/newsfirstlive-kannada/media/post_attachments/wp-content/uploads/2025/03/anushree5.jpg)
ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ. ಹುಟ್ಟುಹಬ್ಬದ ಹಿನ್ನೆಲೆ ಪುನೀತ್ ಸ್ಮಾರಕಕ್ಕೆ ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿದೆ.
ಇದನ್ನೂ ಓದಿ: RCB Unbox event: ಯಾರೆಲ್ಲ ಬರ್ತಿದ್ದಾರೆ? ಮನೆಯಲ್ಲೇ ಕೂತು ನೇರ ಪ್ರಸಾರ ವೀಕ್ಷಿಸಬಹುದು..!
ದೇವಸ್ಥಾನದ ಮಂಟಪದ ಮಾದರಿಯಲ್ಲೇ ಅಪ್ಪು ಸ್ಮಾರಕಕ್ಕೆ ಅಲಂಕಾರ ಮಾಡಿಲಾಗಿದ್ದು, ಅಪ್ಪು ಸ್ಮಾರಕ, ಪಾರ್ವತಮ್ಮ ರಾಜ್‍ಕುಮಾರ್ ಸ್ಮಾರಕ ಹಾಗೂ ಅಣ್ಣಾವ್ರ ಸ್ಮಾರಕಕ್ಕೆ ಹೂವಿನಿಂದ ಅಲಂಕಾರ ಮಾಡಿಲಾಗಿದೆ.
ಇನ್ನೂ, ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮಕ್ಕಳೊಂದಿಗೆ ಭೇಟಿ ನೀಡಿದ್ದಾರೆ. ಪುನೀತ್ ಸ್ಮಾರಕಕ್ಕೆ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಅವರಿಗೆ ಇಷ್ಟವಾಗಿರೋ ತಿಂಡಿಗಳನ್ನು ಸಮಾಧಿ ಮುಂದೆ ಇಟ್ಟು ಪೂಜೆ ಮಾಡಿದ್ದಾರೆ.
ಇನ್ನೂ, ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ನಟಿ, ನಿರೂಪಕಿ ಅನುಶ್ರೀ ಅವರು ಭೇಟಿ ಕೊಟ್ಟು ನಮನ ಸಲ್ಲಿಸಿದ್ದಾರೆ. ಇದಾದ ಬಳಿಕ ಅಪ್ಪು ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಅವರು, ಇಲ್ಲಿ ನಗು ನಗುತ್ತಾ ಹೋಗುತ್ತಿರೋ ಮಗುವಿನ ನಗುವಿನಲ್ಲಿ ಅಪ್ಪು ಇರಬಹುದು. ಅವರು ಮಗು ರೂಪದಲ್ಲಿ ಹುಟ್ಟಿ ಬಂದಿರಬಹುದು. ನನ್ನ ಪ್ರಕಾರ ಈ ಸಮಾಧಿ ಬಳಿ ಒಂದು ಎನರ್ಜಿ ಇದೆ. ಇಲ್ಲಿ ಎಲ್ಲರೂ ಒಳ್ಳೆ ಮನಸ್ಸಿನಿಂದ ಬಂದು ಏನೇ ಕೇಳಿಕೊಂಡರು ಆಗೇ ಆಗುತ್ತೆ ಅನ್ನೋ ನಂಬಿಕೆ ನನಗಿದೆ. ಅಪ್ಪು ಅವರನ್ನು ವೇದಿಕೆ ಮೇಲೆ ಕರೆಯೋದು ಅಂದ್ರೆ ನನಗೆ ತುಂಬಾ ಇಷ್ಟ. ಅಪ್ಪು ಸರ್ ಅವರ ಗುಣ ನನಗೆ ಇಷ್ಟ. ಈ ಹಿಂದೆ ಅಪ್ಪು ಅವರ ಬರ್ತ್ ಡೇ ಹಿಂದಿನ ದಿನ ಅವರ ಮನೆಗೆ ಹೋಗಿದ್ದೇ. ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದರು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ