/newsfirstlive-kannada/media/post_attachments/wp-content/uploads/2024/08/anushree.jpg)
ಕನ್ನಡದ ಸ್ಟಾರ್​ ನಿರೂಪಕಿ ಅನುಶ್ರೀ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಌಂಕರ್ ಅನುಶ್ರೀ ಎಂದರೆ ಅಚ್ಚು ಮೆಚ್ಚು. ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಅವರು ಒಂದಲ್ಲಾ ಒಂದು ವಿಚಾರದ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ.
ಇದೀಗ ಫೋಟೋವೊಂದಕ್ಕೆ ಖಡಕ್​ ಆಗಿ ಪೋಸ್​​ ಕೊಡುತ್ತಾ ಕ್ಯಾಪ್ಷನ್​ ಮೂಲಕವೇ ಯಾರಿಗೋ ಟಾಂಗ್​​ ಕೊಟ್ಟಂತಿದೆ. ಹೌದು, ಇದೀಗ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ, ನಿರೂಪಕಿ ಅನುಶ್ರೀ ಅವರು, ಬ್ಲಾಕ್​ ಅಂಡ್ ಬ್ಲಾಕ್​ ಔಟ್​ಫಿಟ್​ನಲ್ಲಿ ಸಖತ್​ ಆಗಿ ಕಾಣಿಸಿಕೊಂಡಿದ್ದಾರೆ.
View this post on Instagram
ಆದರೆ ಇದೇ ಫೋಟೋ ಜೊತೆಗೆ ಏನೇ ಹೇಳಿ, ಏನೇ ಮಾಡಿ, ಕಾಲ್ ಎಳೆಯೋರು ಇದ್ದೇ ಇರ್ತಾರೆ. ಕಾಲ ಉತ್ತರ ಕೊಡುತ್ತೆ. ಅದಕ್ಕೆ ನಾವ್ ಯಾಕ್ ಮಾಡೋಣ ಚಿಂತೆ ಅಂತ ಬರೆದುಕೊಂಡಿದ್ದಾರೆ. ಇದೇ ಪೋಸ್ಟ್​ ನೋಡಿದ ಅಭಿಮಾನಿಗಳು ಕಾಲು ಎಳೆಯೋರು ನಿಮ್ಮ ಕಾಲ ಕೆಳಗೆ ಇದ್ದಾರೆ, ಅನು ಅಕ್ಕಾ ಸೂಪರ್​​ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ