/newsfirstlive-kannada/media/post_attachments/wp-content/uploads/2025/07/anushree.jpg)
ಪಟ ಪಟ ಅಂತ ಅರಳು ಹುರಿದಂಗೆ ಮಾತ್ನಾಡೋ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ. ಅವರ ಆ್ಯಂಕರಿಂಗ್ ಕರುನಾಡ ಮನೆಮಾತು. ಅಷ್ಟೇ ಯಾಕೆ ಮನೆ ಮಗಳು ಅಂದ್ರನೂ ತಪ್ಪಲ್ಲ. ಕಿರುತೆರೆ, ಹಿರಿತೆರೆ ಯಾವುದೇ ತೆರೆಯಾದ್ರೂ ಅನುಶ್ರೀ ನಿರೂಪಣೆನೇ ಬೇಕು ಅಂತ ಕ್ಯೂನಲ್ಲಿ ನಿಂತು ಅವರ ಡೇಟ್ ತಗೊಳ್ತಾರೆ ಅಂದ್ರೇ ಜನಪ್ರಿಯತೆ ಬಗ್ಗೆ ಎಕ್ಸ್ಟ್ರಾ ಮಾತಿಲ್ಲ.
ಇದನ್ನೂ ಓದಿ:ಮಕ್ಕಳಿಗಾಗಿ ಗಿಫ್ಟ್ ಬಾಕ್ಸ್ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್
ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿರೋ ಅನುಶ್ರೀ ಅವರು ಬದುಕು ಕಟ್ಟಿಕೊಂಡ ರೀತಿ ಸಾವಿರಾರು ಹೆಣ್ಮಕ್ಕಳಿಗೆ ಸ್ಪೂರ್ತಿ. ರಿಯಾಲಿಟಿ ಶೋಗಳ ನಿರೂಪಣೆಯಲ್ಲಿ ಅನುಶ್ರೀ ಅವರನ್ನು ಬೀಟ್ ಮಾಡೋಕೆ ಸಾಧ್ಯನೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ಅನುಶ್ರೀ ಅವರು ವೀಕ್ಷಕರನ್ನ ಆವರಿಸಿಕೊಂಡಿದ್ದಾರೆ. ಅನುಶ್ರೀ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮೊದಲು ಎದುರಾಗೋ ಪ್ರಶ್ನೆ ಮದುವೆ ಯಾವಾಗ ಮ್ಯಾಡಮ್? ಸೋಶಿಯಲ್ ಮೀಡಿಯಾದಲ್ಲಂತೂ ಅನುಶ್ರೀ ಅವರ ಮದುವೆ ಪೋಸ್ಟ್ಗಳಿಗೆ ಲೆಕ್ಕಾನೇ ಇಲ್ಲ.
ಈ ಹಿಂದೆ ಮಹಾನಟಿ ವೇದಿಕೆಯಲ್ಲಿ ನಾನು ಈ ವರ್ಷ ಪಕ್ಕಾ ಮದುವೆ ಆಗ್ತಿನಿ ಅಂದಿದ್ರು ಅನುಶ್ರೀ. ಈ ಬೆನ್ನಲ್ಲೆ ಅವ್ರು ನಿರೂಪಣೆ ಮಾಡುವ ಅವ್ರದ್ದೇ ಯೂಟೂಬ್ ಚಾನಲ್ನಲ್ಲಿ ಅನುಶ್ರೀ ಅವರು ನಾನು ಅಪ್ಪು ಫ್ಯಾನ್ ಮಾರ್ಚ್ ನಲ್ಲಿ ಮದುವೆ ಆಗಬಹುದು ಎಂದಿದ್ರು. ಹೀಗಾಗಿ ಕಳೆದ ವರ್ಷ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಅನುಶ್ರೀ ಮದುವೆ ವಿಚಾರ. ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಬರ್ತ್ ಡೇ ಯಂದೇ ಅನುಶ್ರೀ ಹಸೆಮಣೆ ಏರ್ತಾರೆ ಅಂತ ಸುದ್ದಿ ಓಡಾಡಿತ್ತು. ಇದು ಅಲ್ಲದೇ ಡಿಕೆಡಿ ವೇದಿಕೆಯಲ್ಲಿ ಶಿವಣ್ಣ ಅನು ಮದುವೆ ಯಾವಾಗಮ್ಮ ಅಂತ ಕೇಳಿದ್ರು. ಆಗ ಅನುಶ್ರೀ ಅವರು ಅಣ್ಣ ಈ ವರ್ಷ ಪಕ್ಕಾ ಆಗ್ತಿನಿ ಅಂದಿದ್ರು. ನಾವು ಕೂಡ ಈ ಬಗ್ಗೆ ಮಾಹಿತಿ ನೀಡಿದ್ವಿ. ಆಪ್ತರನ್ನ ಸಂಪರ್ಕಿಸಿ, ಸುದ್ದಿ ಸುಳ್ಳು.. ತಾಮಷೆಗೆ ಮಾರ್ಚ್ ಎಂದು ಹೇಳಿದ್ರು ಅಂತ ಎಂಬುದನ್ನ ಬಹಿರಂಗ ಪಡೆಸಿದ್ವಿ. ಕಳೆದ ವರ್ಷದಿಂದ ಈ ವರ್ಷ ಮದುವೆ ಆಗ್ತಿನಿ ಅಂತ ಹೇಳ್ತಾ ಬಂದಿದ್ರು ಅನುಶ್ರೀ. ಸದ್ಯ ಮತ್ತೆ ಅನುಶ್ರೀ ಅವರ ಮದುವೆ ವಿಚಾರ ಓಡಾಡ್ತಿದೆ. ಮದುವೆ ಫಿಕ್ಸ್ ಆಗಿರೋದು ಕನ್ಫರ್ಮ್ ಆಗಿದೆ.
ಹೌದು, ಈ ಬಗ್ಗೆ ಖಚಿತ ಮಾಹಿತಿ ಪಡೆಯಲು ಅನುಶ್ರೀ ಅವರ ಆಪ್ತರನ್ನ ನಿಮ್ಮ ನ್ಯೂಸ್ ಫಸ್ಟ್ ಸಂಪರ್ಕಿಸಿತ್ತು. ಹೌದು ಎಂಬ ಉತ್ತರ ಸಿಕ್ಕಿದೆ. ಆಗಸ್ಟ್ನಲ್ಲಿ ಅನುಶ್ರೀ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದ ಐಟಿ ಉದ್ಯೋಗಿ ಜೊತೆ ಆಗಸ್ಟ್ 27, 28ರಂದು ಅನುಶ್ರೀ ವಿವಾಹ ಜರುಗಲಿದೆ. ಪಕ್ಕಾ ಅರೇಂಜ್ ಮ್ಯಾರೇಜ್ ಆಗಲಿದ್ದಾರೆ. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನಲ್ಲೇ ಅದ್ಧೂರಿ ವಿವಾಹ ಜರುಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ನಿರೂಪಕಿ ಅನುಶ್ರೀ ಅವರು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇನ್ನು, ಕೆಲವೇ ದಿನಗಳಲ್ಲಿ ಮದುವೆ ಬಗ್ಗೆ ಅನೌನ್ಸ್ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ