newsfirstkannada.com

ಅಬ್ಬಾ.. 18 ಕಿ.ಮೀ​ ಬೈಕ್ ಸವಾರನ ಶವ ಎಳೆದೊಯ್ದ ಕಾರು ಚಾಲಕ; ಆಮೇಲೇನಾಯ್ತು?

Share :

Published April 16, 2024 at 5:09pm

  ಚಲಿಸುತ್ತಿದ್ದ ಟೊಯೊಟಾ ಇನ್ನೋವಾ ಕಾರಿನ ಮೇಲೆ ಬೈಕ್​ ಸವಾರನ ಶವ ಪತ್ತೆ

  ಇನ್ನೋವಾ ಮೇಲೆ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

  ಕಾರು ಬೈಕ್​ ಮಧ್ಯೆ ಮುಖಾಮುಖಿ ಡಿಕ್ಕಿ ಪರಿಣಾಮ ಸ್ಥಳದಲ್ಲೇ ಸವಾರ ಸಾವು

ಅಮರಾವತಿ: ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಬೈಕ್‌ ಸವಾರನನ್ನು ಎಳೆದೊಯ್ದು ಘಟನೆ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಯರ್ರಿಸ್ವಾಮಿ ಮೃತ ಬೈಕ್​ ಸವಾರ.

ಇದನ್ನೂ ಓದಿ: ಆ ಸಿನಿಮಾಕ್ಕಾಗಿ ಮನೆ ಮಾರಿ ಸಾಲ ತೀರಿಸಿದ್ರು.. ದ್ವಾರಕೀಶ್ ಸೋಲಿನ ಕಾರಣ ಬಿಚ್ಚಿಟ್ಟ ಬಾಮೈದ; ಹೇಳಿದ್ದೇನು?

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಸವಾರ ಕಾರಿನ ಬಾನೆಟ್‌ ಮೇಲಿದ್ದ ಬಿದ್ದಿದ್ದಾನೆ. ಆದರೆ ಇದನ್ನು ಗಮನಿಸದ ಕಾರು ಚಾಲಕ 18 ಕಿಲೋ. ಮೀಟರ್​ನಷ್ಟು ದೂರಕ್ಕೆ ಎಳೆದುಕೊಂಡು ಹೋಗಿದ್ದಾನೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪರಿಣಾಮ ಸ್ಥಳದಲ್ಲೇ ಬೈಕ್​ ಸವಾರ ಸಾವನ್ನಪ್ಪಿದ್ದಾನೆ. ಚಲಿಸುತ್ತಿದ್ದ ಟೊಯೊಟಾ ಇನ್ನೋವಾ ಕಾರಿನ ಮೇಲೆ ಶವ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತಕ್ಷಣವೇ ದಾವಿಸಿದ ಅಧಿಕಾರಿಗಳು ವಾಹನವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತ ಬೈಕ್​​ ಸವಾರರನ್ನು ಯರ್ರಿಸ್ವಾಮಿ ಎಂದು ಗುರುತಿಸಿದ್ದಾರೆ. ಕೂಡಲೇ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ಹಿರಿಯ ಪೊಲೀಸ್​ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. 18 ಕಿ.ಮೀ​ ಬೈಕ್ ಸವಾರನ ಶವ ಎಳೆದೊಯ್ದ ಕಾರು ಚಾಲಕ; ಆಮೇಲೇನಾಯ್ತು?

https://newsfirstlive.com/wp-content/uploads/2024/04/accident3.jpg

Load More