/newsfirstlive-kannada/media/post_attachments/wp-content/uploads/2025/06/mahanati2.jpg)
ವಿಭಿನ್ನ ಕಾನ್ಸೆಪ್ಟ್ ಜೊತೆಗೆ ಮಹಾನಟಿಯರ ಒಂದೊಂದೆ ಪ್ರತಿಭೆಗಳನ್ನು ಆಚೆ ತರುತ್ತಿದ್ದಾರೆ ಜಡ್ಜ್. ಈ ಕಾರ್ಯಕ್ರಮಕ್ಕೆ ಅಭಿನಯದ ಮೇಲೆ ಆಸಕ್ತಿಯಿರೋ ಯುವತಿಯರು ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್ ಕೊಟ್ಟಿದ್ದರು. ಇನ್ನೂ, ಮಹಾನಟಿ ಸೀಸನ್ 2 ಭರ್ಜರಿ ಸೌಂಡ್ ಮಾಡ್ತಿದೆ. ನಟಿ ಆಗೋ ಕನಸು ಹೊತ್ತಿರೋ ವಿವಿಧ ಜಿಲ್ಲೆಗಳಿಂದ 24 ಮಂದಿ ಮೆಗಾ ಆಡಿಷನ್ ಕೊಟ್ಟಿದ್ದರು. ಅವರಲ್ಲಿ ಒಟ್ಟು 16 ಸ್ಪರ್ಧಿಗಳು ಮಹಾನಟಿ ಸೀಸನ್ 2ಕ್ಕೆ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ
ಇವರಲ್ಲಿ ಸಿಂಚನಾ. ಆರ್ ಮೈಸೂರು, ವರ್ಷಾ ಡಿಗ್ರಜೆ ಚಿಕ್ಕೋಡಿ, ಪೂಜಾ ರಮೇಶ್ ಬೆಂಗಳೂರು, ವಂಶಿ ರತ್ನ ಕುಮಾರ್ ದಕ್ಷಿಣ ಕನ್ನಡ, ಖುಷಿ ಬೆಳಗಾವಿ, ಶ್ರೀಯ ಅಗಮ್ಯ ಮೈಸೂರು, ತನಿಷ್ಕ ಮೂರ್ತಿ ಮೈಸೂರು, ಬೆಂಗಳೂರಿನ ಭೂಮಿಕ ಟಿ, ಬೀದರ್ನ ದಿವ್ಯಾಂಜಲಿ, ಚಿಕ್ಕಮಗಳೂರಿನ ಸೌಗಂಧಿಕ, ತೀರ್ಥಹಳ್ಳಿಯ ಮಾನ್ಯ ರಮೇಶ್, ಬೆಂಗಳೂರಿನ ನಿವಿಕ್ಷ, ಮೈಸೂರಿನ ಪ್ರೇರಣ ವಿ ಪಾಟೀಲ್, ದಾವಣಗೆರೆಯ ವರ್ಷ ಕೆ.ಪಿ, ಸುಳ್ಯದ ಸಾಯಿಶ್ರುತಿ, ತುಮಕೂರಿನ ದೀಪಿಕಾ ಆಯ್ಕೆ ಆಗಿದ್ದಾರೆ.
ಇನ್ನೂ, ಕಳೆದ ವಾರ ಮಹಾನಟಿಯರ ಫೋಟೋಶೂಟ್ ನಡೆದಿದೆ. ಭಿನ್ನ ವಿಭಿನ್ನ ಕಾನ್ಸೆಪ್ಟ್ನಲ್ಲಿ ಫೋಟೋಶೂಟ್ ಮಾಡಿಸಿ ಮಿರ ಮಿರ ಮಿಂಚಿದ್ದಾರೆ. ಒಬ್ಬರು ಮಾರ್ಡನ್ ಲುಕ್, ಮತ್ತೊಬ್ಬರು ಟ್ರೆಡಿಷನಲ್ ಲುಕ್ ಹೀಗೆ ಭಿನ್ನ ವಿಭಿನ್ನ ಲುಕ್ನಲ್ಲಿ ಮಹಾನಟಿಯರು ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ ತುಂಬಾ ಯುನಿಕ್ ಆಗಿ ಕಾಣಿಸಿದ್ದು ತುಮಕೂರಿನ ದೀಪಿಕಾ. ಹೌದು, ತುಮಕೂರಿನ ದೀಪಿಕಾ ಗಗನಸಖಿ (air hostess) ಲುಕ್ನಲ್ಲಿ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೇ ವಿಮಾನದಲ್ಲಿರೋ ಪ್ರಯಾಣಿಕರ ಜೊತೆಗೆ ಹೇಗೆ ಮಾತಾಡಬೇಕು ಅಂತ ಕಲಿತುಕೊಂಡರು.
ಇನ್ನೂ, ವೇದಿಕೆಗೆ ಎಂಟ್ರಿ ಕೊಟ್ಟ ದೀಪಿಕಾಗೆ ರಮೇಶ್ ಅರವಿಂದ್ ಅವರು ಒಂದು ಚಾಲೆಂಜ್ ಕೊಟ್ಟಿದ್ದರು. ಐದು ವರ್ಷದ ಹಿಂದೆ ಮನೆ ಬಿಟ್ಟು ಓಡಿ ಹೋದ ನಿಮ್ಮ ಸಹೋದರ ವಿಮಾನದಲ್ಲಿ ಸಿಕ್ತಾನೆ ಅಂತ ಕೊಡುತ್ತಾರೆ. ಈ ಸ್ಕಿಟ್ ಮುಗಿದ ಬಳಿಕ ವೇದಿಕೆ ಮೇಲೆ ಅವರ ಬದುಕಿನ ವಿಟಿ ಹಾಕಲಾಯಿತು. ಅದರಲ್ಲಿ ದೀಪಿಕಾರ ಇಡೀ ಜೀವನ ಹೇಗಿದೆ? ಅವರ ಅಮ್ಮ ಹಾಗೂ ಅಪ್ಪ ಏನು ಕೆಲಸ ಮಾಡುತ್ತಾರೆ ಅಂತೆಲ್ಲಾ ತೋರಿಸಿದ್ದರು.
ದೀಪಿಕಾ ತಾಯಿ ಇಜ್ಜಲು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ಇನ್ನೂ ಅವರ ತಂದೆ ಗಾರೆ ಕೆಲಸ ಮಾಡುತ್ತಾರೆ. ಇದನ್ನೇ ನೆನೆಸಿಕೊಂಡು ದೀಪಿಕಾ ವೇದಿಕೆ ಮೇಲೆ ಕಣ್ಣೀರು ಇಟ್ಟಿದ್ದಾರೆ. ನಮ್ಮ ಅಪ್ಪ ಅಮ್ಮ ಹೆಮ್ಮೆ ಪಡುವಂತೆ ಮಾಡುತ್ತೇನೆ. ಅವರನ್ನು ಸಂತೋಷವಾಗಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ದೀಪಿಕಾಳ ಜೀವನದ ಕಥೆ ಬಗ್ಗೆ ಕೇಳಿದ ನಿರೂಪಕಿ ಅನುಶ್ರೀ, ನಿಶ್ವಿಕಾ ನಾಯ್ಡು ಹಾಗೂ ಸಹ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ