ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ನಟಿ.. ರಶ್ಮಿ ಆರೋಗ್ಯಕ್ಕೆ ಏನಾಯ್ತು?

author-image
Veena Gangani
Updated On
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ನಟಿ.. ರಶ್ಮಿ ಆರೋಗ್ಯಕ್ಕೆ ಏನಾಯ್ತು?
Advertisment
  • ಈ ಹಿಂದೆ ನಟಿ ರಶ್ಮಿ ಗೌತಮ್​ ಅವರು ಬಳಲುತ್ತಿದ್ದ ಕಾಯಿಲೆ ಯಾವುದು?
  • ಹೊಸ ಹೊಸ ಫೋಟೋಗಳ ಮೂಲಕ ಸಖತ್​ ಸುದ್ದಿಯಲ್ಲಿ ಇರುತ್ತಾರೆ ನಿರೂಪಕಿ
  • ಸಾಮಾಜಿಕ ಜಾಲತಾಣದಲ್ಲಿ ಸಖತ್​ ಌಕ್ಟೀವ್​ ಆಗಿದ್ದಾರೆ ನಟಿ ರಶ್ಮಿ ಗೌತಮ್

ಕಿರುತೆರೆಯ ಅತ್ಯಂತ ಜನಪ್ರಿಯ ನಿರೂಪಕಿ, ನಟಿ ರಶ್ಮಿ ಗೌತಮ್ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಹೌದು, ಟಿವಿ ಶೋಗಳಲ್ಲಿ ನಿರೂಪಕಿಯಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಸಿನಿಮಾಗಳಲ್ಲೂ ನಟಿಸಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್​ ಌಕ್ಟೀವ್​ ಆಗಿರೋ ರಶ್ಮಿ ಗೌತಮ್ ಆಗಾಗ ಹೊಸ ಹೊಸ ಫೋಟೋಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಜೊತೆಗೆ ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಸುದ್ದಿಯಲ್ಲಿ ಇರುತ್ತಾರೆ.

publive-image

ಇದನ್ನೂ ಓದಿ:ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಅಸಲಿಗೆ ಆಗಿದ್ದೇನು?

ಸದ್ಯ ರಶ್ಮಿ ಅವರು ಶ್ರೀದೇವಿ ಡ್ರಾಮಾ ಕಂಪನಿಗಾಗಿ ಜಬರ್ದಸ್ತ್‌ನ ಎರಡು ಸಂಚಿಕೆಗಳನ್ನು ನಿರೂಪಕರಾಗಿದ್ದಾರೆ. ಮೂರು ಶೋಗಳನ್ನು ಮಾಡುತ್ತಿದ್ದಾರೆ. ಆದರೆ ಈ ನಡುವೆ ರಶ್ಮಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅವರು ಅಪರೂಪದ ಕಾಯಿಲೆ ಇದೆಯಂತೆ. ಈ ಹಿಂದೆ ರಶ್ಮಿ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ರಶ್ಮಿ ಅವರು 'Rheumatoid arthritis'ಯಿಂದ ಬಳಲುತ್ತಿದ್ದಾರಂತೆ. ಇದು ಆಟೋಇಮ್ಯೂನ್ ಕಾಯಿಲೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ Rheumatoid ಸಮಸ್ಯೆಯಿಂದ ರಶ್ಮಿ ಅವರು ಏಕಾಏಕಿ ತೂಕ ಹೆಚ್ಚಾಗುವುದು ಅಥವಾ ತೂಕ ಕಳೆದುಕೊಳ್ಳುತ್ತಾರಂತೆ. ಇದಕ್ಕೂ ಮೊದಲು ರಶ್ಮಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಮಾತಾಡುತ್ತಿದ್ದ ವೇಳೆ ಈ ಬಗ್ಗೆ ರಿವೀಲ್ ಮಾಡಿದ್ದರು.

publive-image

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಹಿಳೆಯೊಬ್ಬರು ತಮ್ಮ ಪತಿ ಕೂಡ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಅದಕ್ಕೆ ಚಿಕಿತ್ಸೆ ಏನು ಎಂದು ಕೇಳಿದರು. ಈ ಸಮಸ್ಯೆಗೆ ಯಾವುದೇ ಚಿಕಿತ್ಸೆ ಇಲ್ಲ ಮತ್ತು ಜೀವನಶೈಲಿಯ ಬದಲಾವಣೆಯಿಂದ ಮಾತ್ರ ಫಲಿತಾಂಶ ಬರುತ್ತದೆ ಎಂದು ರಶ್ಮಿ ಹೇಳಿದ್ದಾರೆ. ಈ ಸಮಸ್ಯೆ ಇರುವವರು ಆಯುರ್ವೇದ ಔಷಧಗಳನ್ನು ಬಳಸಬೇಕು. ಈ ಸಮಸ್ಯೆಯಿಂದ ಪಾರಾಗಲು ಸ್ಟೀರಾಯ್ಡ್ ತೆಗೆದುಕೊಂಡೆ ಎಂದೂ ಹೇಳಿದ್ದಾರೆ. ತನಗೆ 12 ವರ್ಷ ಇದ್ದಾಗಲೇ ನೋವಿನ ಚುಚ್ಚುಮದ್ದು ಪಡೆದ ಪರಿಣಾಮ ಕಾಯಿಲೆಯ ತೀವ್ರತೆ ಕಡಿಮೆ ಆಯ್ತು. ಆ ನಂತರ ರಶ್ಮಿಯ ತಾಯಿ ಈ ಕಾಯಿಲೆಯಿಂದ ಮುಕ್ತಿ ಪಡೆಯಲು ಒಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ. ಹೇಗೆ ಬ್ಯಾಲೆನ್ಸ್ ಮಾಡಿಕೊಂಡು ಬಂದೆ ಎಂದು ರಶ್ಮಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment