/newsfirstlive-kannada/media/post_attachments/wp-content/uploads/2025/04/COW.jpg)
ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಹಸುವಿಗೆ ಹೈಕೋರ್ಟ್ನ ನ್ಯಾಯಮೂರ್ತಿಗಳು ಚಿಕಿತ್ಸೆ ಕೊಡಿಸಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.
ಆಗಿದ್ದೇನು..?
ಆಂಧ್ರ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ರಾಮಕೃಷ್ಣ ಪ್ರಸಾದ್ ಅವರು ಏಪ್ರಿಲ್ 14 ರಂದು ಕುಟುಂಬದ ಜೊತೆ ಗುಂಟೂರಿಗೆ ಬರುತ್ತಿದ್ದರು. ಎಟುಕೂರು ರಸ್ತೆಯಲ್ಲಿ ಹಸುವೊಂದು ಅಪಘಾತಕ್ಕೆ ಸಿಲುಕಿ ಬಳಲುತ್ತಿರುವುದು ಅವರ ಕಣ್ಣಿಗೆ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಾಮಕೃಷ್ಣ ಪ್ರಸಾದ್ ತಕ್ಷಣ ಕಾರನ್ನು ನಿಲ್ಲಿಸಿ ಹಸುವಿನ ಬಳಿಗೆ ಹೋಗಿದ್ದಾರೆ.
ಅಪರಿಚಿತ ವಾಹನ ಗುದ್ದಿದ ರಭಸಕ್ಕೆ ಹಸುವಿನ ಎಡಗಾಲು ಮುರಿದಿತ್ತು. ಇದನ್ನು ಗಮನಿಸಿದ ನ್ಯಾಯಮೂರ್ತಿಗಳು ಸಂಚಾರಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಹಸುವನ್ನು ಚಿಕಿತ್ಸೆಗಾಗಿ ಗುಂಟೂರು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಅಂತೆಯೇ ಕಾನ್‌ಸ್ಟೆಬಲ್‌ಗಳು ಹಸುವನ್ನು ಗುಂಟೂರಿನ ಆಸ್ಪತ್ರೆಗೆ ಸಾಗಿಸಿದರು. ಅಲ್ಲದೇ ಅಲ್ಲಿನ ಪಶುವೈದ್ಯರಿಗೂ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ನ್ಯಾಯಮೂರ್ತಿಗಳು ಸುಮ್ಮನಾಗಲಿಲ್ಲ. ಹಸುವಿಗೆ ಹೇಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನೋಡಲು ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರ ಬಳಿ ಹಸುವಿನ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ.
ಇದನ್ನೂ ಓದಿ: ಬಡ ಜನರ ಚಾಂಪಿಯನ್.. ಪೋಪ್ ಫ್ರಾನ್ಸಿಸ್ ಸರಳ ಜೀವನ ಶೈಲಿ ಹೇಗಿತ್ತು ಗೊತ್ತಾ?
ಪಶುಸಂಗೋಪನಾ ಇಲಾಖೆಯ ಜಿಲ್ಲಾ ಅಧಿಕಾರಿ ನರಸಿಂಹ ರಾವ್ ಮಾರ್ಗದರ್ಶನದಲ್ಲಿ ಖ್ಯಾತ ಶಸ್ತ್ರಚಿಕಿತ್ಸಕ ನಾಗೇಶ್ವರ ರಾವ್ ಹಸುವಿನ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೃತಕ ಕಾಲನ್ನು ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಗೆ ಹೋಗಿರುವ ನ್ಯಾಯಮೂರ್ತಿಗಳು ಹಸು ಚೇತರಿಸಿಕೊಳ್ಳುತ್ತಿರೋದನ್ನು ನೋಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಹಸುವಿಗೆ ತಿನ್ನಲು ಬಾಳೆ ಹಣ್ಣು ನೀಡಿದ್ದಾರೆ. ಪ್ರಸ್ತುತ ಹಸು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದೆ.
ಇದನ್ನೂ ಓದಿ: ಪೃಥ್ವಿ ಭಟ್ ಮದುವೆ ವಿವಾದ.. ಅಪ್ಪನ ಆರೋಪಕ್ಕೆ ಮಗಳಿಂದ ಉತ್ತರ.. ಏನಂದ್ರು ಗಾಯಕಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ