newsfirstkannada.com

ಆಂಧ್ರ ಚುನಾವಣೆ; ಸಿಎಂ ಜಗನ್​​, ಪವನ್​ ಕಲ್ಯಾಣ್​​, ಚಂದ್ರಬಾಬು ನಾಯ್ಡು ಮೂವರಿಗೂ ಸೋಲಿನ ಭೀತಿ!

Share :

Published June 4, 2024 at 8:16am

    ಜಗನ್​ ಮೋಹನ್ ರೆಡ್ಡಿ ಮತ್ತೊಮ್ಮೆ ಆಂಧ್ರ ಪ್ರದೇಶದ ಸಿಎಂ ಆಗ್ತಾರಾ?

    ಮೇ 13ರಂದು 175 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ

    ಪವನ್ ಕಲ್ಯಾಣ್​ಗೆ ಪ್ರಬಲ ಪೈಪೋಟಿ ಕೊಟ್ಟಿರುವ ಮಹಿಳೆ ಯಾರು?

2024ರ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಅದರಂತೆ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಕೂಡ ಇಂದೇ ಪ್ರಕಟಗೊಳ್ಳಲಿದೆ. ಆಂಧ್ರ ಪ್ರದೇಶದಲ್ಲಿ ಮೇ 13ರಂದು 175 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಈ ಬಾರಿ ಆಂಧ್ರ ಹೈವೋಲ್ಟೇಜ್ ಮತದಾನಕ್ಕೆ ಸಾಕ್ಷಿಯಾಗಿತ್ತು. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿಯುತ್ತಾ ಎಂಬುದನ್ನು ಇನ್ನೇನು ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ.

ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಈ ಬಾರಿ ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಟಿಡಿಪಿ ಕೂಡ ಕೈಗೂಡಿಸಿದೆ. ಕಾಕಿನಾಡ ಜಿಲ್ಲೆಯ ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ಪವನ್​ ಸ್ಪರ್ಧೆಗೆ ಇಳಿದಿದ್ದಾರೆ. ಆದರೆ ಗೆಲುವು ಅಷ್ಟು ಸುಲಭವಿಲ್ಲ. ಏಕೆಂದರೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇದರಲ್ಲಿ ಜನಸೇನಾ, ಕಾಂಗ್ರೆಸ್​, ವೈಎಸ್​​ಆರ್​ಸಿಪಿ ನಡುವೆ ಪ್ರಬಲ ಪೈಪೋಟಿ ಇದೆ. ಹೀಗಾಗಿ ಕೊನೆ ಕ್ಷಣದವರೆಗೆ ಗೆಲುವು ಯಾರ ಪಾಲಾಗುತ್ತದೆ ಎಂದು ಹೇಳಲು ಅಸಾಧ್ಯವೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BREAKING: ಲೋಕಸಭಾ ಚುನಾವಣೆ: ಮತಎಣಿಕೆ ಕಾರ್ಯ ಆರಂಭ; ಮೈಸೂರಲ್ಲಿ ಬಿಜೆಪಿಗೆ ಮುನ್ನಡೆ

ಜನಸೇನಾದಿಂದ ಪವನ್​ ಕಲ್ಯಾಣ್ ಸ್ಪರ್ಧೆ ಮಾಡಿದ್ರೆ, ವೈಎಸ್​​ಆರ್​ಸಿಪಿ ಇಂದ ವಂಗ ಗೀತಾ ವಿಶ್ವನಾಥಮ್ ಅವರು ಸ್ಪರ್ಧೆಗೆ ಇಳಿದಿದ್ದಾರೆ. ಈ ಇಬ್ಬರ ನಡುವೆ ನೆಕ್​ ಟು ನೆಕ್ ಫೈಟ್ ಇದೆ ಎಂದು ಈಗಾಗಲೇ ಆಂಧ್ರದಲ್ಲಿ ಸುದ್ದಿಯಾಗಿದೆ. ಕಾಂಗ್ರೆಸ್​ನಿಂದ ಕಂದಿಪಾಟಿ ವೆಂಕಟ ಕೃಷ್ಣರಾವ್ ಹಾಗೂ ಬಿಎಸ್​ಪಿಯಿಂದ ಬುಲ್ಲಿರಾಜ್ ಪ್ರತ್ತಿಪಾಟಿ ಅಖಾಡದಲ್ಲಿ ಇದ್ದಾರೆ.

ಸಿಎಂ ಜಗನ್​ ಮೋಹನ್ ರೆಡ್ಡಿ ಅವರು ಪುಲಿವೆಂದುಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಕುಪ್ಪಂ ವಿಧಾನ ಸಭಾ ಕ್ಷೇತ್ರದಿಂದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸ್ಪರ್ಧೆ ಮಾಡಿದ್ದಾರೆ. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಮಂಗಳಗಿರಿ ವಿಧಾನ ಸಭಾ ಕ್ಷೇತ್ರದಿಂದ ಕಣದಲ್ಲಿ ಇದ್ದಾರೆ. ಜಗನ್​ ಮೋಹನ್ ರೆಡ್ಡಿ ಸಹೋದರಿ ವೈಎಸ್​ ಶರ್ಮಿಳಾ ರೆಡ್ಡಿ ಐಎನ್​ಸಿಯಿಂದ ಕಡಪ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಇನ್ನೇನು ಇಂದು ಸಂಜೆ ವೇಳೆಗೆ ಎಲ್ಲ ಫಲಿತಾಂಶವು ಅಂತಿಮವಾಗಿ ಗೊತ್ತಾಗಲಿದೆ. ಸಿಎಂ ಜಗನ್​, ಪವನ್​ ಕಲ್ಯಾಣ್​​, ಚಂದ್ರಬಾಬು ನಾಯ್ಡುಗೆ ಸೋಲಿನ ಭೀತಿ ಕಾಡುತ್ತಿದೆ. ಮೂರು ಕ್ಷೇತ್ರಗಳಲ್ಲೂ ಹಿತಶತ್ರುಗಳೇ ಸೋಲಿಸಲಿದ್ದಾರಾ? ಅನ್ನೋ ಅನುಮಾನ ಇದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರ ಚುನಾವಣೆ; ಸಿಎಂ ಜಗನ್​​, ಪವನ್​ ಕಲ್ಯಾಣ್​​, ಚಂದ್ರಬಾಬು ನಾಯ್ಡು ಮೂವರಿಗೂ ಸೋಲಿನ ಭೀತಿ!

https://newsfirstlive.com/wp-content/uploads/2024/06/AP_CM.jpg

Load More