/newsfirstlive-kannada/media/post_attachments/wp-content/uploads/2025/04/Anusha-and-Gyaneshwar-1.jpg)
ಅಲ್ಲಿ ಸತ್ತಿರೋದು ತಾಯಿ ಮಾತ್ರವಲ್ಲ ಗರ್ಭದಲ್ಲಿದ್ದ ಮಗು ಕೂಡ ಭೂಮಿಗೆ ಬರುವ ಮೊದಲೇ ಸಾವನ್ನಪ್ಪಿದೆ. ಪ್ರೀತಿ ಅಂತಾ ಬಯಸಿ ಬಂದವಳು ಶವವಾಗಿದ್ರೆ.. ಹೆಗಲ ಮೇಲೆ ಹಾಕಿ ಮುದ್ದಾಡ ಬೇಕಿದ್ದ ಮಗುವನ್ನ ಜಗತ್ತಿಗೆ ಬಾರದಂತೆ ತಂದೆಯೇ ಕೊಂದಿ ಮುಗಿಸಿದ್ದಾನೆ.
ಇವಳು ಪ್ರೀತಿಸಿದಳು.. ಅವನು ಜೀವ ತೆಗೆದ
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಿಎಂ ಪಾಲೆಮ್‌ನ ಉಡಾ ಕಾಲೋನಿಯಲ್ಲಿ ನಿನ್ನೆ ಜ್ಞಾನೇಶ್ವರ್ ಎಂಬಾತ ತನ್ನ 8 ತಿಂಗಳ ಗರ್ಭಿಣಿಯಾಗಿದ್ದ 27 ವರ್ಷದ ಪತ್ನಿ ಅನುಷಾಳನ್ನ ಕೊಂದಿದ್ದಾನೆ. ಅನುಷಾ ಮತ್ತು ಆಕೆಯ ಪತಿ ಜ್ಞಾನೇಶ್ವರ್ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದರು. ಇದೇ ಭಾನುವಾರ ವೈದ್ಯರು ಅನುಷಾಳಿಗೆ ಹೆರಿಗೆಗೆ ಆಸ್ಪತ್ರೆಗೆ ಬರಲು ಸೂಚಿಸಿದ್ದರು.
ಜ್ಞಾನೇಶ್ವರ್ ಸೋಮವಾರ ಅಡ್ಮಿಟ್ ಆಗೋಣ ಎಂದು ಹಠ ಹಿಡಿದಿದ್ದ. ಇದೇ ವಿಚಾರಕ್ಕೆ ಜಗಳ ಹೆಚ್ಚಾಗಿ ಆತ ಆಕೆ ಕತ್ತು ಹಿಸುಕಿದ್ದು, ಇದರಿಂದಾಗಿ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಕತ್ತು ಹಿಸುಕಿದ ಬಳಿಕ, ಅನುಷಾ ಮನೆಯವರಿಗೆ ಫೋನ್ ಮಾಡಿ ಆಕೆಗೆ ಹುಷಾರಿಲ್ಲ ಎಂದು ಹೇಳಿದ್ದ. ತಕ್ಷಣ ಬಂದ ಆಕೆಯ ಪೋಷಕರು ಆಕೆಯನ್ನ ಆಸ್ಪತ್ರೆಗೆ ಸೇರಿಸಿದ್ರು. ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ: ITI ಪೂರ್ಣಗೊಳಿಸಿದ್ರೆ DRDO ಸಂಸ್ಥೆಯಲ್ಲಿ ಉದ್ಯೋಗ ಅವಕಾಶ.. ಕೂಡಲೇ ಅಪ್ಲೇ ಮಾಡಬಹುದು
ಈ ಬೆನ್ನಲ್ಲೇ ಜ್ಞಾನೇಶ್ವರ್ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನ ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.. ಪತ್ನಿಯನ್ನ ತಾನೇ ಕತ್ತು ಹಿಸುಕಿ ಕೊಂದಿದ್ದನ್ನ ಬಾಯ್ಬಿಟ್ಟಿದ್ದಾನೆ.
ನಾಟಕದ ಗಂಡ!
ಜ್ಞಾನೇಶ್ವರ್ ಈ ಮೊದಲು ಸಖತ್ ನಾಟಕವೊಂದನ್ನ ಆಡಿದ್ದನಂತೆ. ನನಗೆ ಕ್ಯಾನ್ಸರ್ ಇದೆ. ನಾನು 1 ವರ್ಷದಲ್ಲಿ ಸಾಯುತ್ತೇನೆ.. ನೀನು ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ.. ಅಪ್ಪ-ಅಮ್ಮನ ಜೊತೆ ಹೋಗು ಎಂದಿದ್ದನಂತೆ. ಆದರೆ, ಅನುಷಾ ನಿನ್ನೊಂದಿಗೆ ಇರುತ್ತೇನೆ ಎಂದು ಹೇಳಿ ಪ್ರೀತಿಸೋದನ್ನ ಮುಂದುವರೆಸಿದ್ದ್ದಳು. ಅದಾದ 6 ತಿಂಗಳ ನಂತರ, ಅವನು ಮತ್ತೊಂದು ನಾಟಕವನ್ನು ಪ್ರಾರಂಭಿಸಿದ್ದ. ನನ್ನ ಹೆತ್ತವರಿಗೆ ನಮ್ಮ ಮದುವೆ ಇಷ್ಟವಿಲ್ಲ, ಅವರು ನಿನ್ನನ್ನು ಮತ್ತು ನನ್ನನ್ನು ಬದುಕಲು ಬಿಡುವುದಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳೋಣ ಎಂದು ಕೇಳಿದ್ದ. ಆದರೆ ಅನುಷಾ ಅದಕ್ಕೆ ಒಪ್ಪಲಿಲ್ಲ.ಆಕೆಯನ್ನ ಬಿಟ್ಟು ತನ್ನ ಪೋಷಕರ ಬಳಿ ಹೋಗಲು ಜ್ಞಾನೇಶ್ವರ್ ನಿರ್ಧರಿಸಿದ್ದ. ಆದರೆ, ಇದರ ನಡುವೆ ಅನುಷಾ ಗರ್ಭಿಣಿಯಾಗಿದ್ದಳು.
ಏನೇ ಕಷ್ಟ ಬಂದ್ರೂ ನಿನ್ನೊಂದಿಗೆ ಇರ್ತೇನೆ ಅಂತಿದ್ದ ಪತ್ನಿಯನ್ನ ಪತಿಯೇ ಕೊಂದು ಬಿಟ್ಟಿದ್ದಾನೆ. ಅನುಷಾ ಮತ್ತು ಜ್ಞಾನೇಶ್ವರ್ 3 ವರ್ಷಗಳ ಹಿಂದೆ ಪ್ರೀತಿಯಲ್ಲಿ ಬಿದ್ದು, ಮನೆಯವರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹ ಮಾಡಿಕೊಂಡಿದ್ರು. ಆ ಪ್ರೀತಿಯೇ ಆಕೆಯನ್ನ ಸಾವಿನೂರಿಗೆ ಕರೆದುಕೊಂಡು ಹೋಗಿದೆ.
ಇದನ್ನೂ ಓದಿ: ಕನ್ನಡ ಡಿಜಿಟಲ್ ಮಾಧ್ಯಮ ಲೋಕದ ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ