Advertisment

‘ಮದ್ವೆ ಆಗೋ ಸಿಹಿ ಸುದ್ದಿ ಕೊಟ್ರೆ ಬಕೆಟ್ ಅಂತೀರಾ’.. ಲೈವ್​ನಲ್ಲಿ ಆ್ಯಂಕರ್ ಅನುಶ್ರೀ ಕೆಂಡಾಮಂಡಲ; ಕಾರಣವೇನು?

author-image
Veena Gangani
Updated On
‘ಮದ್ವೆ ಆಗೋ ಸಿಹಿ ಸುದ್ದಿ ಕೊಟ್ರೆ ಬಕೆಟ್ ಅಂತೀರಾ’.. ಲೈವ್​ನಲ್ಲಿ ಆ್ಯಂಕರ್ ಅನುಶ್ರೀ ಕೆಂಡಾಮಂಡಲ; ಕಾರಣವೇನು?
Advertisment
  • ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಅನುಶ್ರೀ ಅಂದ್ರೆ ಅಚ್ಚು ಮೆಚ್ಚು
  • ಇನ್​ಸ್ಟಾ​ ಲೈವ್​ನಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ ನಿರೂಪಕಿ ಅನುಶ್ರೀ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಿರೂಪಕಿ ಅನುಶ್ರೀ ಈ ವಿಡಿಯೋ

ಌಂಕರ್​ ಅನುಶ್ರೀ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಌಂಕರ್ ಅನುಶ್ರೀ ಎಂದರೆ ಅಚ್ಚು ಮೆಚ್ಚು. ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಅವರು ಒಂದಲ್ಲಾ ಒಂದು ವಿಚಾರದ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಚಟಪಟ ಅಂತ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

Advertisment

publive-image

ಇದನ್ನೂ ಓದಿ:ಆಹಾ.. ನನ್ನ ಮದುವೆಯಂತೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆ್ಯಂಕರ್ ಅನುಶ್ರೀ; ಹುಡುಗ ಯಾರು?

ಹೀಗೆ ಆಗಾಗ ತಮ್ಮ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಬಂದು ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಾ ಇರುತ್ತಾರೆ. ಆದರೆ ಈ ಭಾರೀ ಇನ್​ಸ್ಟಾ ಲೈವ್​ನಲ್ಲಿ ಬಂದ ನಿರೂಪಕಿ ಅನುಶ್ರೀ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಲೈವ್​ನಲ್ಲಿ ಅಭಿಮಾನಿಯೊಬ್ಬರು ಯಾವಾಗಲೂ ಖುಷಿಯಾಗಿರಿ ಅಂತ ಹೇಳಿದ್ದರು. ಅವರ ಕಾಮೆಂಟ್​ಗೆ ಪ್ರತಿಕ್ರಿಯೆ ನೀಡಿದ ಅವರು, ಬೇರೆಯವರನ್ನು ಖುಷಿಯಾಗಿರಿ ಅಂತ ಹೇಳುವುದು ತುಂಬಾನೇ ಮುಖ್ಯ. ಇತ್ತೀಚೆಗೆ ಸ್ಪಲ್ಪ ನಾವು ಖುಷಿಯಾಗಿದ್ದರೆ ಓವರ್​ ಌಕ್ಟಿಂಗ್ ಅಂತೀರಾ. ಯಾರದ್ದೋ ಕಷ್ಟ ಕೇಳಿ ಬೇಸರದಲ್ಲಿ ಕಣ್ಣೀರು ಹಾಕಿದ್ರೆ ಅದಕ್ಕೂ ಓವರ್​ ಌಕ್ಟಿಂಗ್ ಅಂತೀರಾ. ಯಾರನ್ನಾದರೂ ನೋಡಿ ಆಶ್ಚರ್ಯ ಪಟ್ಟರೆ ಓವರ್​ ಌಕ್ಟಿಂಗ್ ಅಂತೀರಾ. ಯಾರ ಸಾಧನೆಯನ್ನು ಹೊಗಳಿದರೇ ಅದಕ್ಕೂ ಬಕೆಟ್ ಅಂತ ಹೇಳ್ತಿರಾ. ಈಗಿನ ಕಾಲದಲ್ಲಿ ನಮ್ಮ ಒಂದೊಂದು ಭಾವನೆಗಳಿಗೂ ಒಂದೊಂದು ರೀತಿಯಲ್ಲಿ ಹೆಸರನ್ನು ಕೊಡ್ತೀರಾ. 10 ಜನ ಹೇಳುವ ಆ ಮಾತಿಗಿಂತ ಕೋಟ್ಯಾಂತರ ಕಣ್ಣುಗಳು ನಮ್ಮನ್ನು ನೋಡಿದಾಗ ಹರಸುವಂತ ಭಾವನೆಗಳು ತುಂಬ ಮುಖ್ಯವಾಗುತ್ತೆ ಅಂತ ಹೇಳಿಕೊಂಡಿದ್ದಾರೆ.

Advertisment


ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಆ ವಿಡಿಯೋದಲ್ಲಿ ಅಭಿಮಾನಿಗಳು ಮೇಡಂ ನೀವು ಮದುವೆ ಯಾವಾಗ ಆಗ್ತೀರಾ, ನಿಮ್ಮ ಜೊತೆ ಒಂದು ಫೋಟೋ ಬೇಕು, ನಿಮ್ಮ ಯ್ಯೂಟೂಬ್ ಚಾನೆಲ್​ನಲ್ಲಿ ಸಂದರ್ಶನ ಮಾಡಿ ಹೀಗೆ ಹತ್ತು ಹಲವಾರು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆ ನಟಿ ನಿರೂಪಕಿ ಅನುಶ್ರೀ ಅವರು ಉತ್ತರ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment