಜ್‌ಕುಮಾರ್ ಕಣ್ತುಂಬಿಕೊಂಡ ಫ್ಯಾನ್ಸ್​ ಭಾವುಕ

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ರಿಯಾಲಿಟಿ ಶೋನಲ್ಲಿ ನಟ ಜಗ್ಗಪ್ಪ ಅವರ ಟೀಂ ಒಂದು ಸ್ಕಿಟ್‌ ಮಾಡಿದ್ದಾರೆ. ಟೈಮ್ ಟ್ರಾವೆಲ್ ಮೆಷಿನ್ ಕುರಿತಾದ ಕಾನ್ಸೆಪ್ಟ್‌ನಿಂದ ಸ್ಕಿಟ್​ ರಚನೆಯಾಗಿತ್ತು. ಆ ಟೈಮ್ ಮೆಷಿನ್‌ ಸ್ಕಿಟ್​ನಲ್ಲಿ ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ನೋಡಿದ ಕೂಡಲೇ ಶೋನಲ್ಲಿ ಭಾಗಿಯಾಗಿದ್ದ ಎಲ್ಲರೂ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡದಲ್ಲಿ ಮನಕಲಕುವ ಘಟನೆ.. ಊಟನೂ ತಿನ್ನದೇ ಮಾಲೀಕಗಾಗಿ ಕಾಯುತ್ತಿವೆ ನಾಯಿಗಳು

ಹೌದು, ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ 3 ವರ್ಷಗಳಾಗುತ್ತಿವೆ. ಆದರೆ ಇನ್ನೂ ಕೂಡ ಅವರ ಅಗಲಿಕೆಯ ನೋವು ಕಡಿಮೆ ಆಗಿಲ್ಲ. ಈಗಲೂ ‘ಅಪ್ಪು’ ಎಂಬ ಹೆಸರು ಕಿವಿ ಮೇಲೆ ಬಿದ್ದಾಗ ಫ್ಯಾನ್ಸ್ ಕಣ್ಣೀರು ಇಡುತ್ತಾರೆ. ಅಷ್ಟರ ಮಟ್ಟಿಗೆ ಪುನೀತ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಆದರೆ ವೇದಿಕೆಗೆ ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಎಂಟ್ರಿ ಕೊಡುತ್ತಿದ್ದಂತೆ ನಿರೂಪಕಿ ಅನುಶ್ರೀ ಸೇರಿ ನೆರೆದಿದ್ದ ಎಲ್ಲರೂ ಕಣ್ಣೀರು ಹಾಕಿದ್ದಾರೆ.

ಅಪ್ಪು ಅವರನ್ನು ಮಾತಾಡಿಸಲು ಜಡ್ಜ್​ಗಳು ವೇದಿಕೆಗೆ ಆಗಮಿಸಿದ್ದರು. ಆಗ ಮಾಸ್ಟರ್​ ಆನಂತ್​, ಅಕುಲ್​ ಬಾಲಾಜಿ, ಶ್ವೇತಾ ಚೆಂಗಪ್ಪ, ತರುಣ್​ ಸುದೀರ್, ಕುರಿ ಪ್ರತಾಪ್​​ ಎಲ್ಲರೂ ಅಪ್ಪು ಅವರ ಬಗ್ಗೆ ಮಾತಾಡಿದ್ದರು. ಬಳಿಕ ನಟಿ ನಿರೂಪಕಿ ಮಾತಾಡುತ್ತಾ ವಾಪಸ್ ಬಂದ್ಬಿಡಿ ಸಾರ್ ಪ್ಲೀಸ್ ಕಣ್ಣೀರಿಟ್ಟರು. ಬಳಿಕ ಮಾತನ್ನು ಮುಂದುವರೆಸಿದ ಅವರು, ನೀವಿಲ್ಲದೆ ಇಲ್ಲಿ ಏನೂ ಚೆನ್ನಾಗಿ ನಡೆಯುತ್ತಿಲ್ಲ. ಎಲ್ಲರಿಗೂ ಅಪ್ಪು ಅಂದ್ರೆ ಎಷ್ಟು ಇಷ್ಟನೋ, ಅಷ್ಟೂ ನನಗೆ ಪಂಚ ಪ್ರಾಣ. ಅಪ್ಪು ಸರ್ ಇಲ್ಲಿ ನಿಂತುಕೊಂಡಿದ್ದರು. ಆಗ ನನಗೆ ಅವರು ಹೇಳಿದ್ದರು. ​ಆಗ ನನ್ನ ಕೈ ಹಿಡಿದುಕೊಂಡು ಹೇಳಿದ್ದರು. ನೀವು ಸುಧಾರಿಸಿಕೊಳ್ಳಿ, ನೀವು ಸಮಾಧಾನವಾಗಿ ಇರೀ ಅಂತ ಕೊನೆಯದಾಗಿ ನನ್ನ ಜೊತೆಗೆ ಮಾತಾಡಿದ್ರು. ಮಾನವೀಯತೆ ಮೆರೆಯುವುದು ನಿಜವಾದ ಪರಮಾತ್ಮನ ಕೆಲಸ. ಪ್ರತಿಯೊಬ್ಬರು ಇಲ್ಲಿ ಹುಟ್ಟೋದೇ ದೇವರು ಆಗೋಕೆ. ಆದರೆ ಎಲ್ಲರೂ ದೇವರು ಆಗೋದಿಲ್ಲ. ಒಬ್ಬ ಪುನೀತ್​ ರಾಜ್​ಕುಮಾರ್​ ಮಾತ್ರ ದೇವರು ಆಗ್ತಾರೆ. ಏಕೆಂದರೆ ಅವರ ಗುಣದಿಂದ ಅಂತ ಹೇಳಿ ಕಣ್ಣೀರು ಹಾಕಿದ್ದಾರೆ.

ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಸೇಮ್​ ಟು ಸೇಮ್​ ಅಪ್ಪು ಅವರ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅಪ್ಪು ಅವರ ಕೈ ಬೆರಳು ಹೇಗೆ ಹಿಂದೆ ಮುಂದೆ ಮಾಡ್ತಾರೋ ಹಾಗೇಯೇ ಜೂನಿಯರ್ ಪುನೀತ್ ರಾಜ್‌ಕುಮಾರ್ ಕೂಡ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಅವರು ಅನುಕರಣೆ ಮಾಡಿದ್ದಾರೆ ಅಂತ ನಿರೂಪಕಿ ಅನುಶ್ರೀ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment