ಲವ್ಲೀ ಲಂಡನ್​ನಲ್ಲಿ ಬೀಡು ಬಿಟ್ಟ ಸ್ಟಾರ್​ ನಿರೂಪಕಿ ಅನುಶ್ರೀ; ಜೊತೆಗೆ ಯಾರೆಲ್ಲಾ ಇದ್ದಾರೆ?

author-image
Veena Gangani
Updated On
ಲವ್ಲೀ ಲಂಡನ್​ನಲ್ಲಿ ಬೀಡು ಬಿಟ್ಟ ಸ್ಟಾರ್​ ನಿರೂಪಕಿ ಅನುಶ್ರೀ; ಜೊತೆಗೆ ಯಾರೆಲ್ಲಾ ಇದ್ದಾರೆ?
Advertisment
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ ಈ ಸ್ಟಾರ್ ನಿರೂಪಕಿ
  • ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ಸ್ಟಾರ್ ಇವರು
  • ಲಂಡನ್​ನಲ್ಲಿ ಕಾಲ ಕಳೆಯುತ್ತಿದ್ದಾರೆ ಕನ್ನಡದ ಸ್ಟಾರ್​ ನಿರೂಪಕಿ ಅನುಶ್ರೀ

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಅವರು ಒಂದಲ್ಲಾ ಒಂದು ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ.

ನ್ನೂ ಓದಿ: ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ.. ವೈದ್ಯ ಕುಟುಂಬವೇ ಮಾಡಿಕೊಂಡ ಅನಾಹುತ; ಕಾರಣವೇನು?

publive-image

ಇದೀಗ ಕನ್ನಡದ ಸ್ಟಾರ್​ ನಿರೂಪಕಿ ಅನುಶ್ರೀ ಸದ್ಯ ಲಂಡನ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೌದು, ಲಂಡನ್‌ ಬ್ರಿಡ್ಜ್‌ ಮೇಲೆ ನಿಂತುಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ ನಿರೂಪಕಿ ಅನುಶ್ರೀ.

publive-image

ಇದೇ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಌಂಕರ್ ಅನುಶ್ರೀ ಅವರು ಲಂಡನ್‌ ಟೂರ್‌ನಲ್ಲಿದ್ದಾರೆ. ಇವರ ಜೊತೆಗೆ ಗಾಯಕಿ ಐಶ್ವರ್ಯಾ ರಂಗರಾಜ್‌, ಗಾಯಕ ವಿಜಯ ಪ್ರಕಾಶ್‌ ಹಾಗೂ ಗಾಯಕ ನಿಖಿಲ್ ಪಾರ್ಥಸಾರಥಿ ಕೂಡ ಇದ್ದರು.

publive-image

ಇನ್ನೂ, ಅನುಶ್ರೀ ಅವರು ಲಂಡನ್‌ಗೆ ಹೋಗಿದ್ದು ಕನ್ನಡಿಗರು ಆಯೋಜಿಸಿದ ವಿಜಯಗಾನದ ಕಾರ್ಯಕ್ರಮಕ್ಕೆ ಜೊತೆಗೆ ಗಾಯಕ ವಿಜಯ ಪ್ರಕಾಶ್‌ ಭಾಗಿಯಾಗಿದ್ದರು. ಲಂಡನ್​ನಲ್ಲಿ ಶೋಗಾಗಿ ಹೋಗಿದ್ದ ಅನುಶ್ರೀ ಅವರು ಲವ್ಲೀ ಲಂಡನ್‌, ಸುಂದರ ತಾಣ, ಅಲ್ಲೊಂದು ಸುಂದರ ಕ್ಷಣ ಅಂತ ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

publive-image

ಸದ್ಯ ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಕೂಡ ಆಗುತ್ತಿವೆ. ಇದೇ ಫೋಟೋಸ್ ನೋಡಿ ಅಭಿಮಾನಿಗಳು ಸೂಪರ್​ ಅಕ್ಕ, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment