ನಿರೂಪಕಿ ಅನುಶ್ರೀಗೆ ಕೂಡಿ ಬಂತು ಕಂಕಣ ಭಾಗ್ಯ? ಕೊನೆಗೂ ಮದುವೆಗೆ ಡೇಟ್ ಕೊಟ್ರು!

author-image
Veena Gangani
Updated On
ನಿರೂಪಕಿ ಅನುಶ್ರೀಗೆ ಕೂಡಿ ಬಂತು ಕಂಕಣ ಭಾಗ್ಯ? ಕೊನೆಗೂ ಮದುವೆಗೆ ಡೇಟ್ ಕೊಟ್ರು!
Advertisment
  • ಕೊನೆಗೂ ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಕೊಟ್ರು ಗುಡ್‌ನ್ಯೂಸ್‌!
  • ಯಾರೆಲ್ಲಾ ನಟಿ ಅನುಶ್ರೀ ಅವರ ಮದುವೆಗೋಸ್ಕರ ಕಾಯ್ತಾ ಇದ್ದೀರಾ?
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ ಈ ಸ್ಟಾರ್ ನಿರೂಪಕಿ

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತೆ. ಚಟಪಟ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತಾಡದ ಅನುಶ್ರೀ ಇದೀಗ ತಮ್ಮ ಫ್ಯಾನ್ಸ್​ಗೆ ಅಪ್ಡೇಟ್ ಕೊಟ್ಟಿದ್ದಾರೆ.

ಇದನ್ನೂ ಓದಿ:ಇನ್​ಸ್ಟಾದಲ್ಲಿ ಪತ್ನಿ ಮದುವೆ ವಿಡಿಯೋ ನೋಡಿ ಶಾಕ್ ಆದ ಪತಿ.. ಒಂದೇ ವಾರದ ಪ್ರೀತಿಗೆ ಕೈ ಕೊಟ್ಟ ಮಹಿಳೆ!

publive-image

ಪದೇ ಪದೇ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಸೋಷಿಯಲ್​ ಮೀಡಿಯಾದಲ್ಲಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ ಕೆಲವೊಂದು  ಪೋಸ್ಟ್​ಗಳು ಹರಿದಾಡುತ್ತಲೇ ಇರುತ್ತವೆ. ಆದ್ರೆ ಈ ಹಿಂದೆ ನಿರೂಪಕಿ ಮಾರ್ಚ್​ ತಿಂಗಳಿನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ 2025ರ ಒಳಗೆ ಮದುವೆ ಆಗೋದಾಗಿ ತಿಳಿಸಿದ್ದರು.

publive-image

ಇದೀಗ ನಟಿ, ನಿರೂಪಕಿ ಅನುಶ್ರೀ ಅವರು ಏಪ್ರಿಲ್​ನಲ್ಲಿ ಮತ್ತೆ ಗುಡ್ ನ್ಯೂಸ್ ಬಗ್ಗೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಮದ್ವೆ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ ನಿರೂಪಕಿ ಅನುಶ್ರೀ. ವಿದ್ಯಾಪತಿ ಸಿನಿಮಾ ನಟ ನಾಗಭೂಷಣ್ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಕೇಳಿದ ಪ್ರಶ್ನೆಗೆ ಅನುಶ್ರೀ ಉತ್ತರಿಸಿದ್ದಾರೆ. ಇದೇ ವರ್ಷ ಮದುವೆ ಆಗ್ತೀನಿ ಎಂದು ಹೇಳೋ ಮೂಲಕ ಸಿಂಗಲ್ ಲೈಫ್​ಗೆ ಗುಡ್ ಬೈ ಸೂಚನೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment