newsfirstkannada.com

ಟೀಮ್​ ಇಂಡಿಯಾ ಸ್ಟಾರ್​​​ ಬ್ಯಾಟರ್​​ ಮೇಲೆ ರಾಜಕಾರಣಿ ಒತ್ತಡ; ನಾಯಕತ್ವ ಸ್ಥಾನಕ್ಕೆ ರಾಜೀನಾಮೆ

Share :

Published February 26, 2024 at 6:07pm

Update February 26, 2024 at 6:10pm

    ಟೀಮ್​ ಇಂಡಿಯಾದ ಬ್ಯಾಟರ್​ ಹನುಮ ವಿಹಾರಿಗೆ ಅವಮಾನ

    ಆಂಧ್ರ ಕ್ರಿಕೆಟ್​ ಅಸೋಸಿಯೇಷನ್​​ನಲ್ಲಿ ಭಾರೀ ರಾಜಕೀಯ..!

    ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ಹನುಮ ವಿಹಾರಿ?

ಇತ್ತೀಚೆಗೆ ಇಂದೋರ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್​​​ ಫೈನಲ್​​ನಲ್ಲಿ ಮಧ್ಯಪ್ರದೇಶದ ವಿರುದ್ಧ ಕ್ಯಾಪ್ಟನ್​ ಹನುಮ ವಿಹಾರಿ ನೇತೃತ್ವದ ಆಂಧ್ರ ಕ್ರಿಕೆಟ್​ ತಂಡವು ಹೀನಾಯ ಸೋಲು ಕಂಡಿತ್ತು. ಇದಾದ ಬೆನ್ನಲ್ಲೇ ಆಂಧ್ರ ಕ್ರಿಕೆಟ್​ ಅಸೋಸಿಯೇಷನ್​​ ಹನುಮ ವಿಹಾರಿ ವಿರುದ್ಧ ವಾಗ್ದಾಳಿ ನಡೆಸಿತ್ತು.

ಇನ್ನು, ಈ ಬೆಳವಣಿಗೆ ಬೆನ್ನಲ್ಲೇ ಬಂಗಾಳದ ವಿರುದ್ಧ ಸರಣಿ ಮಧ್ಯೆಯೇ ತನ್ನ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಅಷ್ಟೇ ಅಲ್ಲ ಕೇವಲ ಬ್ಯಾಟರ್​ ಆಗಿ ತಂಡದಲ್ಲಿ ಮುಂದುವರಿದರು. ಇದಾದ ಬಳಿಕ ಟ್ವೀಟ್​ ಮಾಡಿರುವ ಹನುಮ ವಿಹಾರಿ, ಉದ್ದೇಶಪೂರ್ವಕವಾಗಿ ನನ್ನನ್ನು ನಾಯಕತ್ವ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಇನ್ಮುಂದೆ ಆಂಧ್ರ ತಂಡದ ಪರ ಆಡುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಬರೆದುಕೊಂಡಿದ್ದಾರೆ. ಈ ಟ್ವೀಟ್​ ಭಾರತದ ಕ್ರೀಡಾ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ.

ಹನುಮ ವಿಹಾರಿ ಮಾಡಿದ ಟ್ವೀಟ್​​ನಲ್ಲೇನಿದೆ..?

ನಾನು ಬಂಗಾಳದ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಪ್ಟನ್​ ಆಗಿದ್ದೆ. ಮೈದಾನದಲ್ಲಿ ತಂಡದ ಸಹ ಆಟಗಾರನ ಮೇಲೆ ಕೂಗಾಡಿದೆ. ಇಷ್ಟಕ್ಕೆ ಸಹ ಆಟಗಾರ ತನ್ನ ತಂದೆಗೆ ದೂರು ನೀಡಿದ್ದಾನೆ. ಈ ಬೆನ್ನಲ್ಲೇ ತನ್ನ ತಂದೆ ರಾಜಕಾರಣಿ ಆದ ಕಾರಣ ಒತ್ತಡ ತಂದು ನನ್ನನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಕಳೆದ 7 ರಣಜಿ ಸೀಸನ್​ಗಳಲ್ಲಿ 5 ಬಾರಿ ನಾಕೌಟ್​​​ ಹಂತಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಭಾರತ ತಂಡದ ಪರ 16 ಟೆಸ್ಟ್​ ಆಡಿದ್ದೇನೆ. ತಂಡಕ್ಕಾಗಿ ಈ ಸೀರೀಸ್​ನಲ್ಲಿ ಆಡಿದೆ, ಅವಮಾನ ಮಾಡಿದ್ರೂ ಕ್ರಿಕೆಟ್​​ಗಾಗಿ ಗೌರವಿಸಿದೆ. ನಾನು ಇನ್ನು ಮುಂದೆ ಆಂಧ್ರದ ಪರ ಆಡುವುದಿಲ್ಲ ಎಂದು ನೋವಿನಲ್ಲೇ ಟ್ವೀಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾ ಸ್ಟಾರ್​​​ ಬ್ಯಾಟರ್​​ ಮೇಲೆ ರಾಜಕಾರಣಿ ಒತ್ತಡ; ನಾಯಕತ್ವ ಸ್ಥಾನಕ್ಕೆ ರಾಜೀನಾಮೆ

https://newsfirstlive.com/wp-content/uploads/2024/02/Hanuma-Vihari.jpg

Load More