ಆಂಧ್ರದಲ್ಲಿ ಸಿಎಂ ಜಗನ್​ಗೆ ಹಿನ್ನಡೆ.. ಪವನ್​ ಕಲ್ಯಾಣ್, ಚಂದ್ರಬಾಬು ನಾಯ್ಡು ಕಡೆಗೆ ವಿಜಯ ಲಕ್ಷ್ಮಿ?

author-image
Bheemappa
Updated On
ಆಂಧ್ರದಲ್ಲಿ ಸಿಎಂ ಜಗನ್​ಗೆ ಹಿನ್ನಡೆ.. ಪವನ್​ ಕಲ್ಯಾಣ್, ಚಂದ್ರಬಾಬು ನಾಯ್ಡು ಕಡೆಗೆ ವಿಜಯ ಲಕ್ಷ್ಮಿ?
Advertisment
  • ಟಿಡಿಪಿ ಎಷ್ಟು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಗೊತ್ತಾ?
  • YSRCP ಕೇವಲ ಇಷ್ಟು ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ
  • ಪವನ್​ ಕಲ್ಯಾಣ್​ಗೂ ಒಲಿದ ಅದೃಷ್ಟ, ಕೈ ಹಿಡಿದ ಮತದಾರ

ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆಗೂ ಮತದಾನ ನಡೆಸಲಾಗಿತ್ತು. ಸದ್ಯ ಜಗನ್​ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಭಾರೀ ಹಿನ್ನಡೆಯಲ್ಲಿದ್ದು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಟಿಡಿಪಿ, ಬಿಜೆಪಿ, ಜೆಎಸ್​ಪಿ ಪಕ್ಷಗಳ ಮೈತ್ರಿ ವರ್ಕೌಟ್ ಆಗಿದೆ ಎಂದು ಹೇಳಲಾಗುತ್ತಿದೆ.

ಸದ್ಯದ ಮಾಹಿತಿಯಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷವು 130 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇದರ ಮಿತ್ರ ಪಕ್ಷಗಳಾದ ಪವನ್ ಕಲ್ಯಾಣ್ ಅವರ ಜನಸೇನಾ 19 ಸ್ಥಾನಗಳಲ್ಲಿ ಹಾಗೂ ಬಿಜೆಪಿ 7 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ. ಆದರೆ ಆಡಳಿತ ಸರ್ಕಾರ YSRCP ಕೇವಲ 22 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಇದರಿಂದ ಟಿಡಿಪಿ, ಬಿಜೆಪಿ, ಜೆಎಸ್​ಪಿ ಮೈತ್ರಿ ಬಹುತೇಕವಾಗಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಚಿಕ್ಕೋಡಿಯಲ್ಲಿ ಬಿಜೆಪಿಗೆ ಬಿಗ್ ಶಾಕ್​.. ಮುನ್ನಡೆ ಕಾಯ್ದುಕೊಂಡ ಪ್ರಿಯಾಂಕಾ ಜಾರಕಿಹೊಳಿ

publive-image

ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 13 ರಂದು ವೋಟಿಂಗ್ ನಡೆಸಲಾಗಿತ್ತು. ಅಖಾಡದಲ್ಲಿ ಆಡಳಿತ ಪಕ್ಷ YSRCP, ಕಾಂಗ್ರೆಸ್​​ ಸೇರಿ ಇಂಡಿಯಾ ಒಕ್ಕೂಟ, ಟಿಡಿಪಿ, ಜೆಎನ್​ಪಿ, ಬಿಜೆಪಿ ಮೈತ್ರಿ ಸ್ಪರ್ಧೆ ಮಾಡಿದ್ದವು. ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ YSRCP ಅಭ್ಯರ್ಥಿಗಳು ರಾಜ್ಯದಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಕೇವಲ 22 ಜನರು ಮಾತ್ರ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದರಲ್ಲಿ ಸಿಎಂ ಜಗನ್ ಅವರು ಪುಲಿವೆಂದುಲು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಇತ್ತ ಚಂದ್ರಬಾಬು ನಾಯ್ಡು, ಪವನ್​ ಕಲ್ಯಾಣ್ ಕೂಡ ಲೀಡಿಂಗ್​ನಲ್ಲಿದ್ದು ಗೆಲುವಿನ ಭರವಸೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment