newsfirstkannada.com

Statue of Social Justice: ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ ಸಿಎಂ ಜಗನ್

Share :

Published January 20, 2024 at 8:42am

  ಸಾಮಾಜಿಕ ನ್ಯಾಯದ ಪ್ರತಿಮೆಗೆ ಎಷ್ಟು ಕೋಟಿ ತಗುಲಿದೆ

  125 ಅಡಿ ಎತ್ತರ ಇದೆ ಡಾ. ಬಿ.ಆರ್​.ಅಂಬೇಡ್ಕರ್ ಪ್ರತಿಮೆ

  ಆಂಧ್ರದ ವಿಜಯವಾಡದ ಸ್ವರಾಜ್ ಮೈದಾನದಲ್ಲಿ ಸ್ಟ್ಯಾಚು

ಆಂಧ್ರ ಪ್ರದೇಶದ ವಿಜಯವಾಡದ ಸ್ವರಾಜ್ ಮೈದಾನದಲ್ಲಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ವಿಶ್ವದ ಅತಿ ಎತ್ತರದ ಡಾ. ಬಿ.ಆರ್​.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಸಾಮಾಜಿಕ ನ್ಯಾಯದ ಪ್ರತಿಮೆ ಇದಾಗಿದ್ದು 125 ಅಡಿ ಎತ್ತರವಾಗಿದೆ.

ಪ್ರತಿಮೆ ನಿರ್ಮಾಣದ ಯೋಜನೆಗೆ ಒಟ್ಟು 404.35 ಕೋಟಿ ರೂಪಾಯಿ ವೆಚ್ಚವಾಗಿದೆ. ಪ್ರತಿಮೆಯ ಸುತ್ತಮುತ್ತ 18.81 ಎಕರೆ ಭೂಮಿಯಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಪ್ರತಿಮೆ ಅನಾವರಣದ ವೇಳೆ ಆಕರ್ಷಕ ಸಿಡಿಮದ್ದುಗಳನ್ನು ಸಿಡಿಸಲಾಯಿತು.

ಇದು ದೇಶದ ಸಂವಿಧಾನ ಸಂಸ್ಥಾಪಕನ ಡಾ. ಬಿ.ಆರ್. ಅಂಬೇಡ್ಕರ್​ ಅವರ ಬೃಹತ್ ಪ್ರತಿಮೆ ಆಗಿದೆ. ಜಗತ್ತಿನಲ್ಲಿ ಅವರ ಇಷ್ಟು ಎತ್ತರ ಪ್ರತಿಮೆ ಇನ್ನೊಂದು ಇಲ್ಲ ಎಂದು ಆಂಧ್ರ ಸರ್ಕಾರ ಹೇಳಿದೆ. ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯದ ಸಂಕೇತವಾಗಿ ಈ ಪ್ರತಿಮೆ ನಿಲ್ಲಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Statue of Social Justice: ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ ಸಿಎಂ ಜಗನ್

https://newsfirstlive.com/wp-content/uploads/2024/01/BR-Ambedkar.jpg

Load More