newsfirstkannada.com

ಅಪರ್ಣಾ ತಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದ ಮೂರು ಸೂತ್ರಗಳು.. ಆ ಮುತ್ತಿನಂಥ ಮಾತುಗಳು ಏನು ಗೊತ್ತಾ..?

Share :

Published July 12, 2024 at 11:34am

Update July 12, 2024 at 12:03pm

    ಅಪರ್ಣಾ ಈ ಹಿಂದೆ ಆಡಿದ ಬದುಕಿನ ಮಾತುಗಳು ವೈರಲ್

    ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅಪರ್ಣಾ ನಿನ್ನೆ ವಿಧಿವಶ

    ನಿರೂಪಕಿಯಾಗಿ, ನಟಿಯಾಗಿ ಮಿಂಚಿ ಮರೆಯಾದ ಅಪರ್ಣಾ

ಆಂಗ್ಲ ಭಾಷೆ ಬಳಸದೇ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡ್ತಾ.. ಅಚ್ಚ ಕನ್ನಡದಲ್ಲೇ ಮಾತನಾಡುತ್ತಾ ಭಾಷಾಭಿಮಾನ ಮೆರೆಯುತ್ತಾ.. ಮಜಾ ಟಾಕೀಸ್​ನಲ್ಲಿ ನಕ್ಕು ನಗಿಸಿ.. ಬಿಗ್​ ಬಾಸ್​​ನಲ್ಲಿ ಭಾಗಿಯಾಗಿ ಜನರನ್ನ ಮನರಂಜಿಸಿ.. ಚಂದನವನದ ಚಂದದ ಮಾತುಗಾರ್ತಿ.. ಕನ್ನಡ ದೂರದರ್ಶನದಲ್ಲಿ ಮಿಂಚಿ.. ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದ ಕನ್ನಡನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ನಿಧನರಾಗಿದ್ದಾರೆ.

ಅವರ ಅಗಲಿಕೆಯ ಸುದ್ದಿ ಕೋಟ್ಯಾಂತರ ಕನ್ನಡಿಗರಿಗೆ ತುಂಬಾ ನೋವು ತಂದಿದೆ. ಅಪರ್ಣಾ ಅವರನ್ನು ಸ್ಮರಿಸಿ ಹಿಂದೆ ಅವರು ಮಾತನಾಡಿದ್ದ ಹಳೆಯ ವಿಡಿಯೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ.

ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ

ಈ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಅಪರ್ಣಾ.. ಎಲ್ಲರ ಬೆನ್ನ ಹಿಂದೆಯೂ ಒಂದು ಕತೆ ಇರುತ್ತದೆ ಮತ್ತು ಕಷ್ಟ ಇರುತ್ತದೆ. ಆ ಕಷ್ಟವನ್ನು ಮೆಟ್ಟಿನಿಂತು, ಎದುರಿಸಿ, ಅದು (ಕಷ್ಟ) ಇಲ್ಲದ ಹಾಗೆ ನಕ್ಕು, ಬದುಕನ್ನು ಸವಾಲ್ ಆಗಿ ತೆಗೆದುಕೊಳ್ಳೋದೇ ಜೀವನ. ಇಷ್ಟು ವರ್ಷದಲ್ಲಿ ನಾನು ಕಂಡುಕೊಂಡ ಮೂರ್ನಾಲ್ಕು ಸತ್ಯಗಳು ಇವೆ.

ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..

ಅವು ಯಾವುದೆಂದರೆ.. ಮೊದಲನೇಯದು ಜೀವನ ಒಂದು ನಿತ್ಯೋತ್ಸವ. ಹಕ್ಕಿ ಹಾಡೋದು ಒಂದು ಸಂಭ್ರಮ. ಹೂವು ಅರಳುವುದು ಒಂದು ಸಂಭ್ರಮ ಅದನ್ನು ನೋಡುವ ದೃಷ್ಟಿ ನಮಗೆ ಬರಬೇಕು. ಇಷ್ಟು ಕೋಟಿ ಜನ ಇದ್ದಾರೆ ಅಂದರೆ ಅಷ್ಟು ಕೋಟಿ ಮನಸ್ಸುಗಳು ಇರುತ್ತದೆ. ಅಷ್ಟೊಂದು ಜನರ ಆಸೆ, ಆಕಾಂಕ್ಷೆಗಳು ಪರ, ವಿರೋಧ ನಿಲುವುಗಳು ಇರುತ್ತದೆ. ಅದು ನಿಮಗೆ ಸರಿ ಹೋದರೆ ಒಪ್ಪಿಕೊಳ್ಳಿ, ಇಲ್ಲದಿದ್ದರೆ ಬಿಟ್ಟುಬಿಡಿ. ಅದನ್ನು ಬಿಟ್ಹಾಕಿ.. ಮೂರನೇಯದು ನಗೋಣ. ಇದಿಷ್ಟು ನನ್ನ ಜೀವನದಲ್ಲಿ ಕಲಿತುಕೊಂಡೆ ಎಂದಿದ್ದರು. ಅಪರ್ಣಾ ಆಡಿರುವ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಇಂದು ಟ್ರೆಂಡಿಂಗ್​​ನಲ್ಲಿವೆ.

ಇದನ್ನೂ ಓದಿ:ಮಿಂಚಿ ಮರೆಯಾದ ಅಪರ್ಣಾ.. ಕಂಬನಿ ಮಿಡಿದ ಗಣ್ಯರು.. ಅಪರೂಪದ ನಿರೂಪಕಿ ಬಗ್ಗೆ ಏನಂದ್ರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪರ್ಣಾ ತಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದ ಮೂರು ಸೂತ್ರಗಳು.. ಆ ಮುತ್ತಿನಂಥ ಮಾತುಗಳು ಏನು ಗೊತ್ತಾ..?

https://newsfirstlive.com/wp-content/uploads/2024/07/APARNA-3-1.jpg

Load More