/newsfirstlive-kannada/media/post_attachments/wp-content/uploads/2025/05/anushreee.jpg)
ಕಾಮಿಡಿ ಕಿಲಾಡಿಗಳು ಸೀಸನ್ 3ರ ಮೂಲಕ ಜನಪ್ರಿಯತೆ ಪಡೆದ ಅದ್ಭುತ ನಟ ರಾಕೇಶ್ ಪೂಜಾರಿ. ಸೀಸನ್ ವಿನ್ನರ್ ಆಗಿ ಗೆಲುವಿನ ನಗೆ ಬಿರಿರೋ ರಾಕೇಶ್ ಅವರು ಕುಟುಂಬಕ್ಕೆ ಆಸರೆ ಆಗಿದ್ದರು. ಆದ್ರೆ ರಾಕೇಶ್ ಪೂಜಾರಿ ಅಕಾಲಿಕ ನಿಧನಕ್ಕೆ ಕಿರುತೆರೆಯ ಹಲವು ನಟ, ನಟಿಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:ಗ್ರ್ಯಾಂಡ್ ಆಗಿ ಅತ್ತೆ-ಮಾವನ ಮದುವೆ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ ರಜತ್ ಕಿಶನ್! PHOTOS
ಅದರಲ್ಲೂ ಯಾವಾಗಲೂ ಅಕ್ಕ ಅಕ್ಕ ಅಂತ ತಮಾಷೆ ಮಾಡುತ್ತಾ ಇರುತ್ತಿದ್ದ ತಮ್ಮನನ್ನು ನಟಿ, ನಿರೂಪಕಿ ಅನುಶ್ರೀ ಅವರು ಕಳೆದುಕೊಂಡಿದ್ದಾರೆ. ನಮ್ಮ ಕರಾವಳಿಯ ಅಪ್ಪಟ ಪ್ರತಿಭೆ ರಾಕೇಶ್. ಅಕ್ಕ, ಅಕ್ಕ ಎಂದು ಬಾಯಿ ತುಂಬಾ ಮನಸಾರೆ ಕರೆಯುತ್ತಿದ್ದ. ನಾನು ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ತಮಾಷೆಗೂ ಯಾರ ಮನಸ್ಸನ್ನು ರಾಕೇಶ್ ನೋಯಿಸಿಲ್ಲ. ಕನ್ನಡದ ಶೈಲಿಯನ್ನು ಬದಲಾಯಿಸದೆ ಉಳಿಸಿಕೊಂಡಿದ್ದ. ದೇವರು ಒಳ್ಳೆಯವರನ್ನು ಬೇಗ ಕರೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದೀಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮನ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ರಾಕೇಶ್ ಪೂಜಾರಿ ಜೊತೆಗೆ ಇರೋ ಫೋಟೋವನ್ನು ಶೇರ್ ಮಾಡಿಕೊಂಡ ನಿರೂಪಕಿ ಅನುಶ್ರೀ ಹೀಗೆ ಬರೆದುಕೊಂಡಿದ್ದಾರೆ.
View this post on Instagram
ರಾಕೇಶ ...
ನಗು ಆರೋಗ್ಯವಾಗಿರುತ್ತೀಯ ...
ನಗಿಸು ಸುಖವಾಗಿರುತ್ತೀಯ...
ಇದೆಲ್ಲ ಸುಳ್ಳು ಅಲ್ವಾ ಮಾರಾಯ !!!
ನಿಂಗೆ ಹೇಗೆ ಹೇಳಲಿ ವಿದಾಯ !!!
ಒಂದಂತು ಸತ್ಯ ರಾಕಿ
ನಿನ್ನ ಮುಗುಳ್ನಗು ಅಮರ...
ಹೋಗಿ ಬಾ ತಮ್ಮ
ರಾಕೇಶ್ ಪೂಜಾರಿ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ, ಕಾಮಿಡಿ ಕಿಲಾಡಿ ತಂಡ, ಆತ್ಮೀಯ ಸ್ನೇಹಿತರು ಅಂತಿಮ ದರ್ಶನಕ್ಕಾಗಿ ಉಡುಪಿಗೆ ಆಗಮಿಸಿದ್ದರು. ಸದ್ಯ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ತಾಯಿ ಹಾಗೂ ತಂಗಿ ಕಷ್ಟ ಹೇಳತೀರದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ