Advertisment

VIDEO: ಇದೇ ಕೈಯಾರೆ ಕಳೆದುಕೊಂಡೆ! ಚಿನ್ನುವನ್ನು ನೆನೆದು ಭಾವುಕರಾದ ಆ್ಯಂಕರ್ ಅನುಶ್ರೀ

author-image
Veena Gangani
Updated On
VIDEO: ಇದೇ ಕೈಯಾರೆ ಕಳೆದುಕೊಂಡೆ! ಚಿನ್ನುವನ್ನು ನೆನೆದು ಭಾವುಕರಾದ ಆ್ಯಂಕರ್ ಅನುಶ್ರೀ
Advertisment
  • ಅವನನ್ನು ಮಿಸ್‌ ಮಾಡಿಕೊಂಡು ಒಂದು ವರ್ಷ ಅತ್ತಿದ್ದೇನೆ!
  • ಇದೇ ಕೈಯಲ್ಲಿ ಚಿನ್ನುವನ್ನು ಕಳೆದುಕೊಂಡೆ ಎಂದ ಅನುಶ್ರೀ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಌಂಕರ್​ ಅನುಶ್ರೀ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಌಂಕರ್ ಅನುಶ್ರೀ ಎಂದರೆ ಅಚ್ಚು ಮೆಚ್ಚು. ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಅವರು ಒಂದಲ್ಲಾ ಒಂದು ವಿಚಾರದ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ ಇದೀಗ ತಮ್ಮ ಮುದ್ದಿನ ಶ್ವಾನ ಚಿನ್ನುವನ್ನು ನೆನೆದು ಭಾವುಕರಾದರು.

Advertisment

ಇದನ್ನೂ ಓದಿ:ಮದ್ವೆ ಆಗೋ ಸಿಹಿ ಸುದ್ದಿ ಕೊಟ್ರೆ ಬಕೆಟ್ ಅಂತೀರಾ’.. ಲೈವ್​ನಲ್ಲಿ ಆ್ಯಂಕರ್ ಅನುಶ್ರೀ ಕೆಂಡಾಮಂಡಲ; ಕಾರಣವೇನು?

publive-image

ಕಾಮಿಡಿ ಕಿಲಾಡಿಗಳು ನಿರೂಪಕರಾದ ಅನುಶ್ರೀ ಹಾಗೂ ನಟ ಜಗ್ಗೇಶ್ ಅವರು ತಮ್ಮ ಮುದ್ದಾದ ಶ್ವಾನದ ಬಗ್ಗೆ ಮಾತನಾಡಿದ್ದಾರೆ. ನಟ ಜಗ್ಗೇಶ್ ಅವರು ಅರ್ಜುನ ಎಂಬ ಹೆಸರಿನ ಸಾಕು ನಾಯಿಯ ಜತೆಗಿದ್ದ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಯಾವಾಗಲಾದರೂ ಬೇಜಾರು ಆದರೆ ಅವನ್ನನ್ನೇ ನೋಡಿಕೊಂಡು ಕೂತಿರುತ್ತೇನೆ. ಅವನನ್ನು ಮಿಸ್‌ ಮಾಡಿಕೊಂಡು ಒಂದು ವರ್ಷ ಅತ್ತಿದ್ದೇನೆ. ಅದು ನನ್ನ ಮುಖ ಹತ್ತಿರ ಬಂದು ನೆಕ್ಕಿ ಪ್ರೀತಿ ವ್ಯಕ್ತಪಡಿಸುತ್ತಿತ್ತು ಅಂತ ಹೇಳಿದ್ದಾರೆ.

ಇನ್ನು, ನಟಿ ಹಾಗೂ ನಿರೂಪಕಿ ಅನುಶ್ರೀ ಅವರು ಕೂಡ ಮುದ್ದಿನ ಶ್ವಾನ ಚಿನ್ನುವನ್ನು ನೋಡಿ ಭಾವುಕರಾದರು. ಚಿನ್ನು ಈಗ ನಮ್ಮ ಜತೆ ಇಲ್ಲ. ಎರಡು ವರ್ಷದ ಹಿಂದೆ ಅವನನ್ನು ನಾವು ಕಳೆದುಕೊಂಡೆವು. ಇದೇ ಕೈಯಲ್ಲಿ ಕಳೆದುಕೊಂಡೆ. ಅವನು ನನ್ನ ಮಗ. ಮತ್ತೆ ಈಗ ಚಿನ್ನು ಹುಟ್ಟಿ ಬಂದಿದ್ದಾನೆ ಅಂತ ಹೇಳಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment