‘ಬಿರಿಯಾನಿಗೆ ಕಬಾಬ್ ಯಾಕೆ ಪ್ರಪೋಸ್ ಮಾಡಲ್ಲ’.. ಅನುಶ್ರೀ ಉತ್ತರಕ್ಕೆ ಎಲ್ಲರೂ ಶಾಕ್​!

author-image
Veena Gangani
Updated On
‘ಬಿರಿಯಾನಿಗೆ ಕಬಾಬ್ ಯಾಕೆ ಪ್ರಪೋಸ್ ಮಾಡಲ್ಲ’.. ಅನುಶ್ರೀ ಉತ್ತರಕ್ಕೆ ಎಲ್ಲರೂ ಶಾಕ್​!
Advertisment
  • ವೇದಿಕೆ ಮೇಲೆ ತನಿಷ್ಕಾ ಕೇಳಿದ ಪ್ರಶ್ನೆಗೆ ಎಲ್ಲರೂ ದಂಗು
  • ನಿರೂಪಕಿ ಅನುಶ್ರೀ ಒಗಟಿಗೆ ಕೊಟ್ಟ ಉತ್ತರ ಏನು ಗೊತ್ತಾ?
  • ಮಹಾನಟಿ ಶೋನಲ್ಲಿ ಮಿಂಚುತ್ತಿದ್ದಾರೆ ಈ ಸ್ಟಾರ್ ನಿರೂಪಕಿ

ನಿರೂಪಕಿ​ ಅನುಶ್ರೀ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಅನುಶ್ರೀ ಎಂದರೆ ಅಚ್ಚು ಮೆಚ್ಚು. ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಅವರು ಒಂದಲ್ಲಾ ಒಂದು ವಿಚಾರದ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಚಟಪಟ ಅಂತ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

publive-image

ಸದ್ಯ ನಿರೂಪಕಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮುಂದಿನ ತಿಂಗಳು ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದ್ರೆ, ಈ ಬಗ್ಗೆ ನಟಿಯಿಂದ ಅಧಿಕೃತ ಮಾಹಿತಿ ನೀಡಿಲ್ಲ. ಆದ್ರೆ, ಅಭಿಮಾನಿಗಳಂತೂ ಸಖತ್​ ಥ್ರಿಲ್​ ಆಗಿದ್ದಾರೆ. ಇಷ್ಟು ದಿನ ಯಾವಾಗ ಮದುವೆ ಅಕ್ಕಾ ಅಂತ ಕೇಳುತ್ತಿದ್ದ ಅಭಿಮಾನಿಗಳಿಗೆ ಅನುಶ್ರೀ ಸದ್ಯದಲ್ಲೇ ಸಿಹಿ ಸುದ್ದಿ ಕೊಡಲಿದ್ದಾರೆ.


ಇದನ್ನೂ ಓದಿ: ಭಾವನ ಜೊತೆ ಅಫೇರ್.. ಗಂಡನಿಗೆ ಮುಹೂರ್ತ ಇಟ್ಟ ಸುಂದರ ಹೆಂಡತಿ ಅರೆಸ್ಟ್ ಆಗಿದ್ದೇಗೆ?

ಇನ್ನೂ, ನಟಿ ಮಹಾನಟಿ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ನಡುವೆ ಮಹಾನಟಿ ರಿಯಾಲಿಟಿ ಶೋನಲ್ಲಿ ಅನುಶ್ರೀ ಅವರು ಒಗಟನ್ನು ಬಿಡಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಹೌದು, ಹೀಗೆ ಮಹಾನಟಿ ಸ್ಪರ್ಧಿ ತನಿಷ್ಕಾ ಕಬಾಬ್​ ಬಿರಿಯಾನಿಗೆ ಪ್ರಪೋಸ್​ ಮಾಡಲು ಹೋಗುತ್ತದೆ, ಆದರೆ ಮಾಡದೇ ವಾಪಸ್​ ಬಂದುಬಿಡುತ್ತದೆ, ಯಾಕೆ ಅಂತ ಕೇಳಿದ್ದಾರೆ. ಆದರೆ ಇದಕ್ಕೆ ನಿಶ್ವಿಕಾ ನಾಯ್ಡು, ತರುಣ್​ ಸುಧೀರ್​ ಎಲ್ಲಾ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಇದೇ ಪ್ರಶ್ನೆಗೆ ಥಟ್​ ಅಂತ ಉತ್ತರಿಸಿದ ಅನುಶ್ರೀ ಅದಕ್ಕೆ ಧಮ್​ ಇರಲ್ಲ ಎಂದಿದ್ದಾರೆ. ಒಹ್​ ಇದೇ ಸರಿಯಾದ ಉತ್ತರ ಎಂದು ಸ್ಪರ್ಧಿ ಹೇಳಿದಾಗ ಎಲ್ಲರೂ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment