ಸ್ಟಾರ್ ನಿರೂಪಕಿ ಅನುಶ್ರೀ ಮದುವೆ ಆಗೋ ಹುಡುಗ ಇವರೇ ನೋಡಿ!

author-image
Veena Gangani
Updated On
ಸ್ಟಾರ್ ನಿರೂಪಕಿ ಅನುಶ್ರೀ ಮದುವೆ ಆಗೋ ಹುಡುಗ ಇವರೇ ನೋಡಿ!
Advertisment
  • ನಟಿ, ನಿರೂಪಕಿ ಅನುಶ್ರೀ ಮದುವೆ ಯಾವಾಗ ಗೊತ್ತಾ?
  • ಅನುಶ್ರೀ ಮದುವೆ ಮಾಡಿಕೊಳ್ಳುತ್ತಿರೋ ಹುಡುಗ ಯಾರು?
  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ನಿರೂಪಕಿ

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೌದು, ನಟಿ, ನಿರೂಪಕಿ ಅನುಶ್ರೀ ಅವರು ಯುವ ರಾಜ್‍ಕುಮಾರ್ ಪತ್ನಿ ಶ್ರೀದೇವಿ ಆಪ್ತ ಸ್ನೇಹಿತ ಆಗಿರುವ ರೋಷನ್​ ಜೊತೆಗೆ ಮದುವೆ ಆಗುತ್ತಿದ್ದಾರಂತೆ.

publive-image

ಹೌದು, ರೋಷನ್ ಜೊತೆ ಆ್ಯಂಕರ್ ಅನುಶ್ರೀ ಅವರು ಮದುವೆಯಾಗಲಿದ್ದಾರಂತೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 27, 28ರಂದು ಬೆಂಗಳೂರು ಮೂಲದ ಐಟಿ ಉದ್ಯೋಗಿ ಜೊತೆ ವಿವಾಹ ಜರುಗಲಿದೆ. ಅನುಶ್ರೀ ಪಕ್ಕಾ ಅರೇಂಜ್ ಮ್ಯಾರೇಜ್ ಆಗಲಿದ್ದಾರೆ. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನಲ್ಲೇ ಅದ್ಧೂರಿ ವಿವಾಹ ಜರುಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

publive-image

ಇನ್ನೂ, ಈ ಬಗ್ಗೆ ನಿರೂಪಕಿ ಅನುಶ್ರೀ ಅವರು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇನ್ನು, ಕೆಲವೇ ದಿನಗಳಲ್ಲಿ ಮದುವೆ ಬಗ್ಗೆ ಅನೌನ್ಸ್​ ಮಾಡೋ ಸಾಧ್ಯತೆ ಇದೆ. ಸದ್ಯ ಅನುಶ್ರೀ ಹಾಗೂ ರೋಷನ್​  ಜೊತೆಗೆ ಪೂಜೆಯಲ್ಲಿ ಭಾಗಿಯಾಗಿರೋ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

publive-image

ಅನುಶ್ರೀ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತೆ. ಚಟಪಟ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತಾಡದ ಅನುಶ್ರೀ ಈ ಹಿಂದೆ ಮಹಾನಟಿ ವೇದಿಕೆಯಲ್ಲಿ ನಾನು ಈ ವರ್ಷ ಪಕ್ಕಾ ಮದುವೆ ಆಗುತ್ತೇನೆ ಅಂದಿದ್ರು. ಸದ್ಯ ಮತ್ತೆ ಅನುಶ್ರೀ ಅವರ ಮದುವೆ ವಿಚಾರ ಓಡಾಡ್ತಿದೆ. ಮದುವೆ ಫಿಕ್ಸ್​ ಆಗಿರೋದು ಕನ್ಫರ್ಮ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment